ಎಲೆಕ್ಟ್ರಿಕ್ ಆಟೋ ಖರೀದಿಸಿದ ಬಾಲಿವುಡ್ ನಟಿ..!!

ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ದುಬಾರಿ ವಾಹನಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಕಾರ್ ಕ್ರೇಜ್ ಅಂತೂ ಬಾಲಿವುಡ್ ಕಲಾವಿದರಿಗೆ ಹೆಚ್ಚಾಗಿರುತ್ತೆ. ಆದ್ರೆ ಈ ವಿಚಾರದಲ್ಲಿ ವಿಭಿನ್ನವಾಗಿ ಕಾಣುವ ನಟಿ ಗುಲ್ ಪನಾಗ್ ಚಲನಚಿತ್ರ ನಿರ್ಮಾಣ ವ್ಯವಹಾರದಲ್ಲಿದ್ದು ಆಟೋಮೊಬೈಲ್ ಕ್ಷೇತ್ರದಲ್ಲಿ ವಿಭಿನ್ನ ಆಸಕ್ತಿ ಹೊಂದಿದ್ದಾರೆ.ಅವರು ತಮ್ಮ ವಾಹನಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ರೀತಿಯಲ್ಲಿ ಜನಪ್ರಿಯವಾಗಿದ್ದಾರೆ. ಇದೀಗ ಅವರು ಹೊಸ ಮಹೀಂದ್ರ ಜೋರ್ ಗ್ರಾಂಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು 3.50 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ ಖರೀದಿಸಿದ್ದಾರೆ.ಮಹೀಂದ್ರಾ ಎಲೆಕ್ಟ್ರಿಕ್‌ನ ಸಿಇಒ ಸುಮನ್ ಮಿಶ್ರಾ ಅವರು, ನಟಿ ಎಲೆಕ್ಟ್ರಿಕ್ ಆಟೋ ಖರೀದಿಸಿರುವ ಫೋಟೋ ಹಂಚಿಕೊಂಡು ‘ನಮ್ಮ ಮಹೀಂದ್ರಾ ಕುಟುಂಬಕ್ಕೆ ನಟಿ ಗುಲ್ ಪನಾಗ್ ಅವರಿಗೆ ಸುಸ್ವಾಗತ ಕೋರುತ್ತಿದ್ದೇವೆ. ನೀವು ನಮ್ಮ ಗ್ರಾಹಕರಾಗಿರುವುದಕ್ಕೆ ನಾವು ತುಂಬಾ ರೋಮಾಂಚನಗೊಂಡಿದ್ದೇವೆ. ಈ ಮೂಲಕ ಎಲೆಕ್ಟ್ರಿಕ್ ವಾಹನದೊಂದಿಗೆ ನೀವು ಏನು ಸಾಧಿಸುತ್ತೀರಿ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.ಹೊಸ ಎಲೆಕ್ಟ್ರಿಕ್ ಆಟೋ ರಿಕ್ಷಾದೊಂದಿಗೆ ನಟಿ ಗುಲ್ ಪನಾಗ್ ಚಾಲನೆ ಮಾಡುತ್ತಿರುವ ವಿಡಿಯೋನ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.ಇದಕ್ಕೂ ಮುನ್ನ ನಟಿ ತನ್ನ ಮದುವೆಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಬಳಸಿ ಸುದ್ದಿ ಮಾಡಿದ್ದರು. ಇದಲ್ಲದೆ, ಅವರು ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇ ಪಿಕಪ್ ಟ್ರಕ್ ಅನ್ನು ಹೊಂದಿರುವ ಏಕೈಕ ನಟಿಯಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ರೈತ ಸಮುದಾಯಕ್ಕೆ ಬಿಗ್ ಶಾಕ್...!!!

Sat Dec 31 , 2022
ಪಹಣಿ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ರೈತರಿಗೆ ಶಾಕ್ ನೀಡಿದೆ. 15 ರೂಪಾಯಿ ಇದ್ದ ಪಹಣಿ ದರವನ್ನು 25 ರೂ.ಗೆ ಹೆಚ್ಚಳ ಮಾಡಲಾಗಿದೆ.ಸಾಲ, ಆಸ್ತಿ ಮಾರಾಟ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಪಹಣಿ ಅಗತ್ಯವಾಗಿದ್ದು, ರೈತರು 25 ರೂಪಾಯಿ ನೀಡಿ ಪಹಣಿ ಪಡೆದುಕೊಳ್ಳಬೇಕಿದೆ.ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪಹಣಿ ಕಡ್ಡಾಯಗೊಳಿಸಲಾಗಿದ್ದು, ಸಬ್ಸಿಡಿಗೆ ಅರ್ಜಿ ಸಲ್ಲಿಕೆ, ಆಸ್ತಿ ಮಾರಾಟ, ಬ್ಯಾಂಕುಗಳಲ್ಲಿ ಸಾಲ ಸೇರಿದಂತೆ ಹಲವು ಕಾರಣಕ್ಕೆ ಪಹಣಿ ಅಗತ್ಯವಾಗಿದ್ದು, […]

Advertisement

Wordpress Social Share Plugin powered by Ultimatelysocial