‘ಕಾಂತಾರದಲ್ಲಿ ಒಳ್ಳೆಯದೇನಿದೆ? ಇಷ್ಟೊಂದು ಹೈಪ್‌, ವೈಭವೀಕರಣ ಬೇಕಿತ್ತಾ?

 

 

ಕಾಂತಾರ’ ಈ ವರ್ಷ ದೇಶದ ಸಿನಿಮಾ ಪ್ರೇಮಿಗಳ ಬಾಯಲ್ಲಿ ನಲಿದಿದೆ. ಸಿನಿಮಾ ಕಣ್ತುಂಬಿಕೊಂಡ ಕೋಟ್ಯಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರುನಾಡಲ್ಲಿ ಸಿಕ್ಕ ಪ್ರತಿಕ್ರಿಯೆ ಪರಭಾಷೆಗಳಿಗೂ ಪಸರಿಸಿ ‘ಕಾಂತಾರ’  ಘಮ ಎಲ್ಲರನ್ನೂ ತಲುಪಿದ್ದು ಒಂದೆಡೆಯಾದರೆ, ಹೊಂಬಾಳೆಯ ಸಿನಿ ಬತ್ತಳಿಕೆಗೆ ಮತ್ತೊಂದು ಹಿಟ್‌ ಸಿನಿಮಾ ಅಲಂಕರಿಸಿದೆ.ಹೀಗೆ ಹತ್ತು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡ ‘ಕಾಂತಾರ’ ಚಿತ್ರ ಚಿತ್ರಮಂದಿರಗಳಲ್ಲಿ 75 ದಿನ ಪೂರೈಸಿ 100ನೇ ದಿನದತ್ತ ದಾಪುಗಾಲಿಟ್ಟಿದೆ. ಬಾಕ್ಸ್‌ ಆಫೀಸ್‌ನಲ್ಲಿ 400 ಪ್ಲಸ್‌ ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.ಈ ನಡುವೆ ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಯಿತು. ಅಮೆಜಾನ್‌ ಪ್ರೈಂನಲ್ಲಿ ಸೌತ್‌ ಭಾಷೆಯ ಅವತರಣಿಕೆಗಳು ಸ್ಟ್ರೀಮ್‌ ಆದರೆ, ಹಿಂದಿ ಅವತರಣಿಕೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಯಿತು. ಇದೀಗ ಹೀಗೆ ಒಟಿಟಿಯಲ್ಲಿ ಸಿನಿಮಾ ನೋಡಿದ ಕೆಲವರು ಚಿತ್ರವನ್ನು ಮನಬಂದಂತೆ ತೆಗಳುತ್ತಿದ್ದಾರೆ. ಸಿನಿಮಾ ಬಗ್ಗೆ ತುಚ್ಯವಾಗಿ ಕಮೆಂಟ್‌ ಮಾಡುತ್ತಿದ್ದಾರೆ. ಇಡೀ ದೇಶವೇ ಮೆಚ್ಚಿ ಕೊಂಡಾಡಿದ ಚಿತ್ರವನ್ನು ಕೆಟ್ಟದಾಗಿ ವಿಮರ್ಶಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಕೆಲ ನೆಟ್ಟಿಗರು, ಸಿನಿಮಾದಲ್ಲೇನಿದೆ ಎಂದು ರಿಷಬ್‌ಗೆ ಪ್ರಶ್ನೆ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಾಸ್ಟರ್ ಮಂಜುನಾಥ್ ಅಂದ್ರೆ 'ಓ ನಮ್ಮ ಮಾಲ್ಗುಡಿ ಡೇಸ್ ಹುಡುಗ'

Fri Dec 23 , 2022
    ಮಂಜುನಾಥ್ ಅಂದ್ರೆ ಜನರಿಗೆ ಗುರುತು ಸಿಗಲ್ಲ. ಮಾಸ್ಟರ್ ಮಂಜುನಾಥ್ ಅಂದ್ರೆ ‘ಓ ನಮ್ಮ ಮಾಲ್ಗುಡಿ ಡೇಸ್ ಹುಡುಗ’ ಅಂತ ತಕ್ಷಣ ನೆನಪಾಗುತ್ತಾರೆ. ಇಂದು ಇವರ ಹುಟ್ಟುಹಬ್ಬ. ಮಂಜುನಾಥ್ ಹೆಸರು ಮಂಜುನಾಥ್ ನಾಯಕರ್. ಅವರು 1976ರ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಮಂಜುನಾಥ್ ತಮ್ಮ 3ನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಕನ್ನಡ, ಹಿಂದಿ ಮತ್ತು ತೆಲುಗಿನ ಒಟ್ಟು 68 ಚಿತ್ರಗಳಲ್ಲಿ ನಟಿಸಿದರು. ಶಂಕರನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಸರಣಿಯಲ್ಲಿ […]

Advertisement

Wordpress Social Share Plugin powered by Ultimatelysocial