ನಾಯಿ ಕಚ್ಚಿ ರೇಬೀಸ್‌ನಿಂದ ವಿದ್ಯಾರ್ಥಿ ಸಾವು, ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವಂತೆ ಜನರಿಗೆ ಸರ್ಕಾರ ಸೂಚನೆ 6m

ಟಾನಗರ: ಇಟಾನಗರದಲ್ಲಿ 18 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ನಾಯಿ ಕಚ್ಚಿ ರೇಬೀಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ನಂತರ ತಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವಂತೆ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದ್ದಾರೆ.

 

ಜುಲ್ಲಾಂಗ್‌ನಲ್ಲಿರುವ ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿ ನ್ಯಾರೋ ರುಸಿಂಗ್ ಗುರುವಾರ ಮೃತಪಟ್ಟಿದ್ದಾರೆ ಎಂದು ರಾಜ್ಯ ಕಣ್ಗಾವಲು ಅಧಿಕಾರಿ ವೈದ್ಯ ಲೋಬ್ಸಾಂಗ್ ಜಂಪಾ ತಿಳಿಸಿದ್ದಾರೆ.

ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಚ್ಚಿದ ನಂತರ ಜನರು ಆಯಂಟಿ ರೇಬಿಸ್ ಲಸಿಕೆ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಯನ್ನು ಗುರುವಾರ ಟೊಮೊ ರಿಬಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ಸೈನ್ಸಸ್ (ಟಿಆರ್‌ಐಎಚ್‌ಎಂಎಸ್) ಗೆ ರೇಬೀಸ್ ರೋಗಲಕ್ಷಣಗಳೊಂದಿಗೆ ದಾಖಲಿಸಲಾಗಿತ್ತು. ಆದರೆ, ಅವರ ಕುಟುಂಬಸ್ಥರು ಪೂಜೆ ಸಲ್ಲಿಸಬೇಕೆಂದು ಅವನನ್ನು ಮನೆಗೆ ಕರೆದುಕೊಂಡು ಹೋಗಿತ್ತು. ಈ ವೇಳೆ, ಆತ ಮನೆಯಲ್ಲೇ ಸಾವನ್ನಪ್ಪಿದ್ದಾನೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

BREAKING: ISIS ನೇಮಕಾತಿ ಪ್ರಕರಣ: ತಮಿಳುನಾಡು, ತೆಲಂಗಾಣದ 30 ಸ್ಥಳಗಳಲ್ಲಿ NIA ದಾಳಿ

Sat Sep 16 , 2023
ಹೈದರಾಬಾದ್: ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದೆ. ಇಂದು ಸುಮಾರು 30 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಐಸಿಸ್ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ದಾಳಿ ನಡೆಸಿದೆ. ಐಸಿಸ್ ಉಗ್ರಗಾಮಿ ಮತ್ತು ನೇಮಕಾತಿ ಪ್ರಕರಣದಲ್ಲಿ ತಮಿಳುನಾಡು ಮತ್ತು ತೆಲಂಗಾಣ ಎರಡರಲ್ಲೂ 30 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಕೊಯಮತ್ತೂರಿನ 21 ಸ್ಥಳಗಳು, ಚೆನ್ನೈನ ಮೂರು ಸ್ಥಳಗಳು, ಹೈದರಾಬಾದ್‌ನ ಐದು ಸ್ಥಳಗಳು ಮತ್ತು ತೆಂಕಶಿಯ ಒಂದು ಸ್ಥಳದಲ್ಲಿ ತಪಾಸಣೆ […]

Advertisement

Wordpress Social Share Plugin powered by Ultimatelysocial