ಬಜೆಟ್ 2022: ಭಾರತದಲ್ಲಿ ಇವಿ ಮಾರಾಟವನ್ನು ಹೆಚ್ಚಿಸಲು ಹೊಸ ಬ್ಯಾಟರಿ ವಿನಿಮಯ;

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದ್ದು, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್‌ ವಾಹನಗಳಿಗೆ ಒತ್ತು ನೀಡಲು ತ್ವರಿತಗತಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಬ್ಯಾಟರಿ ವಿನಿಮಯ ನೀತಿ ಪ್ರಕಟಿಸಿದ್ದಾರೆ.

ಭಾರತದಲ್ಲಿ ಇಂಧನ ಆಧಾರಿತ ವಾಹನಗಳನ್ನು ಖಡಿತಗೊಳಿಸುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಬ್ಯಾಟರಿ ವಿನಿಮಯ ನೀತಿಯು ಪ್ರಮುಖ ಅಂಶವಾಗಿದೆ. ತಂತ್ರಜ್ಞಾನವು ಬಳಕೆದಾರರಿಗೆ ತಮ್ಮ ವಾಹನಗಳನ್ನು ಕೆಲವೇ ನಿಮಿಷಗಳಲ್ಲಿ ರೀಚಾರ್ಜ್ ಮಾಡಲು ಮತ್ತು ಬ್ಯಾಟರಿ ರೇಂಜ್ ಆತಂಕವನ್ನು ತೊಡೆದುಹಾಕಲು ಸಾಕಷ್ಟು ಸಹಕಾರಿಯಾಗಲಿದೆ.

ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಸಾಮೂಹಿಕ ಅಳವಡಿಕೆಯಲ್ಲಿ ಹಲವಾರು ಸವಾಲುಗಳಿದ್ದು, ಹೊಸ ನೀತಿಯ ಮೂಲಕ ಭಾರತದಲ್ಲಿ ಇವಿ ಬಳಕೆಗೆ ಇರುವ ಸವಾಲುಗಳನ್ನು ಪರಿಹರಿಸಲು ಮತ್ತು ಇವಿ ವಾಹನ ಮಾರಾಟ ಹೆಚ್ಚಿಸಲು ಗುರಿಯನ್ನು ಹೊಂದಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ಬ್ಯಾಟರಿ ವಿನಿಮಯ ನೀತಿಯು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ತ್ವರಿತ ಗತಿಯಲ್ಲಿ ಬೆಳೆಯಲು ಮತ್ತು ಭಾರತದಲ್ಲಿ ಇವಿ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಹೊಸ ಬ್ಯಾಟರಿ ವಿನಿಮಯ ನೀತಿಯು ಬ್ಯಾಟರಿ ವಿನಿಮಯ ಯೋಜನೆ ಅನುಷ್ಠಾನವನ್ನು ಸುಲಭಗೊಳಿಸಲು ಮತ್ತು ದೇಶಾದ್ಯಂತ ಇವಿ ತಯಾರಕರಿಗೆ ಹೆಚ್ಚಿನ ಪ್ರೊತ್ಸಾಹ ನೀಡಲು ಸಹಾಯಕಾರಿಯಾಗಲಿದೆ. ಈ ಮೂಲಕ ಇವಿ ವ್ಯವಹಾರದ ದಕ್ಷತೆಯನ್ನು ಸುಧಾರಿಸಲು ಸರ್ಕಾರವು ಪರಸ್ಪರ ಕಾರ್ಯಸಾಧ್ಯತೆಯ ಮಾನದಂಡಗಳನ್ನು ರೂಪಿಸುತ್ತಿದ್ದು, ಸಂಪರ್ಕಿತ ತಂತ್ರಜ್ಞಾನದ ಮೂಲಕ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಕೇಂದ್ರೀಕೃತವಾಗಿಸುತ್ತದೆ.

ಇದರಿಂದಾಗಿ ಇವಿ ವಾಹನ ತಯಾರಕರು ಇವಿ ವಾಹನಗಳಲ್ಲಿ ಕಡ್ಡಾಯವಾಗಿ ಬ್ಯಾಟರಿ ವಿನಿಮಯ ತಂತ್ರಜ್ಞಾನಗಳನ್ನು ಬಳಸಲಿದ್ದು, ಇದರಿಂದ ಮಾಲೀಕರು ತಮ್ಮ ವಾಹನವನ್ನು ನಿಮಿಷಗಳಲ್ಲಿಯೇ ರೀಚಾರ್ಜ್ ಮಾಡಲು ಅನುಮತಿಸುತ್ತದೆ.

ಆದಾಗ್ಯೂ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾದ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯೀಕರಿಸಲು ಎಲ್ಲಾ ಇವಿ ವಾಹನ ತಯಾರಕರು ಒಂದೇ ಮಾನದಂಡವನ್ನು ಅನುಸರಿಸುವ ಅಗತ್ಯವಿದೆ. ಇದನ್ನು ಹೊಸ ಬ್ಯಾಟರಿ ವಿನಿಮಯ ನೀತಿಯಲ್ಲಿ ಉಲ್ಲೇಖಿಸಲಾಗಿದ್ದು, ಹೊಸ ನೀತಿಯಲ್ಲಿ ಮಾನದಂಡಗಳನ್ನು ಶೀಘ್ರದಲ್ಲಿಯೇ ಕಡ್ಡಾಯಗೊಳ್ಳಲಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ELECTRIC SCHOOTER:1 ಮಿಲಿಯನ್ ಇವಿ ಸ್ಕೂಟರ್ ಉತ್ಪಾದನಾ ಯೋಜನೆ;

Wed Feb 2 , 2022
ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಕಂಪನಿಯು ಭವಿಷ್ಯ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗುತ್ತಿದೆ. ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕ ತೆರೆಯಲು ಸಿದ್ದವಾಗಿದೆ. ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ […]

Advertisement

Wordpress Social Share Plugin powered by Ultimatelysocial