ನಾಡಿನ ಜನರ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಬೊಮ್ಮಾಯಿ

ಬೆಂಗಳೂರು : ಇಂದು ಬೆಳಗ್ಗೆ 10.45 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಎರಡನೇ ಬಜೆಟ್ ಮಂಡಿಸಲಿದ್ದು, ಜನಪ್ರಿಯ ಯೋಜನೆಗಳನ್ನು ಘೋಷಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ ಬಜೆಟ್ ಮಂಡನೆಗೂ ಮುನ್ನ ಬೆಂಗೂರಿನ ಶ್ರೀಂಕಂಠೇಶ್ವರ ದೇವಾಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಇಂದು ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜನಪ್ರಿಯ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಬಜೆಟ್ ಮಂಡನೆ ಗೂಮುನ್ನ ದೇವಾಲಯಕ್ಕೆ ತೆರಳಿರುವ ಸಿಎಂ ನಾಡಿನ ಜನರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ.ಬೆಂಗಳೂರಿನ ಆರ್.ಟಿ.ನಗರದ ಶ್ರೀಕಂಠೇಶ್ವರ ದೇವಾಲಯ ಹಾಗೂ ಸೆವನ್ ಮಿನಿಸ್ಟರ್ ಕ್ವಾಟರ್ಸ್ ಬಳಿಯ ಆಂಜನೇಯ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.. ಬಳಿಕ 9.45 ಕ್ಕೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಸಭೆ ನಡೆಸಲಿದ್ದು, ಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮತಿ ಪಡೆಯಲಿದ್ದಾರೆ.

ಸಿಎಂ ಬೊಮ್ಮಾಯಿ ಮಂಡಿಸಲಿರುವ ಕೊನೆಯ ಬಜೆಟ್ ನ ನಿರೀಕ್ಷೆಗಳು

ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಗೌರವ ಧನ ನೀಡುವ ಯೋಜನೆ ಘೋಷಿಸುವ ಸಾಧ್ಯತೆ.

ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿದರದ ಸಾಲದ ಮಿತಿ 3 ಲಕ್ಷ ರೂ. ನಿಂದ 5 ಲಕ್ಷ ರು.ಗೆ ಹೆಚ್ಚಳ ಸಾಧ್ಯತೆ

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಹು ದಿನಗಳ ಕನಸಾದ ಸಂಬಳ ಏರಿಕೆ ಸಾಧ್ಯತೆ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು 7ನೇ ವೇತನ ಆಯೋಗ ನೀಡುವ ವರದಿ ಅನುಷ್ಠಾನದ ಭರವಸೆ

ಕುಲಕಸುಬು ಆಧಾರಿತ ವೃತ್ತಿ ಮಾಡುವವರಿಗೆ ಪ್ರೋತ್ಸಾಹಧನ, ವಿವಿಧ ಸಮುದಾಯಗಳಿಗೆ ಪ್ರತ್ಯೇಕ ನಿಗಮ ನಿರೀಕ್ಷೆ

ಅಡಿಕೆ ರೋಗ ತಡೆಯುವಿಕೆಗೆ ಬಜೆಟ್​ನಲ್ಲಿ ವಿಶೇಷ ಅನುದಾನ.

ಬೆಂಗಳೂರಿನಲ್ಲಿ ಪುನೀತ್​ ಸ್ಮಾರಕ ಘೋಷಣೆ ಬಹುತೇಕ ಖಚಿತ.

ಬೆಂಗಳೂರು ನಗರದಲ್ಲಿ ಸಮಗ್ರ ರಾಜಕಾಲುವೆ ಪುನರ್​ ನಿರ್ಮಾಣ.

ಐಐಎಸ್​ಸಿ ಸೇರಿ ಇತರೆ ವರದಿ ಆಧರಿಸಿ ವಿಶೇಷ ಮಾಸ್ಟರ್ ಪ್ಲಾನ್ .

ರೈತರ ಪರವಾಗಿ ವಿಶೇಷ ಬಜೆಟ್ ಮಂಡನೆ.

ಕೃಷಿ ಅಲ್ಲದೇ ಇತರೆ ಕಸುಬುದಾರರಿಗೆ ಕಾಯಕ ಯೋಜನೆ.

ಹೊಸ ಪದ್ಧತಿಯ ಗೋಡೌನ್​ಗಳ ನಿರ್ಮಾಣ ಸಾಧ್ಯತೆ.

ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡುವ ಸಾಧ್ಯತೆ.

ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆ.

ಏತ ನೀರಾವರಿಗಳಿಗೆ ಹೆಚ್ಚಿನ ಅನುದಾನ ಘೋಷಣೆ ಸಾಧ್ಯತೆ.

ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಪ್ರಸ್ತಾಪ ಸಾಧ್ಯತೆ.

ನೀತಿ ಸಂಹಿತೆ ಜಾರಿಗೆ ಮುನ್ನವೇ ವರದಿ ಪಡೆದು ವೇತನ ಹೆಚ್ಚಳ ಸಾಧ್ಯತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಲೆಜೆಂಡ್ ರಾಜ್​ ಕಪೂರ್ಅ ವರ ಬಂಗಲೆಯನ್ನು ಗೋದ್ರೆಜ್ ಪ್ರಾಪರ್ಟೀಸ್ ವಶಪಡಿಸಿಕೊಂಡಿದೆ.

Fri Feb 17 , 2023
ಬಾಲಿವುಡ್  ಲೆಜೆಂಡ್ ರಾಜ್​ ಕಪೂರ್ಅ ವರ ಬಂಗಲೆಯನ್ನು ಗೋದ್ರೆಜ್ ಪ್ರಾಪರ್ಟೀಸ್  ವಶಪಡಿಸಿಕೊಂಡಿದೆ. ಗೋದ್ರೆಜ್ ಗ್ರೂಪ್‌ನ ರಿಯಲ್ ಎಸ್ಟೇಟ್ ಶಾಖೆಯಾಗಿರುವ ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್, ಪ್ರೀಮಿಯಂ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಚೆಂಬೂರಿನಲ್ಲಿರುವ ರಾಜ್ ಕಪೂರ್ ಅವರ ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅನೌನ್ಸ್ ಮಾಡಿದೆ. ಈ ಸೈಟ್ ಮುಂಬೈನ  ಚೆಂಬೂರ್‌ನ ಡಿಯೋನಾರ್ ಫಾರ್ಮ್ ರಸ್ತೆಯಲ್ಲಿದೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್  ಪಕ್ಕದಲ್ಲಿರುವ ಈ ಪ್ರಾಪರ್ಟಿ ಚೆಂಬೂರಿನ ಅತ್ಯಂತ ಪ್ರೀಮಿಯಂ ವಸತಿ ಲೇಔಟ್​ಗಳಲ್ಲಿ […]

Advertisement

Wordpress Social Share Plugin powered by Ultimatelysocial