ವಿಭಿನ್ನ ಕಾನ್ಸೆಪ್ಟ್‌ನ ‘ಕಾಕ್ಟೈಲ್’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

 

ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸ ಹೊಸ ಮಾದರಿಯ ಸಿನಿಮಾಗಳದ್ದೇ ಹವಾ. ಸದ್ಯ ಇಲ್ಲೊಂದು ಹೊಸ ತಂಡ ‘ಕಾಕ್ಟೈಲ್’ ಹೆಸರಿನ ಹೊಸ ಸಿನಿಮಾವನ್ನು ಮಾಡಿದೆ. ಜನವರಿ 6ರಂದು ಈ ಸಿನಿಮಾ ತೆರೆಗೆ ಬರಲಿದೆ. ಆಕ್ಷನ್, ಕ್ರೈಮ್, ಸೆಂಟಿಮೆಂಟ್, ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲ ಮಾದರಿಯ ಅಂಶಗಳು ‘ಕಾಕ್ಟೈಲ್’ ಸಿನಿಮಾದಲ್ಲಿವೆಯಂತೆ. ಈ ಸಿನಿಮಾ ಸಿದ್ಧವಾಗಲು ಡಾ. ಪುನೀತ್ ರಾಜ್‌ಕುಮಾರ್ ಅವರು ಕಾರಣ ಎನ್ನುತ್ತಾರೆ ಸಿನಿಮಾದ ನಿರ್ಮಾಪಕ ಡಾ. ಶಿವಪ್ಪ. ‘ಕಾಕ್ಟೈಲ್’ ಸಿನಿಮಾದ ಟ್ರೇಲರ್ ಅನ್ನು ಈಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಹಾರೈಸಿದರು.ಈ ಸಿನಿಮಾಗೆ ಶ್ರೀರಾಮ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ‘ಚಿತ್ರರಂಗದೊಂದಿಗೆ ನನಗೆ 15 ವರ್ಷಗಳಿಂದ ಜೊತೆ ನಂಟು ಇದೆ. ‘ಕಾಕ್ಟೈಲ್’ ಸಿನಿಮಾವು ವಿಭಿನ್ನ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಇದು ಒಂದು ಜಾನರ್‌ನ ಚಿತ್ರವಲ್ಲ. ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನ ಹೊಸದಾಗಿದೆ. ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದರು. ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ ಎಂದು ಹೇಳುತ್ತೇನೆ. ನಮ್ಮ ಸಿನಿಮಾದ ನಿರ್ಮಾಪಕರಾದ ನಿವೃತ್ತ ಐಎಎಸ್ ಅಧಿಕಾರಿ ಡಾ. ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಸಿಕ್ಕರೆ, ಮುಂದಿನ ದಿನಗಳಲ್ಲಿ ‘ಕಾಕ್ಟೈಲ್’ ಪಾರ್ಟ್ 2 ಮಾಡುತ್ತೇವೆ..’ ಎಂದರು ನಿರ್ದೇಶಕ ಶ್ರೀರಾಮ್.ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಹೀರೋ ವೀರೆನ್ ಕೇಶವ್, ‘ನಾಲ್ಕೈದು ಡ್ರಿಂಕ್ಸ್‌ಗಳ ಮಿಶ್ರಣಕ್ಕೆ ‘ಕಾಕ್ಟೈಲ್ ಎನ್ನುತ್ತಾರೆ.‌ ನಮ್ಮ ಸಿನಿಮಾದಲ್ಲೂ ಹಾಗೆ ಇದೆ. ಇಲ್ಲಿ ಲವ್ ಇದೆ, ಆದರೆ ಇದು ಲವ್‌ ಸ್ಟೋರಿ ಸಿನಿಮಾ‌ ಅಲ್ಲ… ಸೆಂಟಿಮೆಂಟ್ ಇದೆ, ಆದರೆ ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲಾ ಅಂಶಗಳನ್ನು ಒಳಗೊಂಡಿರುವ ಬೇರೆಯದೇ ರೀತಿಯ ಸಿನಿಮಾ ಇದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದಗಳು..’ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹಾಕಿ ಕ್ರೀಡೆಯನ್ನಾಧರಿಸಿದ 'ಜರ್ಸಿ ನಂಬರ್ 10' ಸಿನಿಮಾ ರಿಲೀಸ್‌ಗೆ ರೆಡಿ

Thu Dec 29 , 2022
ಸ್ಯಾಂಡಲ್‌ವುಡ್‌ನಲ್ಲಿ ಕ್ರೀಡೆಯನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಕ್ರೀಡೆ ಎಂದಾಗ ಎಲ್ಲರೂ ಕ್ರಿಕೆಟ್‌ನತ್ತಲೇ ಮುಖ ಮಾಡುತ್ತಾರೆ. ಆದರೆ ನಟ ಆದ್ಯ ತಿಮ್ಮಯ್ಯ ಎಂ. ಅವರು ಹಾಕಿ ಕ್ರೀಡೆ ಬಗ್ಗೆ ಸಿನಿಮಾ ಮಾಡಿದ್ದಾರೆ. ಹೌದು, ತಾವೇ ಹೀರೋ ಆಗಿ ನಟಿಸುವುದರ ಜೊತೆಗೆ ಆ ಸಿನಿಮಾವನ್ನು ನಿರ್ಮಾಣ ಮಾಡಿ, ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಸದ್ಯ ಟ್ರೇಲರ್ ಲಾಂಚ್ ಆಗಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾಗೆ ‘ಜರ್ಸಿ […]

Advertisement

Wordpress Social Share Plugin powered by Ultimatelysocial