ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ.

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ.ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ ದೇಶಿ ವಧುವಿನ ಗೆಟಪ್‌ನಲ್ಲಿ ಮಿಂಚಿದ್ದಾರೆ.ಥೇಟ್ ಉತ್ತರ ಭಾರತೀಯ ವಧುವಿನಂತೆ ಕಾಣುವ ಈಕೆ, ಚುನ್ರಿ ಜೊತೆಗೆ ಕೆಂಪು ಲೆಹಂಗಾ ಸೆಟ್ ಹಾಗೂ ಅದಕ್ಕೆ ಹೋಲುವ ಸಾಂಪ್ರದಾಯಿಕ ಒಡವೆಗಳನ್ನು ಧರಿಸಿದ್ದಾರೆ.ತನ್ನ ಪತಿಯ ಕೈ ಹಿಡಿದು ಕುಳಿತ ಈ ಮದುಮಗಳು ಭಾರೀ ಮುದ್ದಾಗಿ ಕಾಣುತ್ತಿದ್ದಾರೆ. ಆಕೆಯ ಪತಿ ಕ್ರೀಂ ಬಣ್ಣದ ಶೇರ್ವಾನಿ ಸೆಟ್ ಹಾಗೂ ಕೆಂಪು ಟರ್ಬನ್‌ನಲ್ಲಿ ಮಿಂಚುತ್ತಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ತಾವೊಬ್ಬರೇ ಬಂದ ವೇಳೆ ತಮ್ಮ ಜೀವನ ಸಂಗಾತಿ ಇಲ್ಲಿಯವರೇ ಸಿಗಲಿದ್ದಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳುವ ರೆಯಾನಾನ್, “ಇಲ್ಲಿ ಕಳೆಯುವ ಅವಧಿಯ ಬಗ್ಗೆ ಬಹಳ ಆಸೆಗಳು ಹಾಗೂ ಕನಸುಗಳನ್ನು ಕಂಡಿದ್ದೆ. ಆದರೆ ನನ್ನ ಜೀವನ ಸಂಗಾತಿಯನ್ನು ಇಲ್ಲಿಯೇ ಭೇಟಿ ಮಾಡಿ ಮದುವೆಯಾಗುತ್ತೇನೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಭಾರತದಲ್ಲಿ ನನಗೆ ಅಂಥ ಸಂತಸ ಸಿಕ್ಕಿದೆ. ಇದು ನನಗೆ ಸದಾ ಮನೆಯಾಗಿರಲಿದೆ,” ಎಂದು ರಿಯಾನಾನ್ ಹೇಳಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಗ್ರಾಮ ರಕ್ಷಕರು ಬಸ್ ಪಲ್ಟಿಯಾಗಿ ಸಾವನ್ನಪ್ಪಿದ್ದು,

Sat Feb 19 , 2022
ನಬರಂಗಪುರ, ಫೆ.19 ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಗ್ರಾಮ ರಕ್ಷಕರು ಬಸ್ ಪಲ್ಟಿಯಾಗಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಪಾಪದಹಂಡಿ ಬ್ಲಾಕ್ನ ಮೋಕಿಯಾ ಸಮೀಪದ ಸೊರಿಸ್ಪದರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಫೆಬ್ರವರಿ 20 ರಂದು ನಡೆಯಲಿರುವ ಮೂರನೇ ಹಂತದ ಮತದಾನದಲ್ಲಿ ನಿಯೋಜನೆಗಾಗಿ 45 ಗ್ರಾಮ ರಕ್ಷಕರು ಅಥವಾ ಗ್ರಾಮ ರಾಖಿಗಳೊಂದಿಗೆ ಬಸ್ […]

Advertisement

Wordpress Social Share Plugin powered by Ultimatelysocial