ನವದೆಹಲಿ: ಜ್ಣಾನವಾಪಿ ಮಸೀದಿಯೊಳಗೆ ಹಿಂದೂ ದೇವರ ಕುರುಹಗಳಿವೆ ಎಂಬ ಸುದ್ದಿ ಹಾರಿದಾಡಿದಾಗ, ಕೋರ್ಟ್ ಒಂದು ಟೀಂ ಸಿದ್ಧ ಮಾಡಿ, ಸಮೀಕ್ಷೆ ಮಾಡಿಸಿತ್ತು. ಆ ಸಮೀಕ್ಷೆಯ ವರದಿ ಇಷ್ಟೊತ್ತಿಗೆ ಕೋರ್ಟ್ ಗೆ ಸಲ್ಲಿಕೆಯಾಗಬೇಕಿತ್ತು. ಆದರೆ ಸಮೀಕ್ಷೆ ಮಾಡಿದ್ದ ಟೀಂ ಕಾಲಾವಕಾಶ ಕೇಳಿತ್ತು. ಇದೀಗ ಇಂದು ಸಮೀಕ್ಷಾ ವರದಿ ಕೋರ್ಟ್ ಗೆ ಸಲ್ಲಿಕೆಯಾಗಿದೆ. ಸಮೀಕ್ಷೆ ಸಮಯದಲ್ಲಿ ಸಿಕ್ಕ ಶಿವಲಿಂಗದ ಫೋಟೋ, ವಿಡಿಯೋ, ಜೊತೆಗೆ ಸಮೀಕ್ಷೆ ಕಂಡ ಎಲ್ಲಾ ಕುರುಹುಗಳ ಬಗ್ಗೆ ಸಂಪೂರ್ಣ […]

  ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೧೪೫ ವಿದ್ಯಾರ್ಥಿಗಳು 625ಕ್ಕೆ ಪೂರ್ಣ 625 ಅಂಕ ಪಡೆದು ನಂ.೧ ಸ್ಥಾನ ಪಡೆದಿದ್ದಾರೆ. ಶಿಕ್ಷಣ ಸಚಿವ ಬಿಸಿ ನಾಗೇಶ್‌ ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾರ್ಚ್‌ 28ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದರು. ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ ಪೂರ್ಣ ಅಂಕ ಪಡೆದು ದಾಖಲೆ ಬರೆದಿದ್ದಾರೆ. ಇದರಲ್ಲಿ 21 ಮಕ್ಕಳು ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರೆ, […]

  ಮುಂಬೈ: ಮುಂಬೈಯಲ್ಲಿ ನೆಲೆಯನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ತಯಾರಕ ಸಂಸ್ಥೆ ಒಡಿಸ್ಸಿ ಭಾರತದಲ್ಲಿ Odysse V2 ಹಾಗೂ V2+ ಎಂಬ ಎರಡು ಮಾದರಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪರಿಚಯಿಸಿದೆ. ಇವುಗಳ ಎಕ್ಸ್-ಶೋರೂಮ್ ಬೆಲೆ ಕ್ರಮವಾಗಿ ₹ 75,000 ಹಾಗೂ ₹ 97,500 ಇದ್ದು, ಈ ಮೂಲಕ ಕಂಪನಿಯು ಆರು ಎಲೆಕ್ಟ್ರಿಕ್ ವಾಹನ ಮಾಡೆಲ್ಗಳಿರುವ ಶ್ರೇಣಿಯನ್ನು ಹೊಂದಿದಂತಾಗಿದೆ. ಈ ವರ್ಷಾಂತ್ಯದ ಒಳಗೆ ಇನ್ನೂ ಎರಡು ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ. ಇದರೊಂದಿಗೆ, […]

  ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟ ಮುಂದುವರಿದಿದ್ದು, ರಾಜಧಾನಿ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಿದೆ. ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಗಾಲವನ್ನು ಮೀರಿಸುವ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಕೆಲವೆಡೆ ಬೇಸಿಗೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದರೆ, ಮಳೆ ಆಶ್ರೀತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಗಂಧನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ: ಕಳೆದ 24 ಗಂಟೆಗಳ ಅವಧಿಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಹೋಬಳಿಯಲ್ಲಿ […]

ಹೈದರಾಬಾದ್, ಮೇ 19: ರಾಜ್ಯಸಭೆ ಚುನಾವಣೆಗಾಗಿ ವಿವಿಧ ರಾಜ್ಯಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಭರದಿಂದ ಸಾಗಿದೆ. ತೆಲಂಗಾಣದಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತೆಲಂಗಾಣ ರಾಷ್ಟ್ರಸಮಿತಿ(ಟಿಆರ್‌ಎಸ್) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಕಟಿಸಿದ್ದಾರೆ. ತೆಲಂಗಾಣ ರಾಷ್ಟ್ರಸಮಿತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹೆಸರಿದೆ. ಈ ಪೈಕಿ ಫಾರ್ಮಾಸ್ಯೂಟಿಕಲ್ಸ್ ಕ್ಷೇತ್ರದ ಖ್ಯಾತ ಉದ್ಯಮಿ, ಪಾರ್ಥಸಾರಥಿ ರೆಡ್ಡಿ ಹಾಗೂ ಮತ್ತೊಬ್ಬ ಉದ್ಯಮಿ ರವಿಚಂದ್ರ ಹೆಸರು ಗಮನ ಸೆಳೆದಿವೆ. ವಡ್ಡಿರಾಜು ರವಿಚಂದ್ರ ಹಿಂದುಳಿದ […]

ಅಹಮದಾಬಾದ್: ಉತ್ತರ ಪ್ರದೇಶದ ವಾರಣಾಸಿಯಯಲ್ಲಿ ಶಿವಲಿಂಗ ಪತ್ತೆಯಾಗಿರುವ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗುಜರಾತ್‌ನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಡ್ಯಾನಿಶ್ ಖುರೇಷಿ ಅವರನ್ನು ಅಹಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಬಂಧಿಸಿದೆ. ಶಿವಲಿಂಗ ಕುರಿತಾಗಿ ಮೇಲೆ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಖುರೇಷಿ ವಿರುದ್ಧ ವಿಶ್ವ ಹಿಂದೂ ಪರಿಷತ್ ದೂರು ದಾಖಲಿಸಿದೆ. ವಾರಾಣಸಿ ವಿಶ್ವನಾಥ ದೇವಾಲಯದ ಬಳಿಯಿರುವ ಮಸೀದಿಯಲ್ಲಿ ಮೂರು […]

ಮಂಗಳೂರು/ ಶಿವಮೊಗ್ಗ: ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮೈಸೂರು, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಒಂದು ದಿನ (ಮೇ.19) ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ರಾತ್ರಿಯಿಂದ ನಿರಂತರವಾಗಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಸೇರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ […]

ಬೆಂಗಳೂರು, ಮೇ 18: ಹಿಜಾಬ್ ವಿವಾದದಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶದ ನಂತರ, 2022-23ನೇ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸಿದ ಸಮವಸ್ತ್ರ ಧರಿಸುವುದು ಕಡ್ಡಾಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇಡೀ ದೇಶದ ಗಮನ ಸೆಳೆದಿದ್ದ ‘ಹಿಜಾಬ್’ ವಿವಾದದಂತ ಘಟನೆ ಮರುಕಳಿಸದಿರಲು ಸರ್ಕಾರ ಮುಂಜಾಗ್ರತೆ ವಹಿಸಲು ತೀರ್ಮಾನಿಸಿದೆ. ಸಮವಸ್ತ್ರ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿದೆ. […]

  ‘ಬಿಜೆಪಿ ಎಂಬ ಬುರುಡೆ ಪಾರ್ಟಿ’ ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಸ್ವಿಮ್ಮಿಂಗ್ ಪೂಲ್ ಮಾಡುತ್ತಿದ್ದಾರೆ! ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆಗಳಾಗಿವೆ ಎಂದು ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಈ ತಿಂಗಳ 13ನೇ […]

  ಬೆಂಗಳೂರು, ಮೇ 18: ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆಯ ಮಧ್ಯೆಯೇ ಸಚಿವರು, ಶಾಸಕರು ಮಾತ್ರ ತಮ್ಮ ವೇತನ ಹೆಚ್ಚಿಸಿಕೊಂಡು ಬೀಗಿದ್ದಾರೆ. ಇತ್ತೀಚೆಗೆ ವಿಧಾನಮಂಡಲ ಅಧಿವೇಶನದಲ್ಲಿ ಯಾವುದೇ ಚರ್ಚೆ ಇಲ್ಲದೆ ಜನಪ್ರತಿನಿಧಿಗಳು ವೇತನ ಹೆಚ್ಚಿಸಿಕೊಂಡಿದ್ದರು. ಈಗ ಅದಕ್ಕೆ ಸರ್ಕಾರಿ ಆದೇಶವಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯದ ಸದಸ್ಯರುಗಳಿಗೆ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ (ತಿದ್ದುಪಡಿ) ವಿಧೇಯಕಕ್ಕೆ ಕಳೆದ ಫೆಬ್ರವರಿಯಲ್ಲಿ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿತ್ತು. ಈಗ ಅದಕ್ಕೆ […]

Advertisement

Wordpress Social Share Plugin powered by Ultimatelysocial