ಆರ್ಟಿಕಲ್ 370 ರದ್ದತಿ ಬಳಿಕ ಕಾಶ್ಮೀರದಲ್ಲಿ ಭಾರಿ ಸಂಖ್ಯೆಯ ಉಗ್ರರ ಹತ್ಯೆ : ಮಾಹಿತಿ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ನಂತರ 439 ಭಯೋತ್ಪಾದಕರ ಹತ್ಯೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.ರಾಜ್ಯಸಭೆಯಲ್ಲಿ ರಾಜ್ಯಖಾತೆಯ ಸಚಿವ ನಿತ್ಯಾನಂದ ರೇ ಅವರು ಈ ಮಾಹಿತಿ ನೀಡಿದ್ದು, ಸೇನಾಪಡೆಗಳು ಕಾರ್ಯಾಚರಣೆ ನಡೆಸಿ 439 ಉಗ್ರರನ್ನು ಹತ್ಯೆಗೈದಿರುವ ಬಗ್ಗೆ ವಿವರ ನೀಡಿದರು.ಈ ಅವಧಿಯಲ್ಲಿ 98 ನಾಗರಿಕರು ಮತ್ತು 109 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 541 ಭಯೋತ್ಪಾದಕ ಘಟನೆಗಳು ವರದಿಯಾಗಿವೆ ಎಂದು ತಿಳಿಸಿದರು.ಓರ್ವ ಉಗ್ರನ ಹತ್ಯೆಶೋಪಿಯಾನ್ ನಡಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ ಎನ್ಕೌಂಟರ್ ನಡೆದಿದ್ದು, ಒಬ್ಬ ಭಯೋತ್ಪಾದಕ ಹತ್ಯೆ ಯಾಗಿದ್ದಾನೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

EGG WHITE:ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ;

Wed Feb 2 , 2022
ನವದೆಹಲಿ : ಮೊಟ್ಟೆಯ ಹಳದಿ ಭಾಗವನ್ನು ತಿಂದರೆ ಬೊಜ್ಜು ಹೆಚ್ಚಾಗುವುದರಿಂದ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನಬೇಕು ಎನ್ನುವ ಭಾವನೆ ಅನೇಕರಲ್ಲಿದೆ (egg white benefits) . ಆದರೆ, ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುತ್ತದೆ. ತುಕ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನದೇ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತೀರಿ ಎನ್ನುವುದು ಕೂಡಾ ತಿಳಿದುಕೊಳ್ಳಬೇಕಾದ ಅಂಶ (Side effects of egg white). ಕೇವಲ ಮೊಟ್ಟೆಯ […]

Advertisement

Wordpress Social Share Plugin powered by Ultimatelysocial