ಬದುಕು ಸೇವಾ ಟ್ರಸ್ಟ್ ವತಿಯಿಂದ ಕ್ಯಾಲೆಂಡರ್ ಬಿಡುಗಡೆ.

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರಿನಲ್ಲಿ ದಾಸ ಬಣಜಿಗ ಶ್ರೀರಾಮ ಮಂದಿರದಲ್ಲಿ ಬದುಕು ಸೇವಾಟ್ರಸ್ಟ್ ವತಿಯಿಂದ 7ನೇವರ್ಷದ 2023ನೇ ಸಾಲಿನ ನೂತನ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಲಾಯಿತು.

ಕ್ಯಾಲೆಂಡರ್ ಬಿಡುಗಡೆ ಮಾಡಿ ‌ಪುರಸಭಾ ಸದಸ್ಯ ಶಶಿಧರ್ ಮಾತನಾಡಿ ಸಾಮಾಜಿಕ ಕಳಕಳಿಯಿಂದ ರಚನೆಯಾದ ಬದುಕು ಟ್ರಸ್ಟ್ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಉತ್ತಮವಾದ ಕಾರ್ಯ ನಿರ್ವಹಿಸುತ್ತದೆ ಹಾಗಾಗಿ ಸಮುದಾಯದ ಹಿರಿಯರು ಈ‌ ಸಾಮಾಜಿಕ ಕೆಲಸಕ್ಕೆ ಕೈಜೋಡಿಸಬೇಕೆಂದು ಎಂದು ಹೇಳಿದರು.

ರಾಮಾನುಜಾಚಾರ್ಯರ ಅನುಯಾಯಿಗಳಾದ ನಾವು ರಾಮನ ತತ್ವದಲ್ಲಿ ನಮ್ಮ‌ ಜೀವನವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು

ಟ್ರಸ್ಟ್ ನ ಅಧ್ಯಕ್ಷರಾದ ನಟರಾಜು ಮಾತನಾಡಿ ಗುಂಡ್ಲುಪೇಟೆಯಲ್ಲಿ ಕಳೆದ 6 ವರ್ಷಗಳಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತಿದ್ದು ಆರೋಗ್ಯ ಕ್ಷೇತ್ರದಲ್ಲಿ ಜೆ.ಎಸ್ ಎಸ್ ಇನ್ನಿತರ ಆಸ್ಪತ್ರೆಗಳ‌ ಸಹಕಾರದಿಂದ ಜಿಲ್ಲೆಯಲ್ಲಿ ಸುಮಾರು 150 ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಮತ್ತು ‌ಕಾಡಂಚಿನ‌ ಗ್ರಾಮಗಳ ಬಡ ವಿಧ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ‌ ಸಲಕರಣೆಗಳನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಗೋವಿಂದರಾಜು, ಟ್ರಸ್ಟ್ ನ ಗೌರವ ಅಧ್ಯಕ್ಷ ನಾಗರಾಜು, ತಾಲ್ಲೂಕು ಪಂಚಾಯತಿ ‌ಮಾಜಿ ಸದಸ್ಯ ಪ್ರಭಾಕರ್ ಟ್ರಸ್ಟ್ ನ ಸಂತೋಷ್ ,ರಂಗನಾಥ್, ಪುನೀತ್ ರಮೇಶ್ ಶ್ರೀಕಂಠ ಮೂರ್ತಿ ಜಯರಾಂ ಇನ್ನಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ಅನುಪಮ್ ಖೇರ್ ನಟನೆ...

Thu Jan 5 , 2023
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಖ್ಯಾತ ನಟ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಇಂಥದ್ದೊಂದು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದಿರುವ ಅನುಪಮ್ ಖೇರ್, ಇದು ಅವರ 534ನೇ ಸಿನಿಮಾ ಎಂದು ಬರೆದುಕೊಂಡಿದ್ದಾರೆ.ಈ ಸಿನಿಮಾ ಆಕರ್ಷಕ ಮತ್ತು ಸ್ಫೂರ್ತಿದಾಯಕ ಎಂದು ಹೆಮ್ಮೆಪಟ್ಟಿದ್ದಾರೆ. ಶೂಟಿಂಗ್ ಸೆಟ್ ನಿಂದಲೇ ಕ್ಲ್ಯಾಪ್ ಬೋರ್ಡ್ ಹಿಡಿದುಕೊಂಡಿರುವ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ.ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ […]

Advertisement

Wordpress Social Share Plugin powered by Ultimatelysocial