U19 Asia Cup: 7 ಸಿಕ್ಸರ್, ಒಂದೇ ಓವರ್‌ನಲ್ಲಿ 27 ರನ್! ಭಾರತ ವಿರುದ್ಧ ಅಬ್ಬರಿಸಿದ 18ರ ಹರೆಯದ ಅಫ್ಘಾನ್ ಬ್ಯಾಟರ್

U-19 Asia Cup: ಈ ಓವರ್‌ನಲ್ಲಿ ಇಜಾಜ್ 3 ಸಿಕ್ಸರ್ ಬಾರಿಸಿದರೆ, ಅವರ ಜೊತೆಗಾರ ಖೈಬರ್ ವಾಲಿ ಕೂಡ ಬೌಂಡರಿ ಬಾರಿಸಿ 27 ರನ್ ಗಳಿಸಿದರು. ಇಜಾಜ್ ಅಹ್ಮದ್ ಕೇವಲ 68 ಎಸೆತಗಳಲ್ಲಿ 86 ರನ್ ಗಳಿಸಿದರು.ಭಾರತ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದು, ಅಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ.

ಭಾರತದ ಎಲ್ಲಾ ಅಭಿಮಾನಿಗಳ ಕಣ್ಣು ಈ ಟೆಸ್ಟ್ ಸರಣಿಯ ಮೇಲಿದೆ. ಅದೇ ಸಮಯದಲ್ಲಿ, ಭಾರತದ ಜೂನಿಯರ್ ಕ್ರಿಕೆಟಿಗರು ಕೂಡ ಆಕ್ಷನ್‌ನಲ್ಲಿದ್ದು, ಅಂಡರ್-19 ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದಾರೆ. ಈ ತಯಾರಿಯ ಅಡಿಯಲ್ಲಿ, ಭಾರತೀಯ ಅಂಡರ್-19 ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅಂಡರ್-19 ಏಷ್ಯಾ ಕಪ್ ಅನ್ನು ಆಡುತ್ತಿದೆ. ಯುಎಇ ವಿರುದ್ಧ ಗೆದ್ದು ಪಾಕಿಸ್ತಾನದ ವಿರುದ್ಧ ಸೋತ ನಂತರ ಭಾರತ ತಂಡ ಡಿಸೆಂಬರ್ 27 ಸೋಮವಾರ ಅಫ್ಘಾನಿಸ್ತಾನ ವಿರುದ್ಧ ಮೈದಾನಕ್ಕಿಳಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ ತಂಡದ ಬೌಲರ್ ಹೆಚ್ಚಿನ ಸಮಯ ಉತ್ತಮ ಪ್ರದರ್ಶನ ನೀಡಿದ್ದರು, ಆದರೆ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಭಾರತೀಯ ಬೌಲರ್‌ಗಳ ಮೇಲೆ ಸಿಡಿದು ಸಿಕ್ಸರ್‌ಗಳ ಮಳೆಗರೆದರು.

 

ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸೋಮವಾರ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಭಾರತ ಬಿಗಿಯಾದ ಆರಂಭವನ್ನು ಪಡೆದುಕೊಂಡಿತು ಮತ್ತು ಮೊದಲ 19 ಓವರ್‌ಗಳಲ್ಲಿ ಕೇವಲ 63 ರನ್‌ಗಳನ್ನು ಬಿಟ್ಟುಕೊಟ್ಟು 2 ವಿಕೆಟ್‌ಗಳನ್ನು ಪಡೆಯಿತು. 29ನೇ ಓವರ್ ವೇಳೆಗೆ ಅಫ್ಘಾನಿಸ್ತಾನ 3 ವಿಕೆಟ್ ಕಳೆದುಕೊಂಡು ಕೇವಲ 101 ರನ್ ಗಳಿಸಿತ್ತು. ಅಫ್ಘಾನಿಸ್ತಾನಕ್ಕೆ ದೊಡ್ಡ ಇನ್ನಿಂಗ್ಸ್‌ನ ಅಗತ್ಯವಿತ್ತು. ನಾಯಕ ಸುಲಿಮಾನ್ ಸಫಿ ಇಜಾಜ್ ಅಹ್ಮದ್ ಅಹ್ಮದ್‌ಜಾಯ್ ಅವರೊಂದಿಗೆ ತಂಡದ ಜವಬ್ದಾರಿ ವಹಿಸಿಕೊಂಡರು ಮತ್ತು 88 ರನ್‌ಗಳ ಪಾಲುದಾರಿಕೆ ಮಾಡಿದರು. ಸುಲಿಮಾನ್ 86 ಎಸೆತಗಳಲ್ಲಿ 73 ರನ್ ಗಳಿಸಿ ಔಟಾದರು. ಅವರು 7 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಅವರನ್ನು ವೇಗದ ಬೌಲರ್ ರಾಜ್ಯವರ್ಧನ್ ಹಂಗರ್ಗೇಕರ್ ಔಟ್ ಮಾಡಿದರು.

 

1 ಓವರ್‌ನಲ್ಲಿ 27 ರನ್, ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್
ಸುಲಿಮಾನ್ ಅವರ ವಿಕೆಟ್ ನಂತರ, ಭಾರತೀಯ ಬೌಲರ್‌ ಇಜಾಜ್ ಅಹ್ಮದ್ ಅವರ ಕೆಂಗಣ್ಣಿಗೆ ಗುರಿಯಾದರು. ಈ 18ರ ಹರೆಯದ ಬಲಗೈ ಬ್ಯಾಟ್ಸ್‌ಮನ್ ಕೊನೆಯ ಓವರ್‌ಗಳಲ್ಲಿ ಭಾರತದ ಬೌಲರ್‌ಗಳನ್ನು ಥಳಿಸಿ ಸಾಕಷ್ಟು ಸಿಕ್ಸರ್‌ಗಳನ್ನು ಬಾರಿಸಿದರು. ಈ ಯುವ ಬ್ಯಾಟ್ಸ್‌ಮನ್ ನಿರ್ದಿಷ್ಟ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹಂಗರ್‌ಗೆಕರ್‌ಗೆ ಸಾಕಷ್ಟು ಸಿಕ್ಸರ್ ಹೊಡೆದರು. ಈ ಓವರ್‌ನಲ್ಲಿ ಇಜಾಜ್ 3 ಸಿಕ್ಸರ್ ಬಾರಿಸಿದರೆ, ಅವರ ಜೊತೆಗಾರ ಖೈಬರ್ ವಾಲಿ ಕೂಡ ಬೌಂಡರಿ ಬಾರಿಸಿ 27 ರನ್ ಗಳಿಸಿದರು. ಇಜಾಜ್ ಅಹ್ಮದ್ ಕೇವಲ 68 ಎಸೆತಗಳಲ್ಲಿ 86 ರನ್ ಗಳಿಸಿದರು. ಈ ವೇಳೆ ಅವರು 7 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಇಜಾಜ್ ಹೊರತಾಗಿ ಖೈಬರ್ ವಾಲಿ ಕೂಡ 12 ಎಸೆತಗಳಲ್ಲಿ 20 ರನ್ ಗಳಿಸಿದರು.

 

ಕೊನೆಯ ಓವರ್ ಹಂಗೇಕರ್ ದುಬಾರಿ
ಕೊನೆಯ ಓವರ್‌ನ ಈ ದಾಳಿಯ ಆಧಾರದ ಮೇಲೆ ಅಫ್ಘಾನಿಸ್ತಾನ ಅಂಡರ್-19 ತಂಡ 259 ರನ್ ಗಳಿಸಿತು. ಈ ಪಂದ್ಯವು ಭಾರತದ ಯುವ ವೇಗಿ ಹಂಗೇರ್‌ಗೆಕರ್‌ಗೆ ಉತ್ತಮವಾಗಿರಲಿಲ್ಲ. ಅವರು ತಮ್ಮ 10 ಓವರ್‌ಗಳಲ್ಲಿ 74 ರನ್‌ಗಳನ್ನು ನೀಡಿದರು. ಆದರೆ ಅವರ ಖಾತೆಯಲ್ಲಿ ಕೇವಲ 1 ಯಶಸ್ಸು ಮಾತ್ರ ಬಂದಿತು. ವಿಕ್ಕಿ ಓಸ್ತ್ವಾಲ್ (1/35) ಮತ್ತು ಕೌಶಲ್ ತಾಂಬೆ (1/28) ಭಾರತಕ್ಕೆ ಅತ್ಯಂತ ಪರಿಣಾಮಕಾರಿ ಬೌಲರ್ ಎಂದು ಸಾಬೀತುಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾದ ಮಹೀಂದ್ರಾ ಎಲೆಕ್ಟ್ರಿಕ್

Mon Dec 27 , 2021
ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಮುಂದಾಗಿದೆ. ಇದರೊಂದಿಗೆ ಕಂಪನಿಯು 6 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್‌ ವಾಹನಗಳಲ್ಲಿ ಹೊಸ ಮಾದರಿಯ ಎಲೆಕ್ಟ್ರಿಕ್ ತ್ರಿ ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಸೇರಿವೆ. ಕಂಪನಿಯು ಈ ವಿಭಾಗದಲ್ಲಿ ರೂ. 300 ಕೋಟಿ ಹೂಡಿಕೆ ಮಾಡಿ ತನ್ನದೇ ಆದ ಹಿಡಿತವನ್ನು ಸಾಧಿಸಲು ಬಯಸಿದೆ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ […]

Advertisement

Wordpress Social Share Plugin powered by Ultimatelysocial