ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಮುಖ್ಯಮಂತ್ರಿ: ನಟ ಚೇತನ್‌

ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಮುಖ್ಯಮಂತ್ರಿ: ನಟ ಚೇತನ್‌
ದಾವಣಗೆರೆ: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ ಎಂದು ನಟ ಚೇತನ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಭಾಗ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇ?. ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳು ಇದ್ದರು, ಇದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡಿ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ದೇವದಾಸಿಗಳು ಅಸ್ಪೃಶ್ಯರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನ ನೋಡುವಷ್ಟು ತಾಳ್ಮೆ ರಾಜಕಾರಣಿಗಳಿಗೆ ಇಲ್ಲ. ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ ಆಗಿದ್ದಾರೆ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಗಳು ಇರಲಿಲ್ಲ, ಎಲ್ಲರಿಗಿಂತ ಇವರು ಹೆಚ್ಚಿದ್ದಾರೆ. ಅವರ ತಂದೆ(ಎಸ್‌.ಆರ್‌. ಬೊಮ್ಮಾಯಿ) ಒಳ್ಳೆಯ ಪ್ರಗತಿಪರ ಮುಖ್ಯಮಂತ್ರಿ ಆಗಿದ್ದರು ಅಂತ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಯಾವ ಸಮಯದಲ್ಲಿ ರಸ್ತೆ ಅಪಘಾತಗಳು ಹೆಚ್ಚು?

Sat Dec 25 , 2021
ಬೆಂಗಳೂರು, ಡಿಸೆಂಬರ್ 25: ಬೆಂಗಳೂರಿನಲ್ಲಿ ಸಂಜೆಯ ಸಮಯದಲ್ಲಿ ರಸ್ತೆ ಅಪಘಾತಗಳು ಸಂಭವಿಸುವುದು ಹೆಚ್ಚು ಎನ್ನುವ ವರದಿ ಬಂದಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಕುರಿತು ಹೆಚ್ಚೇನೂ ಹೇಳುವ ಅಗತ್ಯವೇ ಇಲ್ಲ. ನಗರದಲ್ಲಿ ಸಂಜೆಯ ವೇಳೆ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ.ರಸ್ತೆ ಅಪಘಾತಕ್ಕೆ ಒಳಗಾಗುತ್ತಿರುವವರಲ್ಲಿ 21- 29 ವಯೋಮಾನದವರು ಹಾಗೂ 40ಕ್ಕೂ ಮೇಲ್ಪಟ್ಟ ಸವಾರರು ಜಾಸ್ತಿ ಎಂಬುದು ತಿಳಿದುಬಂದಿದೆ. ಅಪಘಾತಕ್ಕೆ ತುತ್ತಾಗುತ್ತಿರುವವರಲ್ಲಿ 40- 59ರ ವಯೋಮಾನದ ಮಹಿಳೆಯರು ಹೆಚ್ಚಿದ್ದಾರೆ. ಕಳೆದ […]

Advertisement

Wordpress Social Share Plugin powered by Ultimatelysocial