ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ;

 

ಮುಂಬೈ: ಮುಂಬೈಯಲ್ಲಿ ನೆಲೆಯನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ತಯಾರಕ ಸಂಸ್ಥೆ ಒಡಿಸ್ಸಿ ಭಾರತದಲ್ಲಿ Odysse V2 ಹಾಗೂ V2+ ಎಂಬ ಎರಡು ಮಾದರಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪರಿಚಯಿಸಿದೆ.

ಇವುಗಳ ಎಕ್ಸ್-ಶೋರೂಮ್ ಬೆಲೆ ಕ್ರಮವಾಗಿ ₹ 75,000 ಹಾಗೂ ₹ 97,500 ಇದ್ದು, ಈ ಮೂಲಕ ಕಂಪನಿಯು ಆರು ಎಲೆಕ್ಟ್ರಿಕ್ ವಾಹನ ಮಾಡೆಲ್ಗಳಿರುವ ಶ್ರೇಣಿಯನ್ನು ಹೊಂದಿದಂತಾಗಿದೆ.

ಈ ವರ್ಷಾಂತ್ಯದ ಒಳಗೆ ಇನ್ನೂ ಎರಡು ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ.

ಇದರೊಂದಿಗೆ, ಕಂಪನಿಯು ದೇಶಾದ್ಯಂತ ತನ್ನ ವಿತರಣ ಜಾಲವನ್ನು ಹರಡಲು ಉದ್ದೇಶಿಸಿದ್ದು, 100+ ಡೀಲರ್ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಅಹ್ಮದಾಬಾದ್, ಮುಂಬೈ ಮತ್ತು ಹೈದರಾಬಾದ್ ಅಲ್ಲದೆ ದೇಶದ ಹಲವು ಕಡೆಗಳಲ್ಲಿ ತನ್ನ ಸೌಲಭ್ಯಗಳನ್ನು ಸ್ಥಾಪಿಸಲು ಬಯಸಿದೆ ಎಂದು ಒಡಿಸ್ಸೆ ಸಿಇಒ ನೆಮಿನ್ ವೋರಾ ಹೇಳಿದ್ದಾರೆ.

V2+ ,150 ಕಿ.ಮೀ.ಗೂ ಹೆಚ್ಚಿನ ಮೈಲೇಜ್ ಜತೆಗೆ ಕಳ್ಳತನ ನಿರೋಧಕ ಲಾಕ್, ಪ್ಯಾಸಿವ್ ಬ್ಯಾಟರಿ ಕೂಲಿಂಗ್, ಸಾಕಷ್ಟು ಬೂಟ್ ಸ್ಪೇಸ್, 12 ಇಂಚಿನ ಮುಂಭಾಗದ ಟೈರ್, ಎಲ್‌ಇಡಿ ದೀಪಗಳು ಮುಂತಾದ ಸೌಲಭ್ಯಗಳನ್ನು ಹೊಂದಿರುವುದರಿಂದ, ಗ್ರಾಹಕರಿಗೆ ಅನುಕೂಲಕರವಾಗಿದೆ ಎಂದಿದ್ದಾರೆ. Odyss ಇವಿ ಮಾದರಿಗಳಾದ E2go, Hawk+, Racer ಹಾಗೂ Evoqis ಈಗಾಗಲೇ ಸಾಕಷ್ಟು ಜನಪ್ರಿಯವಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ 145 ವಿದ್ಯಾರ್ಥಿಗಳು!

Thu May 19 , 2022
  ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೧೪೫ ವಿದ್ಯಾರ್ಥಿಗಳು 625ಕ್ಕೆ ಪೂರ್ಣ 625 ಅಂಕ ಪಡೆದು ನಂ.೧ ಸ್ಥಾನ ಪಡೆದಿದ್ದಾರೆ. ಶಿಕ್ಷಣ ಸಚಿವ ಬಿಸಿ ನಾಗೇಶ್‌ ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾರ್ಚ್‌ 28ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದರು. ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ ಪೂರ್ಣ ಅಂಕ ಪಡೆದು ದಾಖಲೆ ಬರೆದಿದ್ದಾರೆ. ಇದರಲ್ಲಿ 21 ಮಕ್ಕಳು ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರೆ, […]

Advertisement

Wordpress Social Share Plugin powered by Ultimatelysocial