BOLLYWOOD:ಸುಶಾಂತ್ ಪ್ರಕರಣದಿಂದಾಗಿ ಹೊರಬಂದ ಡ್ರಗ್ಸ್‌ ಪ್ರಕರಣ;

ನಟ ಸುಶಾಂತ್ ಸಿಂಗ್ ನಿಧನ ಹೊಂದಿ ಎರಡು ವರ್ಷಗಳಾಗುತ್ತಾ ಬಂದಿದ್ದು ಈಗಲೂ ನಟನ ಸಾವಿನ ಕುರಿತು ತನಿಖೆ ಜಾರಿಯಲ್ಲಿದೆ.

ಸುಶಾಂತ್ ಪ್ರಕರಣದಿಂದಾಗಿ ಹೊರಬಂದ ಡ್ರಗ್ಸ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಸಾಹಿಲ್ ಎಂಬಾತನನ್ನು ಎನ್‌ಸಿಬಿಯು ಇಂದು ಬಂಧಿಸಿದೆ.

ಸಾಹಿತ್, ಸುಶಾಂತ್ ಸಿಂಗ್ ರಜಪೂತ್‌ರ ನೆರೆ ಮನೆಯವನೇ ಆಗಿದ್ದ ಎನ್ನಲಾಗಿದೆ.

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಾಹಿಲ್ ಹೆಸರು ಈ ಮೊದಲು ಕೇಳಿ ಬಂದಿತ್ತು. 2021 ರಲ್ಲಿ ತನ್ನ ಹೆಸರು ಪ್ರಕರಣದಲ್ಲಿ ಹೊರಗೆ ಬರುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಸಾಹಿಲ್ ಅರ್ಜಿ ಹಾಕಿದ್ದ, ಆದರೆ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ರದ್ದು ಮಾಡಿತು. ಬಂಧನದಿಂದ ತಪ್ಪಿಸಿಕೊಳ್ಳಲು ಸಾಹಿಲ್ ದುಬೈಗೆ ಪರಾರಿಯಾಗಿದ್ದ.

ಇದೀಗ ಒಂಬತ್ತು ತಿಂಗಳ ಬಳಿಕ ಮತ್ತೆ ಮುಂಬೈಗೆ ಸಾಹಿಲ್ ಬಂದಿದ್ದ ಆತನನ್ನು ಎನ್‌ಸಿಬಿ ಬಂಧಿಸಿದೆ. ಸಾಹಿಲ್ ಅನ್ನು ಕಳೆದ ವರ್ಷ ಸೀಜ್ ಮಾಡಲಾದ ಗಾಂಜಾ ಪ್ರಕರಣ ಹಾಗೂ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಎನ್‌ಸಿಬಿ, ಸಿಬಿಐ ಹಾಗೂ ಮುಂಬೈ ಪೊಲೀಸ್ ವಿಚಾರಣೆ ನಡೆಸಲಿದೆ.

ಸಾಹಿಲ್‌ ಈ ಮೊದಲು ಕರಣ್ ಅರೋರ ಹಾಗೂ ಅಬ್ಬಾಸ್ ಲಖಾನಿಗೆ ಡ್ರಗ್ಸ್ ಮಾರಾಟ ಮಾಡಿದ್ದ. ಅವರಿಬ್ಬರು ಸುಶಾಂತ್ ಸಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅದೇ ಪ್ರಕರಣದಲ್ಲಿ ಸಾಹಿಲ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಎನ್‌ಸಿಬಿಯ ಆಗಿನ ಅಧಿಕಾರಿ ಸಮೀರ್ ವಾಂಖೆಡೆ ಹೇಳಿದ್ದರು. ಆಗ ಸಾಹಿಲ್ ಬಂಧನಕ್ಕೆ ಹೆದರಿ ದುಬೈಗೆ ಪರಾರಿಯಾಗಿದ್ದ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್‌ನ ಹಲವರಿಗೆ ಕಂಟಕ ತಂದೊಡ್ಡಿತು. ಬಾಲಿವುಡ್‌ ಬಗ್ಗೆ ಸಿನಿಮಾ ಪ್ರೇಕ್ಷಕರಿಗಿದ್ದ ಭ್ರಮೆಗಳನ್ನು ಕೆಡವಿಬಿಟ್ಟಿತ್ತು. ಸುಶಾಂತ್ ಪ್ರಕರಣದ ತನಿಖೆಯ ವೇಳೆ ಹಲವರನ್ನು ಎನ್‌ಸಿಬಿ ಬಂಧಿಸಿತು. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಮಹೇಶ್ ಭಟ್ ಸೇರಿದಂತೆ ಹಲವು ಘಟಾನುಘಟಿ ಬಾಲಿವುಡ್ಡಿಗರನ್ನು ತನಿಖೆಗೆ ಒಳಪಡಿಸಿತು.

2020 ರ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ತಮ್ಮ ನಿವಾಸದಲ್ಲಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯೋ ಕೊಲೆಯೊ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆದವು. ಬಿಹಾರ ಚುನಾವಣೆ ವಿಷಯದಲ್ಲಿಯೂ ಸುಶಾಂತ್ ಸಿಂಗ್ ಸಾವು ಚರ್ಚೆಯ ವಿಷಯವಾಗಿತ್ತು.

ಸುಶಾಂತ್ ಸಾವಿನ ಬಳಿಕ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್‌ರ ಪ್ರೇಯಸಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್, ಸುಶಾಂತ್‌ರ ಮ್ಯಾನೇಜರ್ ಸೇರಿದಂತೆ ಹಲವರ ಬಂಧನ ಆಗಿತ್ತು. ರಿಯಾ ಚಕ್ರವರ್ತಿ ಒಂದು ತಿಂಗಳು ಜೈಲಿನಲ್ಲಿದ್ದರೆ, ಶೋವಿಕ್ ಸತತ ಮೂರು ತಿಂಗಳು ಜೈಲಿನಲ್ಲಿರಬೇಕಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಥೈರಾಯ್ಡ್ ಅಪಸಾಮಾನ್ಯ ಕ್ರಿಯೆ: ಈ ಮುಂಚಿನ ಎಚ್ಚರಿಕೆ ಚಿಹ್ನೆಗಳನ್ನು ತಪ್ಪಿಸಿಕೊಳ್ಳಬೇಡಿ

Sat Jan 29 , 2022
ಥೈರಾಯ್ಡ್ ಅಪಸಾಮಾನ್ಯ ಕ್ರಿಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಕಾರ್ಯದಿಂದಾಗಿ ಥೈರಾಯ್ಡ್ ಕಾಯಿಲೆಗಳು ಉಂಟಾಗುತ್ತವೆ, ಇದು ಥೈರಾಯ್ಡ್ ಹಾರ್ಮೋನುಗಳ ಅಸಮರ್ಥ ಉತ್ಪಾದನೆಗೆ ಕಾರಣವಾಗುತ್ತದೆ. ಥೈರಾಯ್ಡ್ ಅಪಸಾಮಾನ್ಯ ಕ್ರಿಯೆಯ ಕೆಲವು ಸಾಮಾನ್ಯ ಅಪಾಯಕಾರಿ ಅಂಶಗಳೆಂದರೆ ಜೆನೆಟಿಕ್ಸ್, ಜೀವನಶೈಲಿ, ಆಹಾರ, ಇತ್ಯಾದಿ. ವಿವಿಧ ಥೈರಾಯ್ಡ್ ಕಾಯಿಲೆಗಳಲ್ಲಿ, ಹೆಚ್ಚು ಪ್ರಚಲಿತದಲ್ಲಿರುವವು ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್, ಹಶಿಮೊಟೊಸ್ ಥೈರಾಯ್ಡಿಟಿಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ.   ಥೈರಾಯ್ಡ್ ಅಪಸಾಮಾನ್ಯ ಕ್ರಿಯೆಯ […]

Advertisement

Wordpress Social Share Plugin powered by Ultimatelysocial