ದೇಶದ ಮೊಟ್ಟ ಮೊದಲ ʼಡ್ರೋನ್ʼ ಶಾಲೆ ಲೋಕಾರ್ಪಣೆ

ದೇಶದಲ್ಲಿ ಮೊಟ್ಟ ಮೊದಲ ಡ್ರೋನ್​ ಶಾಲೆಯು ಆರಂಭಗೊಂಡಿದೆ. ಮಾರ್ಚ್​ 10ರಂದು ಗ್ವಾಲಿಯರ್​ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊಂಡಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​​ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಈ ಡ್ರೋನ್​ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು.ಈ ಹೊಸ ಪ್ರಯತ್ನದ ಬಗ್ಗೆ ಇಬ್ಬರೂ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ರೀತಿಯ ತಂತ್ರಜ್ಞಾನವು ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲಿದೆ ಎಂದು ಹೇಳಿದರು. ‘

ಈ ವಿಚಾರವಾಗಿ ಮಾತನಾಡಿದ ಸಿಎಂ ಚೌಹಾಣ್, ಡ್ರೋನ್ ತಂತ್ರಜ್ಞಾನವು ಯುವಕರಿಗೆ ವಿಶೇಷವಾಗಿ ಕಲಿಕೆಗೆ ಹೊಸ ಮಾರ್ಗಗಳು ಮತ್ತು ಅವಕಾಶಗಳನ್ನು ತೆರೆಯುತ್ತದೆ. ರಾಜ್ಯದ ಮೊದಲ ಡ್ರೋನ್ ಶಾಲೆಯನ್ನು ಗ್ವಾಲಿಯರ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಉದ್ಯಮದಲ್ಲಿ ಡ್ರೋನ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾದ್ದರಿಂದ ದೊಡ್ಡ ಉದ್ಯೋಗಾವಕಾಶವಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ. ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

Fri Mar 11 , 2022
  ಬೆಂಗಳೂರು: ತಮ್ಮನ್ನು ತಳ್ಳಿ ಅವಮಾನಿಸುವ ಯಾವುದೇ ಉದ್ದೇಶ ಇಲ್ಲ, ನನ್ನ ಅರಿವಿನಲ್ಲೂ ಇಲ್ಲ. ಜನರ ಗುಂಪಿನಲ್ಲಿ ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ದರೆ ವಿಷಾದಿಸುವೆ… ಎಂದು ಮಾಜಿ ಶಾಸಕ ಬಿ.ಆರ್​. ಪಾಟೀಲ್​ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕ್ಷಮೆ ಕೋರಿದ್ದಾರೆ. ಮೇಕೆದಾಟು ಪಾದಯಾತ್ರೆಯ ವೇಳೆ ಬಿ.ಆರ್​. ಪಾಟೀಲ್​ ಅವರನ್ನು ತಳ್ಳಿ, ಟೋಪಿ ಕಿತ್ತು ಹಾಕಿದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ. ಪಾದಯಾತ್ರೆ ಅರಮನೆ ಮೈದಾನಕ್ಕೆ […]

Advertisement

Wordpress Social Share Plugin powered by Ultimatelysocial