HEALTH TIPS:ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು;

ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದೇನೋ ನಿಜ. ಅದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಷ್ಟೇ ಮುಖ್ಯ. ಇದರಿಂದ ನಮ್ಮ ದೇಹದಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ.

ಮೊಟ್ಟೆಯ ಹಳದಿ ಭಾಗದಲ್ಲಿ ಮಾತ್ರ ಕೊಲೆಸ್ಟ್ರಾಲ್ ಇರುತ್ತದೆ.

ಬಿಳಿ ಭಾಗ ಕೊಲೆಸ್ಟ್ರಾಲ್ ಮುಕ್ತವಾಗಿದೆ. ಐಸಿಎಂಅರ್ ಮತ್ತು ಎನ್ ಐಎನ್ ಮಾರ್ಗಸೂಚಿಗಳ ಪ್ರಕಾರ ದಿನ್ಕಕೆ 300 ಗ್ರಾಂ ಕೊಲೆಸ್ಟ್ರಾಲ್ ಸೇವಿಸಬಹುದು. ಅಂದರೆ ದಿನಕ್ಕೊಂದು ಮೊಟ್ಟೆ ತಿನ್ನಬಹುದು.

ಯುವಕರು ದೇಹಾರೋಗ್ಯ ಕಾಪಾಡಿಕೊಳ್ಳಲು ದಿನಕ್ಕೊಂದು ಮೊಟ್ಟೆ ಸೇವಿಸಬಹುದು. ಮಕ್ಕಳಿಗೂ ವಾರಕ್ಕೆರಡು ಮೊಟ್ಟೆ ತಿನ್ನಲು ಕೊಡಬಹುದು.
ಮೊಟ್ಟೆಯಿಂದ ನಮ್ಮ ದೇಹಕ್ಕೆ ಪೊಟಾಸಿಯಂ, ಮೆಗ್ನಿಷಿಯಂ, ಸೋಡಿಯಂ, ವಿಟಮಿನ್ ಎ, ಡಿ, ಬಿ6, ಸತು, ಕಬ್ಬಿಣಾಂಶ, ಗರ್ಭಿಣಿಯರಿಗೆ ಅತ್ಯಗತ್ಯವಾದ ಫೋಲಿಕ್ ಅಸಿಡ್ ಅನ್ನೂ ಒದಗಿಸುತ್ತದೆ.

ರಕ್ತದೊತ್ತಡ, ಪಾರ್ಶ್ವವಾಯು ಮೊದಲಾದ ಕಾಯಿಲೆಗಳನ್ನು ದೂರವಿಡುವ ಶಕ್ತಿಯೂ ಇದಕ್ಕಿದೆ. ಹಾಗಾದರೆ ತಡ ಯಾಕೆ, ನಿಯಮಿತವಾಗಿ ಮೊಟ್ಟೆ ಸೇವಿಸಿ, ಅರೋಗ್ಯ ಕಾಪಾಡಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALH TIPS:ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ ಅದನ್ನು ಕಾಪಾಡಲು ಸುಲಭ ಉಪಾಯ;

Mon Jan 24 , 2022
ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ. ನಮ್ಮ ಸುತ್ತ ಇರುವ ಜಗತ್ತು ಮತ್ತು ಬಣ್ಣಗಳನ್ನು ನೋಡಲು ಕಣ್ಣುಗಳು ಬೇಕೇಬೇಕು. ಗಂಭೀರ ಸಮಸ್ಯೆ ಬರುವವರೆಗೂ ನಾವು ಕಣ್ಣನ್ನು ನಿರ್ಲಕ್ಷಿಸುತ್ತೇವೆ. ಕಣ್ಣಿನ ಆರೋಗ್ಯ ಮತ್ತು ದೃಷ್ಟಿಶಕ್ತಿಯನ್ನು ಉಳಿಸಿಕೊಳ್ಳಲು ನಾವು ಕಾಳಜಿ ವಹಿಸಬೇಕು. ಆರೋಗ್ಯಕರ ಡಯಟ್ ಮಾಡಿ : ಕಣ್ಣುಗಳಿಗಾಗಿ ಆರೋಗ್ಯಕರ ಪೌಷ್ಠಿಕ ಆಹಾರ ಸೇವಿಸಬೇಕು. ಸೊಪ್ಪು, ಮೊಳಕೆಕಾಳು, ನಟ್ಸ್, ಕಿತ್ತಳೆ, ನಿಂಬೆ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. ಧೂಮಪಾನ ಬಿಟ್ಟುಬಿಡಿ : ಆರೋಗ್ಯಕರ […]

Advertisement

Wordpress Social Share Plugin powered by Ultimatelysocial