ರಣಬೀರ್ ಕಪೂರ್‌ಗೆ ಆಲಿಯಾ ಭಟ್ ಆರ್ಡರ್‌ ಮಾಡಿದ್ದೇನು?

ಬಾಲಿವುಡ್ ಸೆಲೆಬ್ರಿಟಿಯೊಬ್ಬರು ಪಿಜ್ಜಾ ಆರ್ಡರ್ (Pizza Order) ಮಾಡಲು ಅಂಗಡಿಯವರಿಗೆ ಕರೆ ಮಾಡಿದರೆ, ಅವರು ಒಂದು ಕ್ಷಣ ಆಶ್ಚರ್ಯಚಕಿತರಾಗುವುದು ಸಾಮಾನ್ಯ. ಜನಸಾಮಾನ್ಯರು ಪಿಜ್ಜಾ ಆರ್ಡರ್‌ಗಳಿಗೆ ಕರೆ ಮಾಡುತ್ತಾರೆ. ಆದರೆ ಸೆಲೆಬ್ರಿಟಿಗಳು ಕರೆ ಮಾಡಿದಾಗ ಕರೆ ಸ್ವೀಕರಿಸಿದ ಅಂಗಡಿಯವರು ಕೊಂಚ ಗೊಂದಲಕ್ಕೆ ಒಳಗಾಗಬಹುದು.

ಇಲ್ಲೊಂದು ಘಟನೆಯಲ್ಲಿ ಮಿಮಿಕ್ರಿ ಕಲಾವಿದರೊಬ್ಬರು ಪಿಜ್ಜಾ ಡೆಲಿವರಿ ಕಂಪನಿಯೊಂದರ ಕೆಲಸಗಾರರಿಗೆ ಸರಿಯಾಗಿ ಮಕ್ಕರ್‌ ಮಾಡಿದ್ದಾರೆ.

ಪಿಜ್ಜಾ ಆರ್ಡರ್ ಮಾಡುವಾಗ ಆಲಿಯಾ ಭಟ್‌ ಧ್ವನಿ ಕೇಳಿಸಿದೆ. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರ ಧ್ವನಿಯಲ್ಲಿ ಮಾತನಾಡಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಪಿಜ್ಜಾ ಆರ್ಡರ್ ಮಾಡುವಾಗ, ಹುಡುಗಿ ಆಲಿಯಾ ಭಟ್ ಅವರಂತೆಯೇ ಮಾತನಾಡಿದ್ದಾಳೆ. ಆಲಿಯಾ ಧ್ವನಿ ಕೇಳಿದ ನಂತರ, ಪಿಜ್ಜಾ ಅಂಗಡಿಯ ಕೆಲಸಗಾರ ಸ್ವಲ್ಪ ಗಲಿಬಿಲಿಗೊಂಡಿದ್ದಾನೆ.

ಮಿಮಿಕ್ರಿ ಕಲಾವಿದರು ಪಿಜ್ಜಾ ಕೆಲಸಗಾರನ ಜೊತೆ ಇಂತಹ ಜೋಕ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಈ ವಿಡಿಯೋ ಸಖತ್‌ ವೈರಲ್ (Video Viral) ಆಗುತ್ತಿದೆ. ಚಾಂದಿನಿ ಎಂಬ ಮಿಮಿಕ್ರಿ ಕಲಾವಿದೆ ಆಲಿಯಾ ಭಟ್ ಅವರಂತೆ ಮಾತನಾಡಿದ್ದಾರೆ. ಮಿಮಿಕ್ರಿ ಸಮಯದಲ್ಲಿ ರಣಬೀರ್ ಕಪೂರ್ ಹೆಸರನ್ನು ಸಹ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಮಹಿಳೆ ಪಿಜ್ಜಾ ಔಟ್‌ಲೆಟ್‌ಗೆ ಕರೆ ಮಾಡಿ ಆಲಿಯಾ ಭಟ್ ಅವರಂತೆಯೇ ಮಾತನಾಡುತ್ತಿರುವುದನ್ನು ನಾವು ನೋಡಬಹುದು. ಧ್ವನಿ ಕೇಳಿದ ನಂತರ, ಅಂಗಡಿಯವರು ಯಾರಿದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಆಲಿಯಾ ಭಟ್ ಎಂದು ಉತ್ತರಿಸುತ್ತಾರೆ. ಬಳಿಕ ‘ರಣಬೀರ್’ ಯಾವ ಪಿಜ್ಜಾ ತಿನ್ನಲು ಬಯಸುತ್ತಾರೆ ಎಂದು ಕೇಳುವಂತೆ ನಟಿಸುತ್ತಾರೆ. ನಂತರ ವೆಜ್ ಪಿಜ್ಜಾ ಬಗ್ಗೆ ವಿಚಾರಿಸುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

‘ಹೊಂದಿಸಿ ಬರೆಯಿರಿ’ ಮೊದಲ ನೋಟ ರಿಲೀಸ್…ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತದೆ ಈ ಟೀಸರ್ ಝಲಕ್!

Tue Apr 5 , 2022
ಇಂಜಿನಿಯರಿಂಗ್ ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ನಿರ್ದೇಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ಹೌಸ್ ನಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿರುವ ಜಗನ್ನಾಥ್ ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಸಖತ್ ಸೌಂಡ್ ಮಾಡಿತ್ತು. ಈಗ ಬಿಡುಗಡೆಯಾಗಿರುವ ಟೀಸರ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಿದ್ಯಾರ್ಥಿ ಜೀವನದ ಅನುಭವ ಅನಾವರಣ […]

Advertisement

Wordpress Social Share Plugin powered by Ultimatelysocial