ನಮಾಜ್‌ ಟೋಪಿ ಹಾಕ್ತಿನಿ ಅಂದ್ರೆ ಇಲ್ಲಿ ನಡೆಯಲ್ಲ-ಪರೋಕ್ಷವಾಗಿ ಸಿದ್ದರಾಮಯ್ಯ ಮೇಲೆ ಯತ್ನಾಳ್‌ ವಾಗ್ದಾಳಿ.

 

ನಾನು ಕುಂಕುಮ ಹಚ್ಚಿಕೊಳ್ಳುವುದಿಲ್ಲ, ನಮಾಜ್‌ ಟೊಪ್ಪಗಿ ಹಾಕಿಕೊಳ್ಳಲು ತಯಾರಾಗುತ್ತೇನೆ. ನಮ್ಮ ರೇಷ್ಮೆ ಪೇಟ ಹಾಕಿಕೊಳ್ಳುವುದಿಲ್ಲ. ಆದರೆ, ಸಾಬರು ಹಾಕುವ ವಸ್ತುಗಳನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವವನ್ನು ಹಲವು ಹೊಂದಿದ್ದಾರೆ. ಇದು ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶಿವಾಜಿ ಚೌಕ್ ನಲ್ಲಿ ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಶಿವಾಜಿ ಧರಿಸುತ್ತಿದ್ದ ಪೇಟಾ ಮಾದರಿಯ ಪಟಕಾ ಸುತ್ತಿಕೊಂಡು ವೀರಾವೇಶದಲ್ಲಿ ಮಾತನಾಡಿದರು. ನಾನು ಹಿಂದೂ ಇದ್ದೇನೆ. ಆದರೆ, ಹಿಂದುತ್ವ ಒಪ್ಪುವುದಿಲ್ಲ. ನಾನು ಅಪ್ಪನಿಗೆ ಹುಟ್ಟಿದ್ದು ನಿಜ. ಆದರೆ, ಗ್ಯಾರಂಟಿ ಇಲ್ಲ ಎಂದರ್ಥ. ನಾನು ಕುಂಕುಮ ಹಚ್ಚಿಕೊಳ್ಳುವುದಿಲ್ಲ. ನಮಾಜ್‌ ಟೊಪ್ಪಗಿ ಹಾಕಿಕೊಳ್ಳಲು ತಯಾರಾಗುತ್ತೇನೆ. ನಮ್ಮ ರೇಷ್ಮೆ ಪೇಟ ಹಾಕಿಕೊಳ್ಳುವುದಿಲ್ಲ. ಆದರೆ, ಸಾಬರು ಹಾಕುವ ವಸ್ತುಗಳನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವ ಹೊಂದಿದ್ದಾರೆ. ಮುಸ್ಲಿಮರು ಓಟು ಹಾಕಿದರೆ ಮಾತ್ರ ನಾನು ಗೆಲ್ಲುತ್ತೇನೆ ಎಂದು ಅವರ ಭಾವನೆಯಾಗಿದೆ. ಆದರೆ, ಸದ್ಯ ಕರ್ನಾಟಕದಲ್ಲಿ ಇದು ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.ಛತ್ರಪತಿ ಶಿವಾಜಿ ಮಹಾರಾಜರೂ ಯುದ್ಧ ಮಾಡಿದ್ದಾರೆ. ಅವರ ಸೈನ್ಯದಲ್ಲಿಯೂ ಮುಸ್ಲಿಂ ಸೈನಿಕರಿದ್ದರು. ಯುದ್ಧಕ್ಕೆ ಹೋದಾಗ ಗೆದ್ದ ಮೇಲೆ ಯಾವುದೇ ಸಮಾಜದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲಿಲ್ಲ. ಸೈನಿಕರು ಹೆಣ್ಣಿನ ಮೇಲೆ ಕೈ ಹಾಕಿದರೆ ಅವರ ಕೈ ಕತ್ತರಿಸಿದ್ದಾರೆ. ಒಂದು ಮಸೀದಿ ಕೆಡವಲಿಲ್ಲ. ಮುಸ್ಲಿಂ ಮಹಿಳೆಯರ ಜೊತೆ ಗೌರವಯುತವಾಗಿ ನಡೆದುಕೊಂಡರು. ಹೀಗಾಗಿ, ಶಿವಾಜಿ ಭಾರತದ ಮಹಾನ್ ನಾಯಕ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಅಗ್ನಿವೀರ್ ನೇಮಕಾತಿ: ಆನ್ ಲೈನ್ ಮೂಲಕ ಪರೀಕ್ಷೆ, ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ - ಸೇನೆಯ ಉನ್ನತ ಅಧಿಕಾರಿಗಳ ಸ್ಪಷ್ಟನೆ |

Mon Feb 27 , 2023
ನವದೆಹಲಿ: ಅಗ್ನಿವೀರ್ ಗಳ ನೇಮಕಾತಿ ( Agniveer Recruitment ) ಪ್ರಕ್ರಿಯೆಯಲ್ಲಿ ಮೊದಲ ಹಂತದ ಸ್ಕ್ರೀನಿಂಗ್ ಆಗಿರುವ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ (common entrance examination – CEE) ಬಳಸಲಾಗುವ ಪಠ್ಯಕ್ರಮ ಅಥವಾ ಪರೀಕ್ಷಾ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಇಲ್ಲಿನ ಸೌತ್ ಬ್ಲಾಕ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಭಾರತೀಯ ಸೇನೆಯ ನೇಮಕಾತಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎನ್.ಎಸ್.ಸರ್ನಾ, […]

Advertisement

Wordpress Social Share Plugin powered by Ultimatelysocial