ನಮ್ಮ ಶಾಸಕರಿಗೆ ತಿಂಗಳ ಸಂಬಳ ಎಷ್ಟು ಹೆಚ್ಚಾಗಿದೆ ಗೊತ್ತಾ?

 

ಬೆಂಗಳೂರು, ಮೇ 18: ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆಯ ಮಧ್ಯೆಯೇ ಸಚಿವರು, ಶಾಸಕರು ಮಾತ್ರ ತಮ್ಮ ವೇತನ ಹೆಚ್ಚಿಸಿಕೊಂಡು ಬೀಗಿದ್ದಾರೆ. ಇತ್ತೀಚೆಗೆ ವಿಧಾನಮಂಡಲ ಅಧಿವೇಶನದಲ್ಲಿ ಯಾವುದೇ ಚರ್ಚೆ ಇಲ್ಲದೆ ಜನಪ್ರತಿನಿಧಿಗಳು ವೇತನ ಹೆಚ್ಚಿಸಿಕೊಂಡಿದ್ದರು.

ಈಗ ಅದಕ್ಕೆ ಸರ್ಕಾರಿ ಆದೇಶವಾಗಿದೆ.

ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯದ ಸದಸ್ಯರುಗಳಿಗೆ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ (ತಿದ್ದುಪಡಿ) ವಿಧೇಯಕಕ್ಕೆ ಕಳೆದ ಫೆಬ್ರವರಿಯಲ್ಲಿ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿತ್ತು. ಈಗ ಅದಕ್ಕೆ ಆದೇಶವಾಗಿದ್ದು, ಕಳೆದ ಏಪ್ರಿಲ್‌ನಿಂದ ಅನ್ವಯವಾಗುವಂತೆ ವೇತನ ಮತ್ತು ಭತ್ಯೆಗಳು ಪರಿಷ್ಕರಣೆಯಾಗಿವೆ.

ಶಾಸಕರ ವೇತನ ಪರಿಷ್ಕರಣೆಯ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ಭತ್ಯೆಗಳನ್ನು ಅನಗತ್ಯವಾಗಿ ನೀಡಲಾಗುತ್ತಿದೆ ಎಂಬ ಚರ್ಚೆ ಪ್ರಾರಂಭವಾಗಿದೆ. ಜನಸಾಮಾನ್ಯರಿಗೆ ಬೆಲೆ ಏರಿಕೆ, ಉದ್ಯೋಗ ಅಭದ್ರತೆಯ ಮಧ್ಯೆ ನಮ್ಮ ಜನಪ್ರತಿನಿಧಿಗಳು ಮಾತ್ರ ಇಷ್ಟೊಂದು ವೇತನ ಹೆಚ್ಚಿಸಿಕೊಂಡು ಬೀಗುತ್ತಿರುವುದು ಎಲ್ಲರನ್ನೂ ಕಣ್ಣುಕುಕ್ಕುವಂತೆ ಮಾಡಿದೆ.

ಶಾಸಕರ ವೇತನ ಎಷ್ಟಾಗಿದೆ?

ಶಾಸಕರು ಪ್ರತಿ ತಿಂಗಳು ವೇತನ, ಭತ್ಯೆ, ಸಾರಿಗೆ, ದೂರವಾಣಿ ಸಹಿತ ಒಟ್ಟಾರೆಯಾಗಿ 2.05 ಸಾವಿರ ರೂ. ವೇತನ ಪಡೆಯುತ್ತಾರೆ. ರಾಜ್ಯದಲ್ಲಿ ಒಟ್ಟಾರೆ 225 ಶಾಸಕರಿದ್ದು, ವೇತನಕ್ಕಾಗಿಯೇ 4,61,25,000 ರೂ. ಸರ್ಕಾರಕ್ಕೆ ಖರ್ಚು ಬರುತ್ತದೆ.

ಶಾಸಕರಿಗೆ ತಿಂಗಳಿಗೆ 40,000 ರೂ. ವೇತನ, 60,000 ರೂ. ಕ್ಷೇತ್ರ ಭತ್ಯೆ, ಆಪ್ತ ಸಹಾಯಕನ ಮತ್ತು ಕೊಠಡಿ ಸೇವಕನ ವೇತನ 20,000, ಅಂಚೆ ವೆಚ್ಚ 5000 ರೂ. ಹಾಗೂ ದೂರವಾಣಿ ವೆಚ್ಚ 20,000 ರೂ. ನಿಗದಿ ಪಡಿಸಲಾಗಿದೆ.

ಈ ಮೊದಲು ಶಾಸಕರಿಗೆ ಒಂದು ತಿಂಗಳಿಗೆ 20,000 ರೂ. ವೇತನ, 40,000 ರೂ. ಕ್ಷೇತ್ರ ಭತ್ಯೆ, ಇಂಧನ 1000 ಲೀಟರ್, ದೂರವಾಣಿ ವೆಚ್ಚ 20,000 ರೂ., ಆಪ್ತ ಸಹಾಯಕನ ಮತ್ತು ಕೊಠಡಿ ಸೇವಕನ ವೇತನ 20,000 ಇತ್ತು.

ದೂರವಾಣಿಗೆ 20,000 ಏಕೆ?

ತಿಂಗಳಿಗೆ 500 ರೂ. ಒಳಗೆ ಅನಿಯಮಿತ ಕರೆಗಳು ಮತ್ತು ಇಂಟರ್‌ನೆಟ್ ಸೌಲಭ್ಯ ಸಿಗುತ್ತಿರುವ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ದೂರವಾಣಿ ವೆಚ್ಚ ಎಂದು ಈ ಕಾಲದಲ್ಲಿಯೂ ಸಹ 20,000 ರೂ. ನಿಗದಿಪಡಿಸಿರುವುದು ಏಕೆ ಎಂದು ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ...

Thu May 19 , 2022
  ‘ಬಿಜೆಪಿ ಎಂಬ ಬುರುಡೆ ಪಾರ್ಟಿ’ ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಸ್ವಿಮ್ಮಿಂಗ್ ಪೂಲ್ ಮಾಡುತ್ತಿದ್ದಾರೆ! ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆಗಳಾಗಿವೆ ಎಂದು ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಈ ತಿಂಗಳ 13ನೇ […]

Advertisement

Wordpress Social Share Plugin powered by Ultimatelysocial