HEALTH TIPS:ದಾಳಿಂಬೆ ಸೇವಿಸಿದರೆ ಡಯಾಬಿಟೀಸ್ ಮುಕ್ತಿ ರೋಗಗಳಿಂದ ಪಡೆಯಬಹುದು;

 ದಾಳಿಂಬೆಯು Antioxidant ಮತ್ತು ಪಾಲಿಫಿನಾಲ್‌ಗಳ ಭಂಡಾರವಾಗಿದೆ. ಆಕ್ಸಿಡೇಟಿವ್ ಒತ್ತಡವನ್ನು (Oxidative stress) ಕಡಿಮೆ ಮಾಡುವ ಮೂಲಕ ಮತ್ತು ಫ್ರೀ ರಾಡಿಕಲ್‌ಗಳ (Free Radical) ಪರಿಣಾಮಗಳನ್ನು ತೆಗೆದುಹಾಕುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಪ್ರತಿದಿನ ಸೇವಿಸಿ ದಾಳಿಂಬೆ ರಸ :
ದಾಳಿಂಬೆಯನ್ನು  ಜಗಿದು ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ಕಾಳುಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಪ್ರತಿದಿನ ಕುಡಿಯಬಹುದು. ಹೀಗೆ ಮಾಡುವುದರಿಂದ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು.

ರಕ್ತದೊತ್ತಡ ನಿಯಂತ್ರಣ :
ಇತ್ತೀಚಿನ ದಿನಗಳಲ್ಲಿ,  ಮತ್ತು ಅಧಿಕ ರಕ್ತದೊತ್ತಡ  ಯುವಕರಲ್ಲಿಯೇ ಕಾಣಿಸಿಕೊಳ್ಳುತ್ತದೆ. ಒಂದು ಗ್ಲಾಸ್ ದಾಳಿಂಬೆ ರಸವು, ಸಿಸ್ಟೊಲಿಕ್ ರಕ್ತದೊತ್ತಡವನ್ನು (Systolic Blood Pressure) ನಿಯಂತ್ರಿಸಿ, ಅಪಧಮನಿಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ :
ದಾಳಿಂಬೆ ರಸವು  ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಮತ್ತು ಹೃದಯರಕ್ತನಾಳದ ಕಾಯಿಲೆಯ (Cardiovascular Disease) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ.

ಮಧುಮೇಹದಿಂದ ದೂರವಿರಲು ದಾಳಿಂಬೆಯನ್ನು ಸೇವಿಸಿ :
ಇತ್ತೀಚಿನ ದಿನಗಳಲ್ಲಿ ಮಧುಮೇಹ  ಮತ್ತು ಹೃದ್ರೋಗಗಳು ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಹೃದಯದ ಆರೋಗ್ಯವನ್ನು ಕಾಪಾಡಲು ದಾಳಿಂಬೆ ಜ್ಯೂಸ್ (Pomegranate Juice) ಕುಡಿಯುವುದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ದಾಳಿಂಬೆಯಲ್ಲಿರುವ ಆಯಂಟಿಆಕ್ಸಿಡೆಂಟ್  ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಡುಪಿ: ಯುವ ಉದ್ಯಮಿ ನೇಣಿಗೆ ಶರಣು

Wed Feb 2 , 2022
ಉಡುಪಿ : ನಗರದ ಡ್ರೈ ಫ್ರೂಟ್ ಮಾರಾಟ ಮಳಿಗೆಯ ಮಾಲಕರ ಮಗ ಇಂದು ಬೆಳಿಗ್ಗೆ ಅಂಬಲಪಾಡಿಯ ಮಜ್ಜಿಗೆ ಪಾದೆಯಲ್ಲಿರು ತಮ್ಮ ವಸತಿ ಸಮುಚ್ಚಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ತಿಕ್ ಪೈ (37) ಆತ್ಮಹತ್ಯೆ ಮಾಡಿಕೊಂಡವರು .ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial