Cauvery dispute: ಕಣಮಿಣಿಕೆ ಟೋಲ್ ಬಳಿ ಕನ್ನಡಪರ ಸಂಘಟನೆಗಳ ಸಮರ, ಮಹಿಳೆಯರಿಂದ ಉರುಳು ಸೇವೆ

ರಾಮನಗರ, ಸೆಪ್ಟೆಂಬರ್‌, 13: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಈಗಾಗಲೇ ರಾಜ್ಯಾದ್ಯಂತ ಸಮರಗಳು ನಡೆಯುತ್ತಿವೆ. ಅದೇ ರೀತಿ ಇಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಕಣಮಿಣಿಕೆ ಟೋಲ್ ಬಳಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲವನ್ನು ಮಾಡಿದ್ದಾರೆ.

ಈ ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಬೇಕೆಂದು ಕಣಮಿಣಿಕ್ ಟೋಲ್ ಬಳಿ ಹೆದ್ದಾರಿಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಮಹಿಳೆಯರು ಹೈವೆಯಲ್ಲಿ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಲ್ಲದೆ, ಬಿಂದಿಗೆ ಹಿಡಿದು 420 ಸಿದ್ದರಾಮಯ್ಯ, 420 ಡಿ.ಕೆ.ಶಿವಕುಮಾರ್‌ ಸರ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕಣಮಿಣಕಿ ಟೋಲ್ ಬಳಿ ಹೆದ್ದಾರಿ ತಡೆ ಮಾಡಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಸರ್ಕಾರ ಪೊಲೀಸರನ್ನು ಬಳಸಿ ಹೋರಾಟ ಹತ್ತಿಕ್ಕಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಕೇರಳದಲ್ಲಿ ನಿಫಾ ವೈರಸ್ ನಿಂದ ಇಬ್ಬರ ಸಾವು: ಕೇಂದ್ರ ಆರೋಗ್ಯ ಸಚಿವ

Wed Sep 13 , 2023
ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ದೃಢಪಡಿಸಿದ್ದಾರೆ. ಕೋಯಿಕ್ಕೋಡ್: ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ದೃಢಪಡಿಸಿದ್ದಾರೆ. ನಿಫಾ ವೈರಾಣು ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ತಜ್ಞರ ತಂಡವನ್ನು ಕೇಂದ್ರದಿಂದ ಕಳಿಸಲಾಗಿದ್ದು ಈ ತಂಡ ಕೇರಳ ಸರ್ಕಾರಕ್ಕೆ ವೈರಾಣು ನಿಯಂತ್ರಣದಲ್ಲಿ ಸಹಾಯ ಮಾಡಲಿದೆ ಎಂದು […]

Advertisement

Wordpress Social Share Plugin powered by Ultimatelysocial