High BP: ಹೀಗೆ ಮಾಡಿದ್ರೆ ಅಧಿಕ ರಕ್ತದೊತ್ತಡ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ

ಅಧಿಕ ರಕ್ತದೊತ್ತಡ (High Blood Pressure) ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ (No symptoms). ಆದರೆ ಹೃದಯಾಘಾತ (Heart Attack), ಮೆದುಳಿನ ಪಾಶ್ರ್ವವಾಯು (Brain Stroke) ಮತ್ತು ಮೂತ್ರ ಪಿಂಡದ ಕಾಯಿಲೆಗಳು (Kidney Ailments) ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು.
ಅಧಿಕ ರಕ್ತದೊತ್ತಡ ಅಥವಾ ಅತೀ ಒತ್ತಡವು , ರಕ್ತದ ಒತ್ತಡವು ತೀವ್ರ ಮಟ್ಟಕ್ಕೆ ಏರುವಂತಹ ಒಂದು ಸ್ಥಿತಿಯಾಗಿದೆ. ಈ ಅಪಾಯಕಾರಿ ಸ್ಥಿತಿಯು ವಿಶ್ವದಾದ್ಯಂತ ಕೋಟ್ಯಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಪತ್ತೆಯಾದ ಕೂಡಲೇ ಚಿಕಿತ್ಸೆ ಆರಂಭಿಸದಿದ್ದರೆ, ಅದು ಮಾರಣಾಂತಿಕ (Fatal) ಆಗುವ ಸಾಧ್ಯತೆ ಇದೆ. ಡಬ್ಲ್ಯೂಹೆಚ್‍ಓ ಪ್ರಕಾರ, 1990 ರಿಂದ ಅಧಿಕ ರಕ್ತದೊತ್ತಡ ಪ್ರಕರಣಗಳು ಹೆಚ್ಚಾಗಿವೆ.

120/80 ಎಂಎಂ ಹೆಚ್‍ಜಿ ವ್ಯಾಪ್ತಿಯೊಳಗಿನ ರಕ್ತದೊತ್ತಡವು ಸಾಮಾನ್ಯವೆಂದು ಪರಿಗಣಿಸಲ್ಪಡುತ್ತದೆ. ಒಂದು ವೇಳೆ ಅದು 130/80 ಎಂಎಂ ಹೆಚ್‍ಜಿ ಅಥವಾ ಹೆಚ್ಚಿದ್ದರೆ,ನಿಮ್ಮ ರಕ್ತದೊತ್ತಡವು ವಿಸ್ತರಿಸಿದೆ ಎಂದು ಪರಿಗಣಿಸಲಾಗುತ್ತದೆ. ಔಷಧಿಗಳ ಹೊರತಾಗಿ, ಜೀವನ ಶೈಲಿಯಲ್ಲಿನ ಬದಲಾವಣೆಗಳು ರಕ್ತದೊತ್ತಡ ಪ್ರಮಾಣವನ್ನು ದೀರ್ಘ ಕಾಲದ ವರೆಗೆ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡಬಲ್ಲವು. ನಿಮ್ಮ ಪ್ರೀತಿಪಾತ್ರರು ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆ ಕ್ರಮಗಳು ಯಾವುವೆಂದರೆ;

ನಿಯಮಿತ ವ್ಯಾಯಾಮ
ಎಲ್ಲಾ ವಯೋಮಾನದವರಿಗೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಮಂದಿಗೆ ನಿಯಮಿತ ವ್ಯಾಯಾಮ ಅತ್ಯಗತ್ಯ, ದೈಹಿಕ ವ್ಯಾಯಾಮ ಹೃದಯಕ್ಕೆ ಶಕ್ತಿ ನೀಡುತ್ತದೆ. ಬಲಿಷ್ಟ ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡಬಲ್ಲದು, ಆ ಮೂಲಕ ಅಪಧಮನಿಗಳ ಮೇಲೆ ಒತ್ತಡವನ್ನು ಕಡಿಮೆ ಮಾಡಬಲ್ಲದು.

ಧೂಮಪಾನ ಮತ್ತು ಮದ್ಯಪಾನ ಕಡಿಮೆ ಮಾಡಿ
ಧೂಮಪಾನ ಮತ್ತು ಮದ್ಯಪಾನ ಪ್ರತಿಯೊಬ್ಬರ ಪಾಲಿಗೆ ಅನಾರೋಗ್ಯಕರ.ಅದು ರಕ್ತದೊತ್ತಡದ ಪ್ರಮಾಣ ಮತ್ತು ಹೃದಯ ಬಡಿತದಲ್ಲಿ ಗಮನಾರ್ಹ ಏರಿಕೆ ಉಂಟು ಮಾಡುತ್ತದೆ. ಕೆಟ್ಟ ಅಭ್ಯಾಸವನ್ನು ಬಿಡುವುದು ಕಷ್ಟ, ಆದರೆ ಅದನ್ನು ಶಾಶ್ವತವಾಗಿ ತ್ಯಜಿಸುವುದು ಒಳ್ಳೆಯದು.

ಯೋಗಾಸನ ಅಭ್ಯಾಸ ಮಾಡಿ
ಅಧಿಕ ರಕ್ತದೊತ್ತಡವನ್ನು ಹೆಚ್ಚು ಮಾಡುವುದರಲ್ಲಿ ಒತ್ತಡದ ಪಾಲು ಹೆಚ್ಚಿರುತ್ತದೆ. ಒಳ್ಳೆಯ ನಿದ್ರೆ ಮತ್ತು ಒತ್ತಡವನ್ನು ನಿವಾರಣೆ ಮಾಡಿಕೊಳ್ಳವುದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಅತ್ಯಂತ ಅಗತ್ಯ. ನೀವು ಯೋಗ ಅಥವಾ ಧ್ಯಾನ ಮಾಡಲು ಆರಂಭಿಸಿದರೆ, ಅದು ನಿಮ್ಮ ರಕ್ತದೊತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲ, ಮಾನಸಿಕ ಆರೋಗ್ಯದಲ್ಲಿ ಕೂಡ ಸುಧಾರಣೆ ತರುತ್ತದೆ.

ಸೋಡಿಯಂ ಸೇವನೆ ಕಡಿಮೆ ಇರಲಿ
ಅಧಿಕ ಒತ್ತಡದಿಂದ ಬಳಲುತ್ತಿರುವ ರೋಗಿಗಳು ಸಂಸ್ಕರಿಸಿದ ಆಹಾರವನ್ನು ತಿನ್ನಬಾರದು. ಅವು ಸಂಸ್ಕರಿತ ಕಾರ್ಬೊಹೈಡ್ರೆಟ್‍ಗಳನ್ನು ಹೊಂದಿರುತ್ತವೆ ಮಾತ್ರವಲ್ಲ, ಚಿಪ್ಸ್ ಮತ್ತು ಇತರ ತಿನಿಸುಗಳು ಹೆಚ್ಚುವರಿ ಉಪ್ಪನ್ನು ಹೊಂದಿರುತ್ತವೆ, ಹಾಗೂ ಅದು ಅಧಿಕ ರಕ್ತದೊತ್ತಡದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡುವುದರಿಂದ , ಸಂಕೀರ್ಣ ಸಕ್ಕರೆ ಮತ್ತು ಕೊಬ್ಬನ್ನು ಕಡಿಮೆ ಸೇವಿಸಲು ಸಹಾಯ ಮಾಡುತ್ತದೆ.

ಪೊಟಾಶಿಯಂ ಸೇವನೆ ಹೆಚ್ಚಿಸಿ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪೊಟಾಶಿಯಂ ಅಗತ್ಯ ಪೋಷಕಾಂಶವಾಗಿದೆ, ಏಕೆಂದರೆ ಅದು ಹೆಚ್ಚುವರಿ ಸೋಡಿಯಂನ್ನು ತೊಡೆದು ಹಾಕಲು ಸಹಕರಿಸುತ್ತದೆ. ಆಹಾರದಲ್ಲಿ ಪೊಟಾಶಿಯಂ ಇರುವ ಆಹಾರಗಳ ಸೇವನೆಯಿಂದ ರಕ್ತನಾಳಗಳ ಮೇಲೆ ಒತ್ತಡ ಕಡಿಮೆ ಆಗುತ್ತದೆ. ಆಲೂಗಡ್ಡೆ , ಬಾಳೆ ಹಣ್ಣು, ಅವಕಾಡೋ, ಆಯಪ್ರಿಕಾಟ್ಸ್ ಮತ್ತು ಹಾಲು ಖನಿಜವನ್ನು ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಬೂಸ್ಟರ್ ಡೋಸ್' ಪಡೆಯಲು ನಿಯಮ ರೂಪಿಸಿದ ಕೇಂದ್ರ ಸರ್ಕಾರ: 2, 3ನೇ ಡೋಸ್ ಮಧ್ಯೆ 9 ತಿಂಗಳ ಕಾಲಾವಧಿ ನಿಗದಿ

Mon Dec 27 , 2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 15 ರಿಂದ 18 ವರ್ಷದವರೆಗಿನ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ಆರಂಭಿಸೋದಾಗಿ ತಿಳಿಸಿದ್ದರು. ಅಲ್ಲದೇ 60 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್ ( Vaccine Booster Dose ) ನೀಡೋದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಬೂಸ್ಟರ್ ಡೋಸ್ ನಿಡೋದಕ್ಕೆ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. 2 ಮತ್ತು 3ನೇ ಡೋಸ್ ನಡುವೆ 9 ತಿಂಗಳ ಕಾಲಾವಕಾಶವನ್ನು ( 9 months of 2nd dose […]

Advertisement

Wordpress Social Share Plugin powered by Ultimatelysocial