BOLLYWOOD:ಉದಯೋನ್ಮುಖ ನಟಿಯ ಜತೆ ಹೃತಿಕ್​ ರೋಷನ್​;

ಉದಯೋನ್ಮುಖ ನಟಿಯ ಜತೆ ಹೃತಿಕ್​ ರೋಷನ್​ ಲವ್ವಿಡವ್ವಿ?​ ಲೀಕ್​ ಆಯ್ತು ಫೋಟೋ

ನಟ ಹೃತಿಕ್​ ರೋಷನ್​ ಅವರು ವೈಯಕ್ತಿಕ ವಿಚಾರವನ್ನು ಹೆಚ್ಚು ಗುಟ್ಟಾಗಿ ಇಡೋಕೆ ನೋಡುತ್ತಾರೆ.

ಏನೇ ಇದ್ದರೂ ಅವರು ಮಾಧ್ಯಮದ ಮುಂದೆ ಬಾಯ್ಬಿಡುವುದಿಲ್ಲ. ಇದು ಇಂದು ನಿನ್ನೆಯ ವಿಚಾರ ಅಲ್ಲ. ಹೃತಿಕ್​ ಈ ಮೊದಲಿನಿಂದಲೂ ಇದೇ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ದೊಡ್ಡ ಸೆಲೆಬ್ರಿಟಿ. ಎಲ್ಲಾ ವಿಚಾರವನ್ನು ಗುಟ್ಟಾಗಿ ಇಡೋಕೆ ಸಾಧ್ಯವಿಲ್ಲ. ಕೆಲ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಲೀಕ್​ ಆಗಿ ಬಿಡುತ್ತವೆ. ಹೃತಿಕ್​ ಮನೆಯಿಂದ ಹೊರಬಿದ್ದರೆ ಸಾಕು ಪಾಪರಾಜಿಗಳು ಅವರನ್ನು ಹಿಂಬಾಲಿಸುತ್ತಾರೆ. ಈಗ ಹೃತಿಕ್​ ಪ್ರೀತಿ ಪ್ರೇಮದ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಯುವ ನಟಿಯ ಜತೆಗೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳನ್ನು ಟ್ರಿಪ್​ಗೆ ಕರೆದುಕೊಂಡು ಹೋಗಿದ್ದಾರೆ. ಈಗ ಹೃತಿಕ್​ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿ ಆಗಿದೆ. ಹಾಗಿದ್ದರೆ ಯಾರ ಜತೆ? ಯುವ ನಟಿ ಸಬಾ ಆಜಾದ್ ಜತೆಗೆ.

‘ಹೃತಿಕ್​ ರೋಷನ್​ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡಲು ಆದ್ಯತೆ ನೀಡುತ್ತಾರೆ. ಅವರು ಸದ್ಯ ಉದಯೋನ್ಮುಖ ನಟಿ ಸಬಾ ಆಜಾದ್ ಅವರ ಜತೆ ಸುತ್ತಾಡುತ್ತಿದ್ದಾರೆ. ಈಗ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಶಾರುಖ್​ ಗೆಳೆಯ ಹೇಳಿರುವುದಾಗಿ ಬಾಲಿವುಡ್​ ಹಂಗಾಮ ವರದಿ ಮಾಡಿದೆ.

ಸಬಾ ಆಜಾದ್​ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅವರು ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದಾರೆ. ಸಾಕಷ್ಟು ಮ್ಯೂಸಿಕ್​ ವಿಡಿಯೋ​ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಅವರು ಹೃತಿಕ್​ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ‘ವಿಕ್ರಮ್​ ವೇದ’ ಸಿನಿಮಾದಲ್ಲಿ ಹೃತಿಕ್​ ಬ್ಯುಸಿ ಆಗಿದ್ದಾರೆ. ತಮಿಳಲ್ಲಿ ತೆರೆಗೆ ಬಂದ ‘ವಿಕ್ರಮ್​ ವೇದ’ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ವಿಕ್ರಮ್​ ಆಗಿ ಮಾಧವನ್ ಕಾಣಿಸಿಕೊಂಡರೆ, ವೇದ ಆಗಿ ವಿಜಯ್​ ಸೇತುಪತಿ ಮಿಂಚಿದ್ದರು. ಇವರ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ಸೂಪರ್ ಹಿಟ್​ ಆದ ಬೆನ್ನಲ್ಲೇ ಅದನ್ನು ರಿಮೇಕ್​ ಮಾಡಲು ಬಾಲಿವುಡ್ ​ ಮಂದಿ ಮುಂದೆ ಬಂದಿದ್ದಾರೆ. ಹೃತಿಕ್​ ರೋಷನ್​ ಈ ಸಿನಿಮಾದಲ್ಲಿ ವೇದ ಎಂಬ ಗ್ಯಾಂಗ್​​ಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​ಡೇ ಅಂಗವಾಗಿ ಜನವರಿ 10ರಂದು ಲುಕ್​ ರಿಲೀಸ್​ ಆಗಿತ್ತು. ಈ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಷಟ್ಟಿಲ ಏಕಾದಶಿ 2022 ಪಾರಣ ಸಮಯ ಮತ್ತು ವ್ರತ ಕಥಾ: ನಿಯಮಗಳನ್ನು ಪರಿಶೀಲಿಸಿ

Sat Jan 29 , 2022
ಪೌಷ್ (ಅಮಾವಾಸ್ಯೆಂತ್ ಪ್ರಕಾರ) ಅಥವಾ ಮಾಘ (ಪೂರ್ಣಿಮಂತ್), ಕೃಷ್ಣ ಪಕ್ಷ (ಕ್ಷೀಣಿಸುತ್ತಿರುವ ಅಥವಾ ಚಂದ್ರನ ಹದಿನೈದು ದಿನಗಳ ಗಾಢವಾದ ಹಂತ) ಏಕಾದಶಿ (ಹನ್ನೊಂದನೇ ದಿನ) ಷಟ್ಟಿಲ ಏಕಾದಶಿ. ಭಕ್ತರು ಶ್ರೀ ವಿಷ್ಣುವಿನ ಪೂಜೆಯನ್ನು ಮಾಡುತ್ತಾರೆ, ವ್ರತ ಕಥೆಯನ್ನು ಓದುತ್ತಾರೆ ಮತ್ತು ಮರುದಿನ ತಮ್ಮ ಉಪವಾಸವನ್ನು ಮುರಿಯುತ್ತಾರೆ (ಅಂದರೆ. ದ್ವಾದಶಿ ತಿಥಿ). ಷಟ್ಟಿಲ ಏಕಾದಶಿ ವ್ರತ ಕಥಾ, ಪಾರಣ ಸಮಯ ಮತ್ತು ಉಪವಾಸ ಮುರಿಯುವ ನಿಯಮಗಳನ್ನು ತಿಳಿಯಲು ಮುಂದೆ ಓದಿ. ಷಟ್ಟಿಲ […]

Advertisement

Wordpress Social Share Plugin powered by Ultimatelysocial