ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾದ ಮಹೀಂದ್ರಾ ಎಲೆಕ್ಟ್ರಿಕ್

ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾದ ಮಹೀಂದ್ರಾ ಎಲೆಕ್ಟ್ರಿಕ್

ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಮುಂದಾಗಿದೆ. ಇದರೊಂದಿಗೆ ಕಂಪನಿಯು 6 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್‌ ವಾಹನಗಳಲ್ಲಿ ಹೊಸ ಮಾದರಿಯ ಎಲೆಕ್ಟ್ರಿಕ್ ತ್ರಿ ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಸೇರಿವೆ.

ಕಂಪನಿಯು ಈ ವಿಭಾಗದಲ್ಲಿ ರೂ. 300 ಕೋಟಿ ಹೂಡಿಕೆ ಮಾಡಿ ತನ್ನದೇ ಆದ ಹಿಡಿತವನ್ನು ಸಾಧಿಸಲು ಬಯಸಿದೆ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ರೂ 3000 ಕೋಟಿ ಹೂಡಿಕೆ ಮಾಡಲಿದೆ. ಅದರಲ್ಲಿ 10% ನಷ್ಟನ್ನು ಲಾಸ್ಟ್ ಮೈಲ್ ಮೊಬಿಲಿಟಿ ವಿಭಾಗದಲ್ಲಿ ಹೂಡಿಕೆ ಮಾಡಲಿದೆ. ಕಂಪನಿಯು 2022ರ ಹಣಕಾಸು ವರ್ಷದಲ್ಲಿ 14,000 ರಿಂದ 15,000 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಸೆಮಿಕಂಡಕ್ಟರ್’ಗಳ ಕೊರತೆ ಎದುರಾಗದಿದ್ದರೆ ಈ ಪ್ರಮಾಣವು 2023ರ ಹಣಕಾಸು ವರ್ಷದಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. ಮಹೀಂದ್ರಾ ಕಂಪನಿಯ ಬೆಂಗಳೂರು ಉತ್ಪಾದನಾ ಘಟಕವು 30,000 ಯುನಿಟ್‌ ವಾಹನಗಳನ್ನು ಉತ್ಪಾದಿಸಲಿದೆ. ಕಂಪನಿಯು 2024 – 2025ರ ವೇಳೆಗೆ 1 ಲಕ್ಷ ಯುನಿಟ್ ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಿದೆ.

 

ಅದಕ್ಕೆ ಅನುಗುಣವಾಗಿ ಮಾರಾಟಗಾರರೊಂದಿಗೆ ಸಹಕರಿಸಲು ನಿರ್ಧರಿಸಿದೆ. ಕಂಪನಿಯು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಈ ವರ್ಷದ ಒಟ್ಟು ಮಾರಾಟವು ಮುಂದಿನ ತ್ರೈಮಾಸಿಕದಲ್ಲಿಯೇ ಇರಲಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೆಚ್ಚಾಗಲಿದೆ ಎಂದು ಕಂಪನಿಯು ನಿರೀಕ್ಷಿಸುತ್ತಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ತ್ರಿಚಕ್ರ ವಾಹನಗಳ ಒಟ್ಟು ಮಾರಾಟದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮಾಣ 30% ನಷ್ಟು ಇರಲಿದೆ ಎಂಬುದು ಮಹೀಂದ್ರಾ ಕಂಪನಿಯ ಅಭಿಪ್ರಾಯ.

ಮುಂದಿನ ಮೂರು ವರ್ಷಗಳಲ್ಲಿ ತ್ರಿಚಕ್ರ ವಾಹನ ಮಾರುಕಟ್ಟೆ ಉತ್ತುಂಗಕ್ಕೇರಲಿದೆ ಎಂದು ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯ ಸಿಇಒ ನಂಬಿದ್ದಾರೆ. ಈ ಹಣಕಾಸು ವರ್ಷದಲ್ಲಿ ಕಂಪನಿಯು ಈಗಾಗಲೇ ಸುಮಾರು 7,000 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು ಮುಂದಿನ ತ್ರೈಮಾಸಿಕದಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ.

 

ಮಾರಾಟಗಾರರು ಹಾಗೂ ಪೂರೈಕೆದಾರರ ಪ್ರಕಾರ ಕಂಪನಿಯು ಮುಂದಿನ ವರ್ಷವೇ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಫೇಮ್ 2 ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಗುಜರಾತ್, ಮಹಾರಾಷ್ಟ್ರ ಹಾಗೂ ದೆಹಲಿಯಂತಹ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿವೆ.

ಮಹಾರಾಷ್ಟ್ರದಲ್ಲಿ ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ರಿಕ್ಷಾವನ್ನು ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾದ ಬೆಲೆ ರೂ. 2.09 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ರಿಕ್ಷಾ ಖರೀದಿಸಲು ಮಹಾರಾಷ್ಟ್ರ ಸರ್ಕಾರವು ರೂ. 30,000 ರಿಯಾಯಿತಿ ನೀಡುತ್ತಿದೆ. ಡಿಸೆಂಬರ್ 31ಕ್ಕೂ ಮುನ್ನ ಈ ಎಲೆಕ್ಟ್ರಿಕ್ ರಿಕ್ಷಾ ಖರೀದಿಸಿದರೆ ರೂ. 37,000 ರಿಯಾಯಿತಿ ನೀಡಲಾಗುತ್ತದೆ.

 

ಸಿಎನ್‌ಜಿ ಆಟೋ ರಿಕ್ಷಾಗೆ ಹೋಲಿಸಿದರೆ ಎಲೆಕ್ಟ್ರಿಕ್ ರಿಕ್ಷಾದಿಂದ 5 ವರ್ಷಗಳಲ್ಲಿ ರೂ. 2 ಲಕ್ಷ ಉಳಿಸಬಹುದು ಎಂದು ಮಹೀಂದ್ರಾ ಕಂಪನಿ ಹೇಳಿಕೊಂಡಿದೆ. ಮಹೀಂದ್ರಾ ಎಲೆಕ್ಟ್ರಿಕ್ ತನ್ನ ಟ್ರಿಯೊ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ದೇಶದ ಕೆಲವೇ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇವುಗಳಲ್ಲಿ ಮೂರು ಚಕ್ರದ ಎಲೆಕ್ಟ್ರಿಕ್ ವಾಹನಗಳು ಸಹ ಸೇರಿವೆ.

ಬೇಡಿಕೆಯ ಹಿನ್ನೆಲೆಯಲ್ಲಿ ಕಂಪನಿಯು ಮಹಾರಾಷ್ಟ್ರದಲ್ಲಿ ದೇಶದ ಅತ್ಯುತ್ತಮ ಮಾರಾಟವಾಗುತ್ತಿರುವ ಟ್ರಿಯೊ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ರಿಕ್ಷಾದ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ರಿಕ್ಷಾ 48 ವೋಲ್ಟ್ 8 ಕಿ.ವ್ಯಾ ಸಾಮರ್ಥ್ಯದ ಆಧುನಿಕ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ.

 

ಈ ಬ್ಯಾಟರಿಯನ್ನು 3 – 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಸಂಪೂರ್ಣವಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ರಿಕ್ಷಾ ಸ್ಟಾಂಡರ್ಡ್ ಆಗಿ 170 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. 3 ಸೀಟುಗಳನ್ನು ಹೊಂದಿರುವ ಟ್ರಿಯೊ ಎಲೆಕ್ಟ್ರಿಕ್ ರಿಕ್ಷಾದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 45 ಕಿ.ಮೀಗಳಾಗಿದೆ.

ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ನವೆಂಬರ್ ತಿಂಗಳ ಉತ್ಪಾದನಾ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯು ಕಳೆದ ತಿಂಗಳು 18,261 ಯುನಿಟ್ ವಾಹನಗಳನ್ನು ಉತ್ಪಾದಿಸಿದೆ. ಈ ಪ್ರಮಾಣವು ಈ ವರ್ಷದ ಅಕ್ಟೋಬರ್ ತಿಂಗಳಿಗಿಂತ 19,286 ಯುನಿಟ್‌ಗಳಷ್ಟು ಅಂದರೆ 5.3% ನಷ್ಟು ಕಡಿಮೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಟ ದರ್ಶನ್, ನಿರ್ದೇಶಕ ಸೂರಿ ಕಾಂಬಿನೇಷನ್‌ನಲ್ಲಿ ಮಾಸ್ ಚಿತ್ರ?

Mon Dec 27 , 2021
ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ದೇಶಕರ ಚಿತ್ರಗಳು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕುತ್ತದೆ. ನಿರ್ದೇಶಕರ ಹೆಸರಲ್ಲೇ ಚಿತ್ರದ ಭವಿಷ್ಯ ಕೂಡ ಒಮ್ಮೊಮ್ಮೆ ನಿರ್ಧಾರ ಆಗಿ ಬಿಡುತ್ತದೆ. ಅಂತಹ ನಿರ್ದೇಶಕರಲ್ಲಿ ದುನಿಯಾ ಸೂರಿ ಕೂಡ ಒಬ್ಬರು. ಹಾಗೆ ಕೆಲವು ಹಲವು ಬಾರಿ ಸಿನಿಮಾಗಳು ನಾಯಕ ನಟರ ಮೇಲೆ ನಿಂತಿರುತ್ತವೆ. ಕನ್ನಡದ ನಟ ದರ್ಶನ್‌ ಸಿನಿಮಾಗಳು ಪ್ರಕಟ ಆದ್ರೆ ಸಾಕು ಅವರ ಅಭಿಮಾನಿಗಳು ಚಿತ್ರ ರಿಲೀಸ್‌ಗಾಗಿ ಕಾಯುತ್ತಿರುತ್ತಾರೆ. ಸದ್ಯ ನಿರ್ದೇಶಕ ಸೂರಿ ಮತ್ತು ನಟ […]

Advertisement

Wordpress Social Share Plugin powered by Ultimatelysocial