‘ಸರ್ಕಾರಿ ಶಾಲಾ ಶಿಕ್ಷಕ’ರೇ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕೋ ಮುನ್ನ ಎಚ್ಚರ:

ಕೊಪ್ಪಳ: ಸೋಷಿಯಲ್ ಮೀಡಿಯಾ  ಬಳಕೆ ಹೆಚ್ಚಾಗುತ್ತಿದ್ದಂತೆ, ಅದರಿಂದ ಕೆಲವು ವೇಳೆ ಅನಾಹುತಗಳು ಆದ್ರೇ, ಮತ್ತೆ ಕೆಲವು ವೇಳೆ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗೆಯೇ ಶಾಲಾ ಶಿಕ್ಷಕರೊಬ್ಬರು ( School Teacher ) ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಏನಾಯ್ತು ಅಂತ ಮುಂದೆ ಓದಿ.

ಅಲ್ಲದೇ ಶಿಕ್ಷಕರಾದಂತ ನೀವುಗಳು ಎಚ್ಚರಿಕೆ ವಹಿಸಿ.ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೋಡಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಶೇಕ್ರಾ ನಾಯ್ಕ ಎಂಬುವರು, ವಾಟ್ಸಾಪ್ ನಲ್ಲಿ ಆಕ್ಷೇಪಾರ್ಹ ಸ್ಟೇಟಸ್ ಹಾಕಿದ್ದರು. ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೇ ಈ ಸಂಬಂಧ ಬಿಇಓಗೆ ಶಿಕ್ಷಕನ ವಿರುದ್ಧ ದೂರು ಕೂಡ ನೀಡಲಾಗಿತ್ತು.

ಸಹಶಿಕ್ಷಕ ಶೇಕ್ರಾ ನಾಯ್ಕ ವಿರುದ್ಧ ನೀಡಲಾಗಿದ್ದಂತ ದೂರನ್ನು ಪರಿಶೀಲಿಸಿದಂತ ಬಿಇಓ ಸೋಮಶೇಖರಗೌಡ ಅವರು, ಇದೀಗ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸಹಶಿಕ್ಷಕ ಶೇಕ್ರಾ ನಾಯ್ಕ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದೇನು.?ಕನಕಗಿರಿ ತಾಲೂಕಿನ ಗೋಡಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶೇಕ್ರಾ ನಾಯ್ಕ ಅವರು, ತಮ್ಮ ವಾಟ್ಸಾಪ್ ನಲ್ಲಿ ಪುಲ್ವಾಮಾ ದಾಳಿ ವ್ಯವಸ್ಥಿತ ಪಿತೂರಿ ಎಂಬುದಾಗಿ ಆಕ್ಷೇಪಾರ್ಹ ಸ್ಟೇಟಸ್ ಹಾಕಿದ್ದರು.

ಈ ಹಿನ್ನಲೆಯಲ್ಲಿ ಶೇಕ್ರಾ ನಾಯ್ಕಗೆ ಬಿಇಒ ಸರ್ಕಾರಿ ಸೇವಾ ನಿಯಮ ಉಲ್ಲಂಘನೆ ಸಂಬಂಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಆದ್ರೇ ಈ ನೋಟಿಸ್ ಗೆ ಅವರು ಸಮರ್ಪಕವಾಗಿ ಉತ್ತರ ನೀಡದ ಕಾರಣ, ಬಿಇಓ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಸೋ ಶಿಕ್ಷಕರಾದಂತವರು ಈ ಬಗ್ಗೆ ಎಚ್ಚರಿಕೆ ವಹಿಸೋದು ಮರೆಯಬೇಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಜಿಲ್ಲೆಗೆ ನೀರು ನಿರ್ವಹಣೆ ಸವಾಲು.

Tue Feb 28 , 2023
 ಜಿಲ್ಲೆಯಲ್ಲಿ ಬೃಹತ್‌ ಜಲಾಶಯವಿದ್ದರೂ ಬೇಸಿಗೆಯಲ್ಲಿ ಕೆಲವೆಡೆ ಕುಡಿವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆಯಾಗದಂತೆ ಜಲಾಶಯದ ನೀರನ್ನು ಎಚ್ಚರಿಕೆಯಲ್ಲಿ ಅಳೆದು ತೂಗಿ ಬಳಕೆ ಮಾಡಬೇಕಿದೆ.519.60ಮೀ ಗರಿಷ್ಠ ಮಟ್ಟದಲ್ಲಿ 123.081 ಟಿಎಂಸಿ ನೀರು ಸಂಗ್ರಹಣಾ ಸಾಮಾರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಫೆ.27ರಂದು 513.70 ಮೀಟರ್‌ ಎತ್ತರದಲ್ಲಿ 52.424 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 17.62 ಟಿಎಂಸಿ ಡೆಡ್‌ ಸ್ಟೋರೇಜ್‌ಗೆ ಮೀಸಲಿದ್ದು, ಉಳಿದ 34.804 ಟಿಎಂಸಿ ನೀರಿನಲ್ಲಿ […]

Advertisement

Wordpress Social Share Plugin powered by Ultimatelysocial