‘ಬೆಂಕಿ’ ಅಂಗಳದಿಂದ ಬಂತು ಬಿರುಗಾಳಿಯಂತಹ ಸಾಂಗ್… ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ್ರು ಅನೀಶ್ ಡ್ಯಾನ್ಸಿಂಗ್ ನಂಬರ್

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ಅನೀಶ್ ತೇಜೇಶ್ವರ್ ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ಬೆಂಕಿ ಅಂಗಳದಿಂದ ಮೊದಲ ಗಾನಲಹರಿ ಬಿಡುಗಡೆಯಾಗಿದೆ. ಮೋಹಕ ತಾರೆ ರಮ್ಯಾ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.ಒಕೆನಾ ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ಸಖತ್ ಕ್ಯಾಚಿ-ಮ್ಯಾಚಿಯಾಗಿರುವ ಒಕೆನಾ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಆನಂದ್ ರಾಜವಿಕ್ರಮ್ ಸಂಗೀತ‌ ನೀಡಿದ್ದು, ಐಶ್ವರ್ಯ ರಂಗರಾಜನ್ ಹಾಗೂ ಪಂಚಮ್ ಜೀವ ಧ್ವನಿಯಾಗಿದ್ದಾರೆ. ಕಲರ್ ಫುಲ್ ಆಗಿ ಮೂಡಿ‌ ಬಂದಿರುವ ಹಾಡಿನಲ್ಲಿ ಅನೀಶ್ ಹಾಗೂ‌ ಸಂಪದ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದು, ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ ಗುರು ಅಂತಾ ಮೆಚ್ಚುಗೆ ಮಾತುಗಳು ವ್ಯಕ್ತವಾಗ್ತಿವೆ.ಪಕ್ಕ ಮಾಸ್‌ ಹಾಗೂ ಕಮರ್ಷಿಯಲ್‌ ಬೆಂಕಿ ಸಿನಿಮಾವನ್ನು ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ನಡಿ ಅನೀಶ್ ತೇಜೇಶ್ವರ್ ನಿರ್ಮಾಣ ಮಾಡ್ತಿದ್ದು, ಇದು ಇವರ ಹತ್ತನೇ ಸಿನಿಮಾವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌.ಬಾಬು ಅವರ ಪುತ್ರ ಶಾನ್‌ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.ಅಣ್ಣ-ತಂಗಿ ಸೆಂಟಿಮೆಂಟ್‌ ಕಥೆಯ ಜೊತೆಗೆ, ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದಲ್ಲಿ ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗವಿದ್ದು, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಕಾಂಗ್ರೆಸ್!

Thu Apr 28 , 2022
  ನವದೆಹಲಿ: ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿರುತ್ತಾರೆ. ಈ ಬಾರಿಯೂ ಇದೇ ವಿಚಾರಕ್ಕೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಒಟ್ಟಿಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ಅಪಾಯಕಾರಿ ನಿರುದ್ಯೋಗದ ಬಿಕ್ಕಟ್ಟನ್ನು ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial