ಯಾವಾಗಲೂ ಕೆಲಸ ಕೆಲಸ ಎನ್ನುವ ಅಪ್ಪನ ಮೇಲೆ ಅಳುತ್ತಲೇ ಪ್ರೀತಿ ತೋರಿದ ಪುಟ್ಟ ಪೋರಿ.! ಮುದ್ದಾದ ವಿಡಿಯೋ ವೈರಲ್

ತಂದೆಗೆ ಎಷ್ಟಾದರೂ ಹೆಣ್ಣುಮಕ್ಕಳೇ ಇಷ್ಟ. ಇದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ವಿಚಾರ. ಗಂಡುಮಕ್ಕಳ ಮೇಲೆ ಪ್ರೀತಿ ಇದ್ದರೂ, ಹೆಣ್ಣುಮಗಳೆಂದರೆ ಹೆಚ್ಚಿನ ಕಾಳಜಿ, ಮಮತೆ. ಹೆಣ್ಣುಮಕ್ಕಳಿಗೂ ಅಷ್ಟೇ ಅಮ್ಮ ಅಚ್ಚುಮೆಚ್ಚಾದರೇ, ಅಪ್ಪನ ಕಡೆಗೆ ಮಾತ್ರ ವಿಶೇಷ ಪ್ರೇಮ.ಅಪ್ಪನಿಗೆ ಉಪಚಾರ ಮಾಡುವುದು, ಅಪ್ಪನ ಬಗ್ಗೆ ದಿನಾಲೂ ವಿಚಾರಿಸಿಕೊಳ್ಳುವುದು ಎಂದರೆ ಬಹಳ ಇಷ್ಟ.ಇದೇ ರೀತಿಯ ಪುಟ್ಟ ಹೆಣ್ಣುಮಗಳೊಬ್ಬಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾಲಕಿ ಹೇಳುತ್ತಾಳೆ, ” ನನಗೆ ಅಪ್ಪನದ್ದೇ ನೆನಪು ಕಾಡುತ್ತಿರುತ್ತದೆ. ಅವರು ಕೆಲಸದ ಮೇಲೆ ಅಂಗಡಿಗೆ ಹೋದರೆ ಸಂಜೆಯವರೆಗೆ ಊಟ ಮಾಡಲ್ಲ. ಏನೂ ಕೂಡ ತಿಂದು, ಕುಡಿದು ಮಾಡಲ್ಲ. ಯಾವಾಗಲೂ ಕೆಲಸ ಕೆಲಸ ಎನ್ನುತ್ತಿರುತ್ತಾರೆ,” ಎಂದು ಅಳುತ್ತಲೇ ಪ್ರೀತಿ ತೋರಿಸಿದ್ದಾಳೆ.ವಿಡಿಯೊದಲ್ಲಿ ಅಳುತ್ತಿರುವ ಮಗಳಿಗೆ ಸಮಾಧಾನ ಮಾಡಲು ತಾಯಿಯು , ”ಇಲ್ಲಮ್ಮ, ಅಪ್ಪ ಬೆಳಗ್ಗೆ ಮತ್ತು ರಾತ್ರಿ ಎರಡು ಬಾರಿ ಊಟ ಮಾಡುತ್ತಾರೆ,” ಎಂದು ಸಂತೈಸುತ್ತಾರೆ. ಅದಕ್ಕೆ ಒಪ್ಪದ ಬಾಲಕಿಯು, ಸಂಜೆ ಮಾಡಲ್ಲವಲ್ಲ ಎಂದು ಮರುಪ್ರಶ್ನೆ ಹಾಕುತ್ತಾಳೆ. ಗ್ರಾಹಕರು ಅಂಗಡಿಯಲ್ಲಿ ಹೆಚ್ಚಿರುತ್ತಾರೆ. ಅವರ ಕಡೆಗೆ ಗಮನ ಕೊಡದಿದ್ದರೆ ಅಪ್ಪನಿಗೆ ವ್ಯಾಪಾರ ಆಗಲ್ಲ ಎಂದು ಹಲವು ರೀತಿಯಲ್ಲಿ ತಾಯಿಯು ವಿವರಿಸಿ ಸಂತೈಸಲು ಮುಂದಾಗುತ್ತಾರೆ.ಈ ವಿಡಿಯೊ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ನಿಜವಾಗಲೂ ಹೆಣ್ಣುಮಕ್ಕಳನ್ನು ಪಡೆದ ಪೋಷಕರೇ ಧನ್ಯ. ಅವರೇ ಭವಿಷ್ಯದಲ್ಲಿ ತಂದೆ-ತಾಯಿಯ ಕಷ್ಟಕ್ಕೆ ಆಗುವುದು ಎಂದು ಹಲವರು ಟ್ವೀಟಿಗರು ಪ್ರತಿಕ್ರಿಯೆಯಲ್ಲಿ ತಮ್ಮ ಅನುಭವದ ಬುತ್ತಿ ಬಿಚ್ಚಿಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್‌ ವಿಚಾರ ಶಿಕ್ಷಣದ ಹಾದಿಯಲ್ಲಿ ಬಂದರೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹಾನಿ : ರಾಹುಲ್‌ ಗಾಂಧಿ

Sat Feb 5 , 2022
ಭಾರತೀಯ ಹೆಣ್ಣು ಮಕ್ಕಳ ಭವಿಷ್ಯವನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಜ್ಞಾನವನ್ನು ನೀಡುವಲ್ಲಿ ಸರಸ್ವತಿ ದೇವತೆ ತಾರತಮ್ಯ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಕರ್ನಾಟಕ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದಿರುವ ವಿವಾದದ ನಡುವೆ ರಾಹುಲ್‌ ಗಾಂಧಿ ವಸಂತ ಪಂಚಮಿಯ ಈ ದಿನದಂದು ಹೇಳಿದರು. “ವಿದ್ಯಾರ್ಥಿಗಳ ಹಿಜಾಬ್ ಅವರ ಶಿಕ್ಷಣದ ಹಾದಿಯಲ್ಲಿ ಬರಲು ಬಿಡುವ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು […]

Advertisement

Wordpress Social Share Plugin powered by Ultimatelysocial