ಬೆಂಗಳೂರು, ಸೆಪ್ಟಂಬರ್ 17: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಮಾತಿನ ಜಟಾಪಟಿ ಮುಂದುವರಿದಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತು ಬದಲಾಯಿಸುತ್ತಿದೆ. ಇದು ಊಸರವಳ್ಳಿ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸುದ್ದಿಗಾರರಿಗೆ ಕಾವೇರಿ ನೀರು ವಿವಾದ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿಕೆಯ ಪ್ರಶ್ನೆಗಳಿಗೆ ಶನಿವಾರ ಉತ್ತರಿಸಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ […]

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನ ಮಂತ್ರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಇಡೀ ಜಗತ್ತಿನ ಗಣ್ಯರೆಲ್ಲ ಪ್ರಧಾನಿ ಮೋದಿ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಹಾಗೇ ದೇಶದ ಪ್ರಮುಖ ನಾಯಕರು ಶುಭ ಕೋರಿದ್ದಾರೆ. ಇದೇ ಹೊತ್ತಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ.   ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ದೋಸ್ತಿ […]

ಮುಂಬೈ: ವಿರೋಧ ಪಕ್ಷಗಳ ಮೈತ್ರಿ ಕೂಟ INDIA (ಇಂಡಿಯಾ) ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಕರೆ ನೀಡಿದ್ದಾರೆ. ಮುಂಬೈನಲ್ಲಿ ಐಎನ್‌ಡಿಐಎ (ಇಂಡಿಯಾ) ಒಕ್ಕೂಟದ ಉನ್ನತಮಟ್ಟದ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಅವರು, ಬಿಜೆಪಿ (BJP) ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.ಮೈತ್ರಿಕೂಟದ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸುವುದಾಗಿ ಹೇಳಿವೆ ಎಂದರಲ್ಲದೇ, […]

ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸತ್ತಿರುವುದು ಕಂಡುಬಂದಿದ್ದು, ನಂತರ ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ರಾಂಚಿ: ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸತ್ತಿರುವುದು ಕಂಡುಬಂದಿದ್ದು, ನಂತರ ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಗೆಟಲ್ಸುಡ್ ಅಣೆಕಟ್ಟಿನಲ್ಲಿ ಮೀನು ಸಾಕಣೆಗೆಂದು ಹಾಕಲಾಗಿದ್ದ ನಾಲ್ಕು ಪಂಜರಗಳಲ್ಲಿ 500 ಗ್ರಾಂನಿಂದ 1 ಕೆಜಿ ತೂಕದ ಮೀನುಗಳು […]

ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಇಂದಿನಿಂದ ಮುಂದಿನ ಸೆಪ್ಟಂಬರ್ 22ರವರೆಗೂ ಮಳೆ ಬರಲಿದೆ. ಈ ಪೈಕಿ ಇಂದು ಭಾನುವಾರ ನಗರದಲ್ಲಿ ಮುಂಗಾರು ಮಳೆಯ ಸ್ವರೂಪ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಕೆವು ದಿನಗಳಿಂದ ಆಗಾಗ ಬಿರುಸು ಮಳೆ ಸುರಿಯುತ್ತಿದೆ. ನೆನ್ನೆ ಶನಿವಾರವು ನಗರದ ವಿವಿಧ ಬಡಾವಣೆಗಳಲ್ಲಿ ಸಹ ಜೋರು ಮಳೆ ಆಗಿದೆ. ಇಂದು ಭಾನುವಾರವು ಜೋರಾಗಿಯೇ ಮಳೆ ಬರುವ ಸಾಧ್ಯತೆಗಳು ಇದ್ದು, ಮಬ್ಬು […]

ನವದೆಹಲಿ: ಯುಜೀನ್ನಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ ಫೈನಲ್ನಲ್ಲಿ ನೀರಜ್ ಚೋಪ್ರಾ 83.80 ಮೀಟರ್ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ 84.24 ಮೀಟರ್ ಎಸೆದು ಡೈಮಂಡ್ ಲೀಗ್ ಚಾಂಪಿಯನ್ ಆದರು. ಚೋಪ್ರಾ 2022 ರಲ್ಲಿ 88.44 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಕಿರೀಟವನ್ನು ಗೆದ್ದಿದ್ದರು. ಚೋಪ್ರಾ ಈಗ ಸೆಪ್ಟೆಂಬರ್ 23ರಿಂದ ಹ್ಯಾಂಗ್ ಝೌನಲ್ಲಿ ಪ್ರಾರಂಭವಾಗುವ ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿದ್ದಾರೆ.

ನವದೆಹಲಿ : ಗೃಹ ಸಾಲಗಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಿಗ್ ರಿಲೀಫ್ ನೀಡಿದ್ದು, ಇತ್ತೀಚೆಗೆ ಹೊಸ ನಿಯಮಗಳನ್ನು ಹೊರತಂದಿದೆ.ಗೃಹ ಸಾಲ ತೆಗೆದುಕೊಂಡವರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಬಡ್ಡಿಯ ರೂಪದಲ್ಲಿ ದೊಡ್ಡ ಪ್ರಮಾಣದ ಹಣವನ್ನು ಉಳಿಸುವ ಸಾಧ್ಯತೆ ಇದೆ. ಆರ್ಬಿಐ ತಂದ ನಿಯಮಗಳು ಯಾವುವು? ಈಗ ಇವು ಗೃಹ ಸಾಲಗಾರರಿಗೆ ಯಾವ ಪ್ರಯೋಜನಗಳನ್ನು ತರುತ್ತವೆ ಎಂಬುದನ್ನು ಕಂಡುಹಿಡಿಯೋಣ. ಆರ್ಬಿಐ ಆಗಸ್ಟ್ 18 ರಂದು ಅಧಿಸೂಚನೆ ಹೊರಡಿಸಿದೆ. […]

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರವೂ (ಸೆಪ್ಟೆಂಬರ್‌ 17) ಬಂಗಾರದ ಬೆಲೆ (Gold Rate Today) ಏರಿಕೆಯಾಗಿದೆ. ಇದರೊಂದಿಗೆ ಸತತ ಮೂರನೇ ದಿನವೂ ಚಿನ್ನದ ಬೆಲೆ ಏರಿಕೆಯಾದಂತಾಗಿದ್ದು, ಖರೀದಿ ಮಾಡುವವರ ಜೇಬಿಗೆ ಕತ್ತರಿ ಬಿದ್ದಿದೆ. ನಗರದಲ್ಲಿ ಭಾನುವಾರ 22 ಕ್ಯಾರಟ್‌ನ ಒಂದು ಗ್ರಾಂಗೆ 20 ರೂ. ಹಾಗೂ 24 ಕ್ಯಾರಟ್‌ನ ಒಂದು ಗ್ರಾಂಗೆ 22 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂಗೆ 5,490 ರೂ. ಇದೆ. ಇದು ಶನಿವಾರ […]

ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿ ಸರ್ಕಾರದ ಇದುವರೆಗಿನ ಸಾಧನೆ ಮತ್ತು ಪಂಚ ಗ್ಯಾರಂಟಿಯ ಬಗ್ಗೆ ಮಾತನ್ನಾಡಿದ್ದಾರೆ. ಅದರ ಆಯ್ದ ಅಂಶ ಈ ರೀತಿಯಿದೆ: ಶಕ್ತಿ ಯೋಜನೆ: ರಾಜ್ಯದಾದ್ಯಂತ 4 ಸಾರಿಗೆ ನಿಗಮದ ಬಸ್ಸುಗಳಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ […]

ಹಬ್ಬಕ್ಕೆ ಹೊಸ ಕಾರು ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ. ಹೌದು. ಹೊಸ ಕಾರೊಂದು ಮಾರುಕಟ್ಟೆಗೆ ಪ್ರವೇಶಿಸಿದೆ. ಜೀಪ್ ಇಂಡಿಯಾ ಇತ್ತೀಚೆಗೆ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜೀಪ್ 2023ರ ಮಾದರಿಯನ್ನು ಕಂಪಾಸ್ ನಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ ಹಿಂದಿನ ಮಾದರಿಗಳಿಗಿಂತ ತುಂಬಾ ಕಡಿಮೆ ಎಂದು ಹೇಳಬಹುದು. ಆದ್ದರಿಂದ ಜೀಪ್ ಕಾರನ್ನು ಖರೀದಿಸಲು ಬಯಸುವವರು ಈ ಹೊಸ ಮಾದರಿಯನ್ನು ನೋಡಬಹುದು. ಈ ಹೊಸ ಮಾದರಿ ಹೇಗಿದೆ? ವೈಶಿಷ್ಟ್ಯಗಳು ಹೇಗಿವೆ? ಬೆಲೆ […]

Advertisement

Wordpress Social Share Plugin powered by Ultimatelysocial