ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಕಾಂಗ್ರೆಸ್!

 

ನವದೆಹಲಿ: ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿರುತ್ತಾರೆ. ಈ ಬಾರಿಯೂ ಇದೇ ವಿಚಾರಕ್ಕೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಒಟ್ಟಿಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ಅಪಾಯಕಾರಿ ನಿರುದ್ಯೋಗದ ಬಿಕ್ಕಟ್ಟನ್ನು ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

“”ಭಾರತದಿಂದ ವ್ಯಾಪಾರವನ್ನು ನಾಶಪಡಿಸುವುದು ಸುಲಭ. 7 ಜಾಗತಿಕ ಬ್ರ್ಯಾಂಡ್ ಗಳು. 9 ಕಾರ್ಖಾನೆಗಳು. 649 ಡೀಲರ್‌ಶಿಪ್‌ಗಳು. 84,000 ಉದ್ಯೋಗಗಳು. ಮೋದಿ ಜಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ! ಬದಲಿಗೆ ಭಾರತದ ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸುವ ಸಮಯ” ಎಂದು ರಾಹುಲ್ ಹೇಳಿದ್ದಾರೆ.

2017ರಲ್ಲಿ ಷೆವರ್ಲೆ, 2018 ರಲ್ಲಿ ಮ್ಯಾನ್ ಟ್ರಕ್ಸ್, 2019 ರಲ್ಲಿ ಫಿಯೆಟ್ ಮತ್ತು ಯುನೈಟೆಡ್ ಮೋಟಾರ್ಸ್, 2020 ರಲ್ಲಿ ಹಾರ್ಲೆ ಡೇವಿಡ್ಸನ್, 2021 ರಲ್ಲಿ ಫೋರ್ಡ್ ಮತ್ತು 2022 ರಲ್ಲಿ ಡಾಟ್ಸನ್ ದೇಶದಿಂದ ನಿರ್ಗಮಿಸಿದ ಏಳು ಜಾಗತಿಕ ಬ್ರ್ಯಾಂಡ್ ಗಳನ್ನು ತೋರಿಸುವ ಮೂಲಕ ಟ್ವಿಟರ್ ನಲ್ಲಿ ನಿರುದ್ಯೋಗಕ್ಕೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ನಿರುದ್ಯೋಗದ ವಿಚಾರದಲ್ಲಿ‌ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. 100 ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ‘ದ್ವೇಷದ ರಾಜಕಾರಣ’ ನಿಲ್ಲಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಯಸ್ಸಾಗುತ್ತಿದ್ದಂತೆ ಚರ್ಮದ ಕಾಂತಿ ಕುಂದುವುದು ಸಹಜ!

Thu Apr 28 , 2022
ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ತ್ವಚೆ ತನ್ನ ಬಿಗಿಯನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ 30 ರ ನಂತರ ತ್ವಚೆಗೆ ಕೆಲವೊಂದು ಆರೈಕೆಗಳು ಅತ್ಯಗತ್ಯವಾಗಿ ಬೇಕೇ ಬೇಕು. ಇಲ್ಲವಾದರೆ ವಯಸ್ಸಿಗೆ ತಕ್ಕ ಹಾಗೇ ಕಾಣದೆ ಅಕಾಲಿಕ ಮುಪ್ಪು ಆವರಿಸುತ್ತದೆ. ಆದ್ದರಿಂದ ಜಪಾನಿಯರ ಈ ಸಿಕ್ರೇಟ್ ಫೇಸ್​ಪ್ಯಾಕ್​ ನೀವು ಪ್ರಯತ್ನಿಸಬಹುದು. ಹೌದು, ಜಪಾನಿಯರು ಬಳಸುವ ಅಕ್ಕಿ ಹಿಟ್ಟಿನ ಫೇಸ್​ಮಾಸ್ಕ್​ ನಿಮಗೆ 10 ವರ್ಷ ಹಿಂದಿನ ಮೃದು ತ್ವಚೆಯನ್ನು ನೀಡುತ್ತದೆ. 2 ಟೀ […]

Advertisement

Wordpress Social Share Plugin powered by Ultimatelysocial