ಮದುವೆ ದಿನವೇ ಮೃತಪಟ್ಟ ವರ…..ವನ ಮರಣಕ್ಕೆ ಮರುಗಿದ ಗ್ರಾಮಸ್ಥರು

ಆತ ಆಗಿನ್ನೂ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ನವದಂಪತಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಮ್ಮದೇ ಆದ ಕನಸ್ಸು ಕಟ್ಟಿಕೊಂಡಿದ್ರು. ಆದ್ರೆ ಇವರ ಕನಸೇಕೋ ಜವರಾಯನಿಗೆ ಇಷ್ಟವಾಗಲಿಲ್ಲ ಅನಿಸುತ್ತೆ. ಮದುವೆ ಆರತಕ್ಷತೆ ವೇಳೆ ದಿಢೀರನೆ ಕಾಣಿಸಿಕೊಂಡ ಎದೆನೋವು ವರನ ಪ್ರಾಣ ತೆಗೆದಿದೆ. ಮದುವೆ ದಿನವೇ ವರ ಮರಣ ಹೊಂದೊದ್ದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

0೧-ಮದುವೆ ದಿನವೇ ಮೃತಪಟ್ಟ ವರ…..ವನ ಮರಣಕ್ಕೆ ಮರುಗಿದ ಗ್ರಾಮಸ್ಥರು……ವರನ ಕಳೆದುಕೊಂಡ ಕುಟುಂಬಸ್ಥರ ಮುಗಿಲುಮಿಟ್ಟಿದ ಆಕ್ರಂದನ…..ಎಸ್ ಈ ಬಗೆಯ ದುರಾದೃಷ್ಟಕರ ಘಟನೆ ನಡೆದಿರೋದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಲಿನ ಪಾಪಿನಾಯಕನ ಹಳ್ಳಿ ಗ್ರಾಮದಲ್ಲಿ. ಗ್ರಾಮದ ಹೊನ್ನೂರ ಸ್ವಾಮಿಗೆ ಬುಧವಾರ ಗ್ರಾಮದಲ್ಲೊಯೇ ಇರೋ ಸುಡುಗಾಡಪ್ಪನ ದೇವಸ್ಥಾನದಲ್ಲಿ ಮದುವೆಯಾಗಿದೆ. ಮದುವೆಯಾದ ಸಂತಸದಲ್ಲಿಯೇ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾನೆ. ಆದ್ರೆ ಕ್ರೂರ ವಿಧಿಗೆ ಹೊನ್ನೂರ ಸ್ವಾಮಿಯ ಸಂತಸ ನೋಡೋಕೆ ಹೊಟ್ಟೆಕಿಚ್ಚಾಗಿದೆ. ಎದೆನೋವಿನ ರೂಪದಲ್ಲಿ ಹೊನ್ನೂರಸ್ವಾಮಿ ಬಳಿ ಬಂದ ವಿಧಿ ಕೊನೆಗೆ ಹೊನ್ನೂರಸ್ವಾಮಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದೆ.

0೨-ಇನ್ನು ಆರತಕ್ಷತೆ ವೇಳೆ ಹೊನ್ನೂರಸ್ವಾಮಿಗೆ ಎದೆನೋವು ಕಾಣಿಸಿಕೊಂಡಿದೆ. ಆಗ ವೇದಿಕೆ ತುಂಬೆಲ್ಲಾ ಎದೆನೋವು ತಾಳೆದೆ ಅಡ್ಡಾದಿದ್ದಾನೆ. ಇದನ್ನು ಕಂಡ ಸಂವಂಧಿಕರು ಹಾಗೂ ಸ್ನೇಹಿತರು ಹೀಗ್ಯಾಕಾಡ್ತೀಉಯ ಸುಮ್ನೆ ಒಂದೆಡೆ ಇರೋಕಾಗಲ್ವಾ ಅಂತ ಬೈದಿದ್ದಾರೆ. ಆಗ ಹೊನ್ನೂರಸ್ವಾಮಿ ತನ್ನ ತಮ್ಮನ ಬಳಿ, ನನಗ್ಯಾಕೋ ಪುನೀತ್ ರಾಜಕುಮಾರ್ ಅವರಿಗೆ ಆದ ಹಾಗೆ ಆಗುತ್ತಿದೆ ಎಂದಿದ್ದಾನೆ. ಕೂಡಲೇ ಅಲ್ಲಿದ್ದವರು ಕುಡಿಯೋಕೆಂದು ಸೋಡಾ ತಂದು ಕೊಟ್ಟಿದ್ದಾರೆ. ಕುಡೊದ ಸೋಡಾ ವಾಂತಿಯಾಗಿದೆ. ಅಲ್ಲಿದ್ದವರು ಸಮೀಪದಲ್ಲಿಯೇ ಇರೋ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ಹೊನ್ನೂರ ಸ್ವಾಮಿ ಅವರಿಗೆ ಲೋ ಬಿಪಿಯಾಗಿದ್ದು, ಎಚ್ಚರ ತಪ್ಪಿದ್ದಾರೆ. ಅವರನ್ನು ಪರೀಕ್ಷೆ ಮಾಡಿದ್ದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದ್ರೆ ಅಲ್ಲಿಗೋಗೋವಷ್ಟರಲ್ಲಿಯೇ ಹೊನ್ನೂರಸ್ವಾಮಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಇನ್ನು ಅಲ್ಲಿಂದ ವಾಪಾಸ್ ಗ್ರಾಮಕ್ಕೆ ಹೊನ್ನೂರ ಸ್ವಾಮಿ ಅವರ ಮೃತದೇಹ ತಂದಾಗಲಂತೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ನೆರೆದಿದ್ದ ಪ್ರತಿಯೊಬ್ಬರ ಕಣ್ಣಾಲಿಗಳೂ ತೇವವಾಗಿದ್ವು. ಇದನ್ನೇ ನೋಡಿ ಅಲ್ವೇ ಹಿರಿಯರು ವಿಧಿಬಹರ ಎಂಥ ಘೋರ ಎಂದಿರೋದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆನೆ ವಂಶವಾಹಿಗಳು ಮಾನವರಲ್ಲಿ ಕ್ಯಾನ್ಸರ್ ಅನ್ನು ದೂರವಿಡುವ ರಹಸ್ಯವನ್ನು ಹಿಡಿದಿಟ್ಟುಕೊಳ್ಳಬಹುದು

Thu Jul 21 , 2022
ಮಾನವರಿಗೆ ಹೋಲಿಸಬಹುದಾದ ದೊಡ್ಡ ದೇಹದ ಗಾತ್ರ ಮತ್ತು ಜೀವಿತಾವಧಿಯ ಹೊರತಾಗಿಯೂ, ಕ್ಯಾನ್ಸರ್‌ನಿಂದ ಆನೆಗಳಲ್ಲಿ ಮರಣವು 5 ಪ್ರತಿಶತಕ್ಕಿಂತ ಕಡಿಮೆಯಾಗಿದೆ, ಇದು ಮಾನವರಲ್ಲಿ 25 ಪ್ರತಿಶತಕ್ಕೆ ಹೋಲಿಸಿದರೆ. ಜೀವಕೋಶದ ಪುನರಾವರ್ತನೆಯ ಸಮಯದಲ್ಲಿ ಡಿಎನ್‌ಎಯನ್ನು ನಕಲಿಸುವಾಗ ಪ್ರೋಟೀನ್‌ಗಳು ತಪ್ಪುಗಳನ್ನು ಮಾಡುವುದರಿಂದ p53 ಜೀನೋಮ್ ಅನ್ನು ದೋಷಗಳಿಂದ ರಕ್ಷಿಸುತ್ತದೆ. ವಿಷಕಾರಿ ಸಂಯುಕ್ತಗಳು, ಒತ್ತಡ, ಕಳಪೆ ಜೀವನ ಪರಿಸ್ಥಿತಿಗಳು ಮತ್ತು ವಯಸ್ಸಾದಿಕೆಯು ಪ್ರತಿಕೃತಿಯ ಸಮಯದಲ್ಲಿ ದೋಷಗಳ ಪ್ರಮಾಣವನ್ನು ಹೆಚ್ಚಿಸಬಹುದು. ಆನೆಗಳು p53 ಜೀನ್‌ಗೆ ಸಂಬಂಧಿಸಿದ 20 […]

Advertisement

Wordpress Social Share Plugin powered by Ultimatelysocial