ರಾಜಸ್ಥಾನದಲ್ಲಿ ತೀವ್ರ ಚಳಿಗಾಳಿ ಬೀಸುತ್ತಿದೆ.

ಜೈಪುರ: ರಾಜಸ್ಥಾನದಲ್ಲಿ ತೀವ್ರ ಚಳಿಗಾಳಿ ಬೀಸುತ್ತಿದೆ. ಬುಧವಾರ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಜನರು ತತ್ತರಿಸಿದ್ದಾರೆ

ಸಿಕರ್‌ನಲ್ಲಿ ಮೈನಸ್‌ 1.5 ಡಿಗ್ರಿ ಸೆಲ್ಸಿಯಸ್, ಚುರುವಿನಲ್ಲಿ ಮೈನಸ್‌1.2 ಮತ್ತು ಕರೌಲಿನಲ್ಲಿ ಮೈನಸ್ 0.8ರಷ್ಟು ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

ರಾತ್ರಿ ವೇಳೆ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ. ಫತೇಪುರ್‌ನಲ್ಲಿ ಮೈನಸ್ 2.2 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಉಳಿದಂತಹ ಪ್ರದೇಶಗಳಾದ ನರಿಯಾ 0.3 ಡಿಗ್ರಿ ಸೆಲ್ಸಿಯಸ್‌, ಚಿತ್ತೋರ್‌ಗಢ 0.1, ಅಲ್ವಾರ್ 0.5,ಬರನ್ 2 ನಲ್ಲಿ ಶ್ರೀಗಂಗಾನಗರದಲ್ಲಿ 3.1 ಮತ್ತು ಡುಂಗ್‌ಪುರದಲ್ಲಿ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಗುರುವಾರದಿಂದ ಹೀಗಿರುವ ಶೀತಗಾಳಿ ಸುಧಾರಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾದೇವ ಗೋವಿಂದ ರಾನಡೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ.

Wed Jan 18 , 2023
ಮಹಾದೇವ ಗೋವಿಂದ ರಾನಡೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ, ರಾಜನೀತಿಜ್ಞ, ಇತಿಹಾಸಕಾರ, ನ್ಯಾಯಾಧೀಶ ಹಾಗೂ ಅರ್ಥಶಾಸ್ತ್ರಜ್ಞ.ರಾನಡೆ 1842ರ ಜನವರಿ 18ರಂದು ಪುಣೆಯ ನಿಫಾದ್‍ನಲ್ಲಿ ಜನಿಸಿದರು. ತಾಯಿ ಗೋಪಿಕಾಬಾಯಿ, ತಂದೆ ಗೋವಿಂದರಾಯ.ತಂದೆ ಕೊಲ್ಹಾಪುರದಲ್ಲಿ ನೌಕರಿ ಮಾಡುತ್ತಿದ್ದುದರಿಂದ ಅಲ್ಲಿಯ ರಾಜಾರಾಮ್ ಶಾಲೆ ಸೇರಿದರು. ಅಲ್ಲಿ ಮರಾಠಿ ಮಾಧ್ಯಮವಿತ್ತು. ಅನಂತರ ಆಂಗ್ಲಮಾಧ್ಯಮ ಶಾಲೆ ಸೇರಿದರು(1851-56). ಹನ್ನೆರಡನೆಯ ವರ್ಷದಲ್ಲಿ ಇವರ ತಾಯಿ ತೀರಿಕೊಂಡರು. ಮುಂಬಯಿಯ ಎಲ್ಫಿನ್‍ಸ್ಟನ್ ವಿದ್ಯಾಸಂಸ್ಥೆ ಸೇರಿ(1857) ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆ […]

Advertisement

Wordpress Social Share Plugin powered by Ultimatelysocial