“ಭಯೋತ್ಪಾದನೆ” ಎಂದು ಕರೆಯಬಹುದು ಎಂದು ಅಲ್ಲಿನ ರಾಜ್ಯ ಗೃಹ ಇಲಾಖೆ ಹೇಳಿದೆ.

ಉತ್ತರ ಪ್ರದೇಶದ ಗೋರಖ್‌ನಾಥ ದೇವಸ್ಥಾನದ ಹೊರಗೆ ನಡೆಯಬಾರದ ಅವಘಡವೊಂದು ನಡೆದುಹೋಯಿತು. ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ದಾಳಿಯನ್ನು “ಭಯೋತ್ಪಾದನೆ” ಎಂದು ಕರೆಯಬಹುದು ಎಂದು ಅಲ್ಲಿನ ರಾಜ್ಯ ಗೃಹ ಇಲಾಖೆ ಹೇಳಿದೆ.

ಐಐಟಿ ಪದವೀಧರ ಮುರ್ತಾಜಾ ಅಹ್ಮದ್ ಅಬ್ಬಾಸಿ ಎಂಬಾತ ಇಬ್ಬರು ಪಿಎಸಿ ಕಾನ್‌ಸ್ಟೆಬಲ್‌ಗಳ ಮೇಲೆ ಗೋರಖ್‌ನಾಥ್ ದೇವಸ್ಥಾನದ ಹೊರಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆತನು ಇಸ್ಲಾಮಿಕ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಅವರ ವಿಡಿಯೋಗಳನ್ನು ಹೆಚ್ಚೆಚ್ಚು ವೀಕ್ಷಿಸುತ್ತಿದ್ದನೆಂದು ಗೊತ್ತಾಗಿದೆ.

ಆರೋಪಿಯ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಡೇಟಾವನ್ನು ಪರಿಶೀಲಿಸಲಾಗುತ್ತಿದೆಯಾದರೂ, ವಿವಾದಿತ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಅವರ ಕೆಲವು ವೀಡಿಯೊಗಳು ಪತ್ತೆಯಾಗಿವೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಝಾಕಿರ್ ನಾಯ್ಕ್ ಯಾರು?
ಜಾಕಿರ್ ನಾಯಕ್ ಒಬ್ಬ ಭಾರತೀಯ ಇಸ್ಲಾಮಿಕ್ ಟೆಲಿವಾಂಜೆಲಿಸ್ಟ್. ಧರ್ಮ ಬೋಧಕ, ಆತ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮತ್ತು ಪೀಸ್ ಟಿವಿ ನೆಟ್‌ವರ್ಕ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ.

ಢಾಕಾ ಕೆಫೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿ 22 ಮಂದಿ ಸಾವಿಗೀಡಾದ ನಂತರ ಈ ನಾಯಕ್ ದೇಶ ಬಿಟ್ಟು ಓಡಿಹೋದ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದ್ದರೂ ಸಹ ಬಾಂಬ್ ಸ್ಫೋಟದ ಶಂಕಿತರು ನಾಯಕ್ ಅಭಿಮಾನಿಗಳಾಗಿದ್ದರು.

2016ರಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ ಬಳಿಕ ನಾಯಕ್ ಭಾರತಕ್ಕೆ ಹಿಂತಿರುಗಿರಲಿಲ್ಲ. ಭಯೋತ್ಪಾದನೆಗೆ ಹಣಕಾಸು ನೆರವು, ದ್ವೇಷಪೂರಿತ ಭಾಷಣ, ಕೋಮು ದ್ವೇಷವನ್ನು ಪ್ರಚೋದಿಸುವುದು ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಆತ ಭಾರತೀಯ ಅಧಿಕಾರಿಗಳಿಗೆ ಬೇಕಾಗಿದ್ದಾನೆ.

ಆತನ ವಿವಾದಾತ್ಮಕ ಬೋಧನೆಗಳಿಂದಾಗಿ, ಭಾರತ, ಕೆನಡಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ನಾಯಕ್‌ನ ಪೀಸ್ ಟಿವಿ ಚಾನೆಲ್ ಅನ್ನು ನಿಷೇಧಿಸಲಾಗಿದೆ. ಆತ ಮಲೇಷ್ಯಾದಲ್ಲಿ ಶಾಶ್ವತ ನಿವಾಸ ಹೊಂದಿದ್ದರೂ ಸಹ, ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ 2020ರಲ್ಲಿ ಆ ದೇಶದಲ್ಲಿ ಭಾಷಣ ಮಾಡುವುದನ್ನು ನಿಷೇಧಿಸಲಾಯಿತು.

ಹಿಂದೂ ಮತ್ತು ಚೀನೀ ಸಮುದಾಯಗಳ ಬಗ್ಗೆ ಟೀಕೆ ಮಾಡುವ ಮೂಲಕ ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಉರ್ದು ಮಾತನಾಡಿಲ್ಲ ಅನ್ನೋ ಕಾರಣಕ್ಕೆ ಚಂದ್ರು ಹತ್ಯೆ'

Wed Apr 6 , 2022
  ಬೆಂಗಳೂರು : ಬೆಂಗಳೂರಿನಲ್ಲಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗಜ್ಞಾನೇಂದ್ರ ಸ್ಪೋಟಕ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನ ಜೆ.ಜೆ.ನಗರದಲ್ಲಿ ದಲಿತ ಯುವಕ ಚಂದ್ರುವನ್ನು ನಾಲ್ವರು ಕೊಲೆ ಮಾಡಿದ್ದಾರೆ. ಚಂದ್ರು ಉರ್ದು ಮಾತನಾಡಿಲ್ಲ ಎಂದು ಕೊಲೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಚಂದ್ರ ಜೆಜೆ ನಗರಕ್ಕೆ ಬೈಕ್ ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು […]

Advertisement

Wordpress Social Share Plugin powered by Ultimatelysocial