ಎಂಟು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ, ಎಲ್ಲಾ ವಾಹನಗಳಿಗೆ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲಾಗುವುದು.

ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ವಿತರಿಸಿದ ಕರಡು ನೋಟಿಫಿಕೇಶನ್ ಅನ್ವಯ ಎಂ1 ಕೆಟಗರಿಯ, ಅಂದರೆ ಎಂಟು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ, ಎಲ್ಲಾ ವಾಹನಗಳಿಗೆ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲಾಗುವುದು.ಈ ನಿಯಮಗಳನ್ನು ಅಕ್ಟೋಬರ್‌ 1, 2022ರಿಂದ ಕಡ್ಡಾಯಗೊಳಿಸಲಾಗುವುದು.ಈ ದಿನಾಂಕದ ಬಳಿಕ ಉತ್ಪಾದನೆಯಾಗುವ ವಾಹನಗಳಲ್ಲಿ ಸೀಟ್ ಬೆಲ್ಟ್‌, ಸೀಟ್ ಬೆಲ್ಟ್‌ ಅಲಾರ್ಮ್ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಪ್ರಯಾಣಿಕರ ಸುರಕ್ಷತೆ ಖಾತ್ರಿಪಡಿಸಲು ಒದಗಿಸಬೇಕಾಗುತ್ತದೆ.ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲು ಕೋರಿ ತಯಾರಿಸಲಾದ ಈ ಕರಡನ್ನು ಸಂಬಂಧಪಟ್ಟ ವರ್ಗಗಳ ಮಂದಿಯಿಂದ ಪ್ರತಿಕ್ರಿಯೆ ಕೋರಿ ಪ್ರಕಟಿಸಲಾಗಿದೆ. 30 ದಿನಗಳ ಒಳಗೆ ಈ ಕರಡಿಗೆ ಪ್ರತಿಕ್ರಿಯೆಗಳನ್ನು ಕಳುಹಿಸಲು ಸಚಿವಾಲಯ ಕೋರಿದೆ.ಎಲ್ಲಾ ಎಂಟು-ಸೀಟರ್‌ ವಾಹನಗಳಲ್ಲೂ ಮುಂದಿನ ಸೀಟುಗಳಿಗೆ ಮೂರು ಪಾಯಿಂಟ್‌ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲು ಕೋರಿ ಈ ಕರಡು ರಚಿಸಲಾಗಿದೆ. 3.5 ಟನ್‌ಗಳಿಗಿಂತ ಕಡಿಮೆ ತೂಕದ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳನ್ನು ಈ ಎಂ1 ಕೆಟಗರಿಯಲ್ಲಿ ಪರಿಗಣಿಸಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸಾಂಕ್ರಾಮಿಕ ಸಂಭಾವ್ಯ' ಜೊತೆ ಮಾರಣಾಂತಿಕ ವೈರಲ್ ಹೆಮರಾಜಿಕ್ ಜ್ವರ ಯುಕೆಯಲ್ಲಿ ಪತ್ತೆಯಾಗಿದೆ

Sat Feb 12 , 2022
    ಜಗತ್ತು ಇನ್ನೂ COVID-19 ವೈರಸ್ ಮತ್ತು ಅದರ ವಿವಿಧ ರೂಪಾಂತರಗಳೊಂದಿಗೆ ಹೋರಾಡುತ್ತಿದೆ. ಈಗ ಎರಡು ವರ್ಷಕ್ಕಿಂತ ಹೆಚ್ಚು ಕಳೆದಿದೆ ಮತ್ತು ಅಂತ್ಯವು ಎಲ್ಲಿಯೂ ಕಾಣುತ್ತಿಲ್ಲ. ಈ ಸನ್ನಿವೇಶದಲ್ಲಿ, ಯುಕೆಯಲ್ಲಿ ಮಾರಣಾಂತಿಕ ಹೆಮರಾಜಿಕ್ ಜ್ವರ ಪತ್ತೆಯಾಗಿರುವುದು ನಿಜಕ್ಕೂ ಭಯಾನಕವಾಗಿದೆ. ಈ ರೋಗವು ‘ಸಾಂಕ್ರಾಮಿಕ ಸಂಭಾವ್ಯತೆ’ ಹೊಂದಿದೆ ಎಂದು ದೇಶದ ಆರೋಗ್ಯ ಅಧಿಕಾರಿಗಳು ದಾಖಲೆಯಲ್ಲಿ ಹೇಳಿದ್ದಾರೆ. ಲಸ್ಸಾ ಜ್ವರ ಎಂದು ಕರೆಯಲ್ಪಡುವ ಇದು ತೀವ್ರವಾದ ವೈರಲ್ ಹೆಮರಾಜಿಕ್ ಕಾಯಿಲೆಯಾಗಿದ್ದು, ಇದು […]

Advertisement

Wordpress Social Share Plugin powered by Ultimatelysocial