ರಾಜ್ಯ ಸರ್ಕಾರಿ ನೌಕರರೇ ಗಮನಿಸಿ :

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ಚರ, ಸ್ಥಿರಾಸ್ತಿಯ ವಿವರವನ್ನು  ಸಲ್ಲಿಸೋದಕ್ಕೆ ಈವರೆಗೆ ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗುತ್ತಿತ್ತು. ಇದೀಗ ಈ ಕೊನೆ ದಿನವನ್ನು ಬದಲಾವಣೆ ಮಾಡಲಾಗಿದೆ.

ಇನ್ಮುಂದೆ ಮಾರ್ಚ್ 31 ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 24ರ ಉಪ ನಿಯಮ (2)ಕ್ಕೆ ತಿದ್ದುಪಡಿಯನ್ನು ತರಲಾಗಿದೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್ ಎ, ಬಿ, ಸಿ, ಡಿ ವರ್ಗದ ಎಲ್ಲಾ ಅಧಿಕಾರಿ, ನೌಕರರು ತಮ್ಮ ಚರ, ಸ್ಥಿರಾಸ್ತಿ ವಿವರಗಳ ಬಗ್ಗೆ ಪ್ರತಿ ವರ್ಷದ ಡಿಸೆಂಬರ್ 31ರ ಅಂತ್ಯಕ್ಕೆ ಇದ್ದಂತೆ ಸಲ್ಲಿಸುತ್ತಿದ್ದ ವಿವರಗಳನ್ನು ಇನ್ಮುಂದೆ ಮಾರ್ಚ್ 31ರ ಅಂತ್ಯಕ್ಕೆ ( ಆರ್ಥಿಕ ವರ್ಷ) ಇದ್ದಂತೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ಮೇಲಾಧಿಕಾರಿಗಳ ಮುಖಾಂತರ ಸರ್ಕಾರದ ಅಧೀನ ಕಾರ್ಯದರ್ಶಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಆಸ್ತಿ ಹೊಣೆಗಾರಿಕೆ ತಖ್ತೆಗಳ ವಿವರಗಳನ್ನು ಒಂದು ಬಾರಿಯ ಕ್ರಮವಾಗಿ ದಿನಾಂಕ 01-01-2022ರಿಂದ 31-03-2023ರ ಅಂತ್ಯಕ್ಕೆ ಒಟ್ಟು 15 ತಿಂಗಳುಗಳ ವಿವರಗಳನ್ನು ಏಪ್ರಿಲ್ 2023ರಲ್ಲಿ ಸಲ್ಲಿಸುವಂತೆ ಹಾಗೂ ಮುಂದಿನ ಸಾಲುಗಳ ಆಸ್ತಿಕ ಹೊಣೆಗಾರಿಕೆ ವಿವರಗಳನ್ನು ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ಆಯಾ ಆರ್ಥಿಕ ವರ್ಷದ 1ನೇ ಏಪ್ರಿಲ್ ನಿಂದ ಮಾರ್ಚ್ 31ರ ಅಂತ್ಯಕ್ಕೆ ವಿಳಂಬವಿಲ್ಲದೇ ಸಕಾಲದಲ್ಲಿ ಸಲ್ಲಿಸುವಂತೆ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಗನವಾಡಿ ಸಿಬ್ಬಂದಿಗೆ ಗುಡ್ ನ್ಯೂಸ್ :

Sat Feb 4 , 2023
ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚ್ಯುಟಿ ಘೋಷಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸಭೆ ನಡೆಸಿ ಗ್ರಾಚ್ಯುಟಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಮತ್ತು […]

Advertisement

Wordpress Social Share Plugin powered by Ultimatelysocial