,ಜವಳಿ ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವರಾದ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ ರವರು ನವಲಗುಂದದ ಅಪ್ರತಿಮ ಪ್ರತಿಭೆ ಮನ್ವರ್ಷಿ ನವಲಗುಂದ ರವರು ರಚಿಸಿರುವ ತಾಜ್‍ಮಹಲ್೨ ಚಿತ್ರದ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ಅರಣ್ಯ ಖಾತೆ ಸಚಿವರಾದ ಶ್ರೀ ಕೆ. ಎನ್ ಗಡ್ಡಿರವರು,ನವಲಗುಂದದ ಮಾಜಿ ಶಾಸಕರಾದ ಶ್ರೀ ಎನ್ ಎಚ್ ಕೋನರಡ್ಡಿ ರವರು, ಕೆಪಿಸಿಸಿ ಸದಸ್ಯರಾದ ವಿಜಯ್ ಕುಲಕರ್ಣಿಯವರು,ನವಲಗುಂದದ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ್ ಅಸೂಟಿರವರು, […]

ಬೆಂಗಳೂರು,ಮೇ 18-ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೆಲವು ಕಡೆ ವ್ಯಾಪಕ ಹಾನಿಯಾಗಿದ್ದು, ತಕ್ಷಣವೇ ತುರ್ತು ಪರಿಹಾರವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ರಾತ್ರಿ ಕೆಲವು ಕಡೆ 100ಮಿಲಿಮೀಟರ್ ಹಾಗೂ ಇನ್ನೂ ಕೆಲವು ಕಡೆ 99ಮಿಲಿಮೀಟರ್ ಮಳೆಯಾಗಿದೆ. ಎಲ್ಲೆಲ್ಲಿ ಹೆಚ್ಚಿನ ಹಾನಿಯಾಗಿದೆಯೋ ಅಂತಹ ಕಡೆ ಪರಿಹಾರ ಕೈಗೊಳ್ಳಲು ಬಿಬಿಎಂಪಿ ಆಯುಕ್ತರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. […]

ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಕ ಸಚಿನ್ ರವಿ ಮುಂದಿನ ಸಿನಿಮಾ ಹೇಗಿರಲಿದೆ? ಯಾವ ಸ್ಟಾರ್ ಆಕ್ಷನ್ ಕಟ್ ಹೇಳ್ತಾರೆ? ಯಾವ ಜಾನರಿನ ಸಿನಿಮಾ ಮಾಡಲಿದ್ದಾರೆ? ಅನ್ನೋ ಪ್ರಶ್ನೆ ಚಿತ್ರರಸಿಕರ ಮನದಲ್ಲಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಚಿನ್ ಮುಂದಿನ ಸಿನಿಮಾವನ್ನು ಶಿವಣ್ಣನಿಗೆ ನಿರ್ದೇಶನ ಮಾಡಲಿದ್ದಾರೆ. ಅಶ್ವತ್ಥಾಮನಾಗಲಿದ್ದಾರೆ ಶಿವಣ್ಣ ಸಚಿನ್ ರವಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾದಲ್ಲಿ ಶಿವಣ್ಣ ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದು, ಇದೊಂದು ಆಕ್ಷನ್ ಪ್ಯಾಕ್ಡ್ ಸ್ಪೈ […]

‌ ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸಹ, ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ಮೆಮೋ ಸಲ್ಲಿಸಿ, ರಾಜ್ಯ ಸರ್ಕಾರ ಅಧಿಕಾರ ಕಸಿದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ‌.ಕೆ ಶಿವಕುಮಾರ್ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಸಂವಿಧಾನದ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ, ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಸರ್ಕಾರ ತನ್ನ ಅಧಿಕಾರವನ್ನು ಕಸಿದುಕೊಂಡಿದೆ ಎಂದು ಚುನಾವಣಾ […]

  ಬೆಂಗಳೂರು: ಹವಾಮಾನ ಇಲಾಖೆ ಘೋಷಿಸಿದ ರೆಡ್ ಅಲರ್ಟ್, ಯೆಲ್ಲೋ ಅಲರ್ಟ್ ಮಳೆ ಮುನ್ಸೂಚನೆ ಇರುವೆಡೆ ಬೆಂಗಳೂರು ಸೇರಿ ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ತುರ್ತಾಗಿ ಸ್ಪಂದಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅಶೋಕ್​, ಮಳೆ ಮುನ್ಸೂಚನೆ ಲಭ್ಯವಾಗುತ್ತಿದ್ದಂತೆ ಆಯಾ ಜಿಲ್ಲಾ ಆಡಳಿತಗಳು ಏನೆಲ್ಲ ಸಿದ್ಧತೆ ಮಾಡಿಕೊಂಡಿವೆ ಎಂಬ ಮಾಹಿತಿ ತರಿಸಿಕೊಳ್ಳಲಾಗಿದೆ. ಇನ್ನೂ 2-3 ದಿನ ಮಳೆಯಾಗುವ ಸಾಧ್ಯತೆಯಿದ್ದು, […]

  ಮೈಸೂರು: ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಜೆಡಿಎಸ್ ಸಮಾನ ಅಂತರ ಕಾಯ್ದುಕೊಳ್ಳಲಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೇರೆ ಪಕ್ಷಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಬೇರೆ ಪಕ್ಷಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ಗೆ ಕೆಲವೇ ಮತಗಳ ಕೊರತೆಯಿದ್ದರೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹೆಚ್ಚುವರಿ ಮತಗಳನ್ನು ಹೊಂದಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಅವರು […]

  ನವದೆಹಲಿ, ಮೇ 18 – 263 ಚೀನಾ ಪ್ರಜೆಗಳ ವೀಸಾ ನೀಡಲು 50 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಸದ ಕಾರ್ತಿ ಚಿದಂಬರಂ ಅವರ ನಿಕಟವರ್ತಿ ಎಸ್ ಭಾಸ್ಕರರಾಮನ್ ಅವರನ್ನು ಸಿಬಿಐ ಬಂಧಿಸಿದೆ. ಸಿಬಿಐ ನಿನ್ನೆ ತಡರಾತ್ರಿ ಭಾಸ್ಕರರಾಮನ್ ಅವರನ್ನು ವಿಚಾರಣೆಗೆ ಕರೆದೊಯ್ದಿದೆ ಮತ್ತು ಇಂದು ಮುಂಜಾನೆ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾನ್ಸಾ ಮೂಲದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ 263 […]

ಅಹಮದಾಬಾದ್, ಮೇ 18- ಗುಜರಾತ್ ಪಾಟಿದಾರ್ ಸಮುದಾಯ ಮೀಸಲಾತಿಗಾಗಿ ಆಂದೋಲನ ನಡೆಸಿ ಪ್ರಭುದ್ಧಮಾನಕ್ಕೆ ಬಂದಿದ್ದ ನಾಯಕ ಹಾರ್ದಿಕ್ ಪಟೇಲ್, ಗುಜರಾತ್ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಾರ್ದಿಕ್ ಸಲ್ಲಿಸಿದ್ದಾರೆ. ಧೈರ್ಯದೊಂದಿಗೆ ಇಂದು ನಾನು ಪಕ್ಷದ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಅನುಯಾಯಿಗಳು ಮತ್ತು ಗುಜರಾತ್ ಜನರು ನನ್ನ […]

  ಐಪಿಎಲ್ 2022 ಬಹುತೇಕ ಕೊನೆಯ ಹಂತದಲ್ಲಿದೆ, ಜುಲೈನಲ್ಲಿ ಭಾರತ ಕ್ರಿಕೆಟ್ ತಂಡದ ನಿರ್ಣಾಯಕ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸೇರಿದಂತೆ ಹಲವಾರು ಹಿರಿಯ ಆಟಗಾರರು ಮುಂಬರುವ ದಕ್ಷಿಣ ವಿರುದ್ಧದ ಐದು ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಆಫ್ರಿಕಾ ಸರಣಿಗೆ KL ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ ನೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ, […]

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ ಚರ್ಮವನ್ನು ಹೆಚ್ಚು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. * ಬಾಳೆಹಣ್ಣು ಅತ್ಯುತ್ತಮ ಎಕ್ಸಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ಮೇಲಿನ ಜಿಡ್ಡಿನಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. * ನೈಸರ್ಗಿಕವಾಗಿ ಸುಕ್ಕುಗಟ್ಟುವುದನ್ನು ತಡೆಯಬೇಕೆಂದರೆ ಬಾಳೆಹಣ್ಣಿನ ಸೇವನೆ ಹಾಗೂ ಚರ್ಮದ ಮೇಲೆ ಬಾಳೆಹಣ್ಣಿನ ಲೇಪನ ಹೊಂದುವುದು ಸೂಕ್ತ. […]

Advertisement

Wordpress Social Share Plugin powered by Ultimatelysocial