ರಾಮನಗರ: ಪಬ್ಲಿಕ್ ಟಿವಿ ವರದಿಗಾರ ಹನುಮಂತ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲಾ ಕಾರಾಗೃಹದ ಮುಂಭಾಗದಲ್ಲಿ ನಡೆದಿದೆ.  ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತರು ಸಹೋದ್ಯೋಗಿಗಳು ಕಂಬನಿ‌ ಮಿಡಿದಿದ್ದಾರೆ.    

ಬೆಂಗಳೂರು.ಏ.21 : ಕಲಬುರಗಿಯಲ್ಲಿ ಬಲಿಯಾದ 80 ವರ್ಷದ ವೃದ್ಧನಿಗೆ ಮಾರಕ ಕೊರೊನಾ ಸೋಂಕು ತಗುಲಿದ್ದು ಖಚಿತವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮುಖಾಂತರ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಲಬುರ್ಗಿಯಲ್ಲಿ ನಿನ್ನೆ ಬೆಳಗ್ಗೆ ಸಾವನ್ನಪ್ಪಿದ 80 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಕಳೆದ 3 ವರ್ಷಗಳಿಂದ ಈ ವ್ಯಕ್ತಿ ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಿದರು.

ಬೆಂಗಳೂರು:  ಕಮೀಷನರ್ ಕಾರ್ಯ ವೈಖರಿ ವಿರುದ್ದ ಡಿಜಿ ಪ್ರವೀಣ್ ಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌ನಗರದಲ್ಲಿ ವಾಹನಗಳ ಸಂಚಾರ ದಿನೇ ದಿನೇ ಜಾಸ್ತಿಯಾಗ್ತಿದೆ.ಲಾಕ್ ಡೌನ್ ಏರಿಯಾಗಳಲ್ಲಿ ಟ್ರಾಫಿಕ್ ಪೊಲೀಸರು ಏನ್‌ ಕೆಲಸ ಮಾಡ್ತಿದ್ದಾರೆ..ಲಾಕ್ ಡೌನ್ ಏರಿಯಾಗಳಲ್ಲಿ ಇರೋ ಬ್ಯಾರಿಗೇಡ್ ಸಡನ್ ಆಗಿ ತೆಗೆದಿದ್ದಾರೆ.ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪಾಸ್ ಗಳನ್ನ ಚೆಕ್ ಮಾಡ್ತಿಲ್ಲ.ಟ್ರಾಪಿಕ್ ಅಧಿಕಾರಿಗಳು ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತೆ ಆಗ್ತಿಲ್ಲ..ಬೇರೆ ಜಿಲ್ಲೆಯ ಪಾಸ್ ಒಂದಿರುವ ವಾಹನಗಳು ಸಿಟಿಯಲ್ಲಿ ಓಡಾಡೋ […]

ಭಾರತ ವಿಶ್ವದ ಅತಿದೊಡ್ಡ ರಕ್ಷಣಾ ಸಾಮಗ್ರಿಗಳ ಆಮದು ರಾಷ್ಟ್ರ ಎಂದೇ ಹೇಳಲಾಗುತ್ತದೆ. ಆದರೆ, ರಕ್ಷಣಾ ಸಾಮಗ್ರಿಗಳ ರಫ್ತು ವಲಯದಲ್ಲೂ ಈಗ ನಿಧಾನವಾಗಿ ತನ್ನ ಅಸ್ತಿತ್ವ ಕಂಡುಕೊಳ್ಳಲಾರಂಭಿಸಿದೆ. ರಕ್ಷಣಾ ಸಚಿವಾಲಯದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಿಭಾಗದ ಪ್ರಕಾರ, ಕಳೆದ ೪ ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು ೫ ಪಟ್ಟು ಹೆಚ್ಚಳವಾಗಿದೆ. ಅಂದರೆ ೨೦೧೬-೧೭ನೇ ಸಾಲಿನಲ್ಲಿದ್ದ ೧,೫೨೧.೮೬ ಕೋಟಿ ರೂ. ರಫ್ತು ೨೦೧೯-೨೦ನೇ ಸಾಲಿಗೆ ೮,೬೨೦.೫೯ ಕೋಟಿ ರೂ.ಗೆ ಹೆಚ್ಚಾಗಿದೆ. ಈ […]

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ ವಾರ್ಡ ನಂ ೩೧ ರಲ್ಲಿ ಇಂದಿನಿಂದ ಲಾಕ್ ಡೌನ್ ಮುಗಿಯುವವರೆಗೆ ಅಂದರೆ ಮೇ.೩ ರವರೆಗೆ ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿ ಇಲಕಲ್ಲ ಅವರು ಮಾಡಿದ್ದಾರೆ. ಇದರ ನೇತೃತ್ವ ವಹಿಸಿದ ನಗರ ಸಭೆ ಸದಸ್ಯೆ ಶೋಭಾ ಅಮದಿಹಾಳ ಮತ್ತು ಯುವ ಮುಖಂಡ ಮಂಜು ಹೊಸಮನಿ ಹಾಗೂ ಅಶೋಕ ಛಲವಾದಿ ಹಮ್ಮಿಕೊಂಡಿದ್ದಾರೆ. ಚಿತ್ತರಗಿ ವಿಜಯ ಮಹಾಂತೇಶ ಮಠದ ಸ್ವಾಮಿಗಳು ಚಾಲನೆ ನೀಡಿ […]

ಕೊರೊನಾ ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಾಗ ಮಾತ್ರ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಭಂಧ ಹಿಂದಕ್ಕೆ ತೆಗೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾ ಹರಡುವಿಕೆ ಕಡಿಮೆಯಾಗಿ, ಭಾರತೀಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂಬ ವಿಶ್ವಾಸ ಬಂದಾಗ ಮಾತ್ರ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.

ಪಾದರಾಯನಪುರದಲ್ಲಿ ಬಿ.ಬಿ.ಎಂ.ಪಿ.   ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಹಾಗೂ ಪೋಲಿಸರ ಮೇಲೆ ನಡೆದ ಹಲ್ಲೆಯ ಘಟನೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಖಂಡಿಸಿದ್ದಾರೆ. ಇಂತಹ ಘಟನೆಗಳು ಪುನರಾ ಆಗದಂತೆ ತಡೆಯಬೇಕಾದರೆ ಹಲ್ಲೆ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೋವಿಡ್-೧೯ ಗೆ ಸಂಬಂಧಿಸಿದ ಸಾರ್ವಜನಿಕರ ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯ ಟ್ವಿಟರ್ ಸೇವಾ ಎಂಬ ವಿನೂತನ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. ತ್ವರಿತಗತಿಯಲ್ಲಿ ಅತಿ ಹೆಚ್ಚು ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯವಿಧಾನಗಳನ್ನು ಆರೋಗ್ಯ ಸಚಿವಾಲಯ ಟ್ವಿಟರ್ ಅಳವಡಿಸಿಕೊಂಡಿದೆ. ಕೋವಿಡ್ ತಡೆಗೆ ಸರ್ಕಾರ ಕೈಗೊಂಡಿರುವ ಇತ್ತೀಚಿನ ಕ್ರಮಗಳು, ಆರೋಗ್ಯ ಸೇವೆಗಳನ್ನು ಪಡೆಯುವ ಮಾರ್ಗ, ರೋಗ ಲಕ್ಷಣಗಳು ಕಾಣಿಸಿಕೊಂಡವರಿಗೆ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿ, ಸಾರ್ವಜನಿಕರ ಅಗತ್ಯತೆಗಳಿಗೆ ಅಧಿಕಾರಿಗಳನ್ನು ಸಂಪರ್ಕಿಸುವುದು ಹೀಗೆ ಹಲವಾರು ವಿಷಯಗಳ ಕುರಿತ ಪ್ರಶ್ನೆಗಳಿಗೆ […]

  ಗುವಾಹಟಿ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಆದೇಶಿಸಿಸಲಾಗಿದೆ. ಆದ್ರೆ ಅರುಣಾಚಲ ಪ್ರದೇಶದಲ್ಲಿ ಬೇಟೆಗಾರರ ಗುಪೊಂದು ಹಬ್ಬದೂಟಕ್ಕಾಗಿ ೧೨ ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಂದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ರತನ್ ಟಾಟಾ ಅವರ ಸ್ಟಾರ್ಟ್ ಅಪ್ ಕಂಪನಿಯು ಈ ಸಮಯದಲ್ಲಿ ಲಾಭ ಪಡೆದಿದೆ. ಈ ಟಾಟಾ ಕಂಪನಿಯು ಮೊಬೈಲ್ ಪೆಟ್ರೋಲ್ ಪಂಪ್ ಸೇವೆ ನೀಡುತ್ತದೆ. ಕಂಪನಿಯ ಹೋಮ್ ಡಿಲೆವರಿ ಮಾದರಿಯಿಂದಾಗಿ ಈ ಕಂಪನಿಯ ಬೇಡಿಕೆ ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಪುಣೆ ಮೂಲದ ರೆಪೊಸ್ […]

Advertisement

Wordpress Social Share Plugin powered by Ultimatelysocial