ಮಗುವಿನ ನಿರೀಕ್ಷೆಯಲ್ಲಿ ನಿವೇದಿತಾ ಗೌಡ?

ಪ್ರತಿವರ್ಷ ಕನ್ನಡದ ಹೊಸ ರ್ಯಾಪ್‌ ಹಾಡನ್ನು ಬಿಡುಗಡೆಗೊಳಿಸಿ ಎಲ್ಲರಿಗೆ ಹೊಸ ವರ್ಷಕ್ಕೆ ಹರ್ಷ ತುಂಬುವ ರ್ಯಾಪರ್ ಚಂದನ್‌ ಶೆಟ್ಟಿ ಈ ಬಾರಿಯೂ ಹೊಸ ಹಾಡಿನೊಂದಿಗೆ ಬಂದಿದ್ದಾರೆ. ಈ ಬಾರಿ ಅವರ ವಿಡಿಯೋ ಸಾಂಗ್‌ ಸ್ವಲ್ಪ ಸ್ಪೆಷಲ್‌ ಆಗಿ ಮೂಡಿಬಂದಿದೆ. ಈ ಅದ್ಧೂರಿ ಪಾರ್ಟಿ ಹಾಡಿನಲ್ಲಿ ಚಂದನ್‌ ಜತೆಗೆ ಕನ್ನಡದ ಕೆಲ ನಟ, ನಟಿಯರೂ ಕಾಣಿಸಿಕೊಂಡಿದ್ದಾರೆ.
ಐಷಾರಾಮಿ ಹೋಟೆಲ್‌ನಲ್ಲಿ ಚಿತ್ರೀಕರಣ
ಹೊಸ ವರ್ಷಕ್ಕೆ ಎಲ್ಲರೂ ಎಂಜಾಯ್‌ ಮಾಡು-ವಂಥ ಹಾಡೊಂದನ್ನು ನೀಡಲಿರುವ ಸೂಚನೆ-ಯನ್ನು ಚಂದನ್‌ ಮೊದಲೇ ನೀಡಿದ್ದರು. ಅದರಂತೆ ಈ ಹಾಡು ಸೆಲೆಬ್ರೇಷನ್‌ಮಯವಾಗಿದ್ದು, ರಿಚ್‌, ಕಲರ್‌ಫುಲ್‌ ಕಾಸ್ಟ್ಯೂಮ್‌ ಹಾಗೂ ಐಷಾರಾಮಿ ಹೋಟೆಲ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಇಂದು ಶನಿವಾರ ಫುಲ್‌ ಜೋಶ್‌ ಇದೆ..’ ಎಂದು ಪ್ರಾರಂಭ–ವಾಗುವ ಹಾಡಿನಲ್ಲಿ ನಟಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಹಾಕಿದ್ದಾರೆ. ಚಂದನ್ ಶೆಟ್ಟಿ ಜೊತೆಗೆ ನಿವೇದಿತಾ ಗೌಡಈ ಹಾಡು ರಿಲೀಸ್‌ ಆದ ಒಂದೇ ದಿನದಲ್ಲಿ 5 ಲಕ್ಷ ವೀಕ್ಷಣೆಗೊಳಗಾಗಿರುವುದು ವಿಶೇಷ. ಚಂದನ್‌ ಸ್ವತಃ ಈ ಹಾಡಿನಲ್ಲಿ ರಾರ‍ಯಪರ್‌ ಆಗಿದ್ದು, ಅವರ ಪತ್ನಿ ನಿವೇದಿತಾ ಗೌಡ ಕೂಡ ಜೊತೆಗಿದ್ದಾರೆ. ನಟ ಧರ್ಮ ಡೈಲಾಗ್‌ ದೃಶ್ಯದಲ್ಲಿದ್ದಾರೆ. ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಶೆರ್ಟನ್ ಹೋಟೆಲ್‌ನಲ್ಲಿ ಚಿತ್ರೀಕರಣ

3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸೆಗೆ ಬಿದ್ದು 5.42 ಲಕ್ಷ ರೂ. ಕಳೆದುಕೊಂಡ ಮಹಿಳೆ!

Wed Jan 11 , 2023
ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸೈಬರ್​ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದೀಗ ಇಂಥದ್ದೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಮೀಪದ ವಿಶಾಲಾಕ್ಷಿ ನಗರದಲ್ಲಿ ವರದಿಯಾಗಿದೆ. ಆನ್​ಲೈನ್​ನಲ್ಲಿ ಅಮಾಯಕರನ್ನು ಟಾರ್ಗೆಟ್​ ಮಾಡುವ ಒಂದು ಗುಂಪಿದ್ದು, ಅವರ ಬಗ್ಗೆ ಎಚ್ಚರಿಕೆ ವಹಿಸುವ […]

Advertisement

Wordpress Social Share Plugin powered by Ultimatelysocial