ಚಕ್ರವರ್ತಿ ಮಧುಸೂದನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು.

 

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರಾದ ಡಾ. ಚಕ್ರವರ್ತಿ ಮಧುಸೂದನ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಕೊಡುಗೆಗಳಿಗೆ ಹೆಸರಾಗಿರುವುದಲ್ಲದೆ, ಭಾರತೀಯ ಸಂಸ್ಕೃತಿಯ ಕುರಿತಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಅಪಾರ ಕೆಲಸ ಮಾಡುತ್ತಾ ಬಂದಿದ್ದಾರೆ ಚಕ್ರವರ್ತಿ ವರದಾಚಾರ್ ಮಧುಸೂದನ ಅವರು 1942ರ ವರ್ಷದಲ್ಲಿ ಕೋಲಾರದಲ್ಲಿ ಜನಿಸಿದರು. ಅವರ ಶಾಲಾ ಶಿಕ್ಷಣವೂ ಕೋಲಾರದಲ್ಲಿ ನಡೆಯಿತು. ವಕೀಲರಾಗಿದ್ದ ಅವರ ತಂದೆ 1958 ರಲ್ಲಿ ನಿಧನರಾದರು. ಅವರ ತಾಯಿ ಕಳೆದ ಶತಮಾನದ ಮೊದಲಾರ್ಧದಲ್ಲಿ ಮಹಾನ್ ವಕೀಲರೂ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಸಿದ್ಧರೂ ಆಗಿದ್ದ ಶ್ರೀ ತಿರುಮಲೈ ಶ್ರೀನಿವಾಸಾಚಾರ್ ಅವರ ಹಿರಿಯ ಮಗಳು. ಚಕ್ರವರ್ತಿ ಮಧುಸೂಧನ ಅವರು ಏಳು ಮಕ್ಕಳ ಕುಟುಂಬದಲ್ಲಿ ನಾಲ್ಕನೆಯವರು. ಅವರ ಹಿರಿಯ ಸಹೋದರ, ದಿವಂಗತ ಡಾ. ದೊರೆಸ್ವಾಮಿ, ಅಮೆರಿಕದ ಅಲಬಾಮಾದ ಟಸ್ಕೆಗೀ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು.ಅವರ ಎರಡನೇ ಹಿರಿಯ ಸಹೋದರ ಸಿ.ವಿ. ರಾಮನ್ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಗಣಿತಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು. ಅವರ ಮೂರನೇ ಹಿರಿಯ ಸಹೋದರ ಡಾ ಸಿ.ವಿ. ವೇಣುಗೋಪಾಲ್, ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮಾನವಿಕ ವಿಭಾಗದ ಡೀನ್ ಆಗಿದ್ದರು. ಈ ಮೂವರು ಹಿರಿಯ ಅಣ್ಣಂದಿರಿಂದ ಚಕ್ರವರ್ತಿ ಮಧುಸೂದನ ಅವರು ಕಲಿತದ್ದು ಅಪಾರ. ಅಮೆರಿಕದಲ್ಲಿ ವೈದ್ಯ ವೃತ್ತಿಯಲ್ಲಿರುವ ಕಿರಿಯ ಸಹೋದರ ಸಹ ವೃತ್ತಿಜೀವನದಲ್ಲಿ ಸಾಧಕರು. ಈಗ ದಿವಂಗತರಾಗಿರುವ ಇಬ್ಬರು ಕಿರಿಯ ಸಹೋದರಿಯರು ಮತ್ತು ಪತ್ನಿ ಇವರು ಮೂವರ ಒಲವು ಮತ್ತು ಬೆಂಬಲವನ್ನೂ ಸಹಾ ಮಧುಸೂದನ ಅವರು ಸದಾ ಸ್ಮರಿಸುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದ್ವಿಚಕ್ರ ವಾಹನ ಸವಾರರಿಗಾಗಿ ಹೊಸ ಏರ್‌ಬ್ಯಾಗ್... ಹೆಲ್ಮೆಟ್ ಜೊತೆಗೆ ಧರಿಸಿದ್ರೆ ಕಾರಿನಷ್ಟೇ ಸೇಫ್ಟಿ

Tue Feb 28 , 2023
ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಿಗೆ ಸುರಕ್ಷತೆ ತೀರಾ ಕಡಿಮೆಯಾಗಿರುತ್ತದೆ. ಹೆಲ್ಮೆಟ್ ಧರಿಸದ ಮಾತ್ರಕ್ಕೆ ನಾವು ಸಂಪೂರ್ಣ ಸುರಿಕ್ಷಿತವಲ್ಲ. ಒಂದು ವೇಳೆ ಅಪಘಾತವಾದರೆ ತಲೆ ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಾನಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೆಲೈಟ್ (HELITE) ಎಂಬ ಫ್ರೆಂಚ್ ಕಂಪನಿ ದ್ವಿಚಕ್ರ ವಾಹನ ಸವಾರರಿಗಾಗಿ ಏರ್‌ಬ್ಯಾಗ್ ಅಭಿವೃದ್ಧಿಪಡಿಸಿದ್ದಾರೆ. ಬಹುತೇಕ ದೇಶದ ಎಲ್ಲಾ ರಾಜ್ಯಗಳಲ್ಲೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ದ್ವಿಚಕ್ರ ವಾಹನ ಸವಾರರಷ್ಟೇ ಅಲ್ಲ, ಅವರ ಹಿಂದೆ ಕುಳಿತುಕೊಳ್ಳುವವರೂ ಹೆಲ್ಮೆಟ್ […]

Advertisement

Wordpress Social Share Plugin powered by Ultimatelysocial