ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ಹಾವಳಿಯಿಂದ ನಿಧಾನವಾಗಿ ಎಲ್ಲವೂ ಸರಿದಾರಿಗೆ ಬರುತ್ತಿದೆ.

ಬೆಂಗಳೂರು, ಫೆ 14: ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ಹಾವಳಿಯಿಂದ ನಿಧಾನವಾಗಿ ಎಲ್ಲವೂ ಸರಿದಾರಿಗೆ ಬರುತ್ತಿದೆ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಜನ ಭಾಗವಹಿಸುವುದರಲ್ಲಿ ನಿಯಂತ್ರಣ ಹೊರತಾಗಿ ಇದ್ದ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ.ಜನವರಿ ಮಧ್ಯಭಾಗದಿಂದ ಫೆಬ್ರವರಿ ಮೊದಲ ವಾರದ ವರೆಗೆ ಮನೆಮನೆಯಲ್ಲೂ ಶೀತ, ಜ್ವರದ ರೀತಿಯ ಫ್ಲೂ ಕಾಯಿಲೆ ಕಾಣಿಸಿಕೊಂಡಿತ್ತು.ಈಗ ಅದೂ ಕಮ್ಮಿಯಾಗಿದ್ದು, ಕ್ಲಿನಿಕ್ ಮುಂದೆ ಜನರ ಸಂಖ್ಯೆಯೂ ಇಳಿಯುತ್ತಿದೆ.ಜನವರಿ ಮೊದಲ ವಾರದಲ್ಲಿ ನಾಲ್ಕು ಸಾವಿರ ಆಸುಪಾಸಿನಲ್ಲಿ ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದರೆ, ಸಾವಿನ ಸಂಖ್ಯೆ ಐದರ ಆಸುಪಾಸಿನಲ್ಲಿ ಇತ್ತು. ಜನವರಿ ಮಧ್ಯ ಭಾಗದಲ್ಲಿ ಹೊಸ ಸೋಂಕಿತರ ಪ್ರಮಾಣ ಮೂವತ್ತು ಸಾವಿರಕ್ಕೆ ಏರಿತ್ತು, ಆದರೂ ಸಾವಿನ ಪ್ರಮಾಣ ಹತ್ತರ ಕೆಳಗೆ ಇದ್ದವು. ಜನವರಿ ಅಂತ್ಯದ ವೇಳೆಗೆ ಹೊಸ ಕೇಸುಗಳ ಸಂಖ್ಯೆ ಹನ್ನೊಂದು ಸಾವಿರದ ಆಸುಪಾಸಿಗೆ ಇಳಿದಿದ್ದವು, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣಲಾರಂಭಿಸಿತು.ಫೆಬ್ರವರಿ ಮೊದಲ ವಾರದಲ್ಲಿ ಆರು ಸಾವಿರಕ್ಕೆ ಇಳಿದಿದ್ದ ಹೊಸ ಕೇಸುಗಳಿದ್ದರೂ, ದೈನಂದಿನ ಸಾವಿನ ಸಂಖ್ಯೆ ಇಪ್ಪತ್ತರ ಆಸುಪಾಸಿಗೆ ಏರಿಕೆಯಾಗಲು ಆರಂಭವಾಯಿತು. ರಾಜ್ಯದಲ್ಲಿ ಸಾವಿನ ಸರಾಸರಿ ಪ್ರಮಾಣ ಶೇ. 1.18ರಷ್ಟಿದೆ. ಓಮಿಕ್ರಾನ್ ಆಗಲಿ ಮೂರನೇ ಅಲೆಯಾಗಲಿ ಮಾರಣಾಂತಿಕವಲ್ಲ ಎನ್ನುವ ತಜ್ಞರ ಖಚಿತ ವರದಿ/ಅಧ್ಯಯನದ ನಂತರವೂ ಬೆಂಗಳೂರಿನಲ್ಲಿ ಕಳೆದ ನಲವತ್ತು ದಿನಗಳಲ್ಲಿ 350 ಸಾವು ಸಂಭವಿಸಿರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿದ್ದೆಗೆಡಿಸಿದೆ.ಪಾಲಿಕೆಯ ವಿಶೇಷ ಆಯುಕ್ತರಾದ ಡಾ. ಕೆ.ವಿ.ತ್ರಿಲೋಕ ಚಂದ್ರ”ಬಿಬಿಎಂಪಿ ವ್ಯಾಪ್ತಿಯಲ್ಲಿ ದೊಡ್ದ ಮಟ್ಟದಲ್ಲಿ ಕೊರೊನಾ ಹಾವಳಿಯಿಲ್ಲ, ಆದರೂ ಮೂರನೇ ಅಲೆಯಲ್ಲಿ ಮೃತಪಟ್ಟವರಿಗೆ ಬೇರೆ ಏನಾದರೂ ಸಮಸ್ಯೆಗಳಿದ್ದವೆಯೇ, ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗಿತ್ತಾ ಮುಂತಾದ ವಿಶ್ಲೇಷಣೆಯನ್ನು ಮಾಡಲು ಸೂಚಿಸಲಾಗಿದೆ. ಈ ಸಂಬಂಧ ವರದಿ ಸದ್ಯದಲ್ಲೇ ನಮ್ಮ ಕೈಸೇರಲಿದೆ”ಎಂದು ಪಾಲಿಕೆಯ ವಿಶೇಷ ಆರೋಗ್ಯ ಇಲಾಖೆಯ ಆಯುಕ್ತರಾದ ಡಾ. ಕೆ.ವಿ.ತ್ರಿಲೋಕ ಚಂದ್ರ ಹೇಳಿದ್ದಾರೆ.ಹಳೆಯ ಪ್ರಕರಣವನ್ನು ಈಗ ಕೊರೊನಾಗೆ ಕಟ್ಟಲಾಗುತ್ತಿದೆಯಾರಾಜಧಾನಿ ಬೆಂಗಳೂರಿನಲ್ಲಿ ಹೊಸ ಸೋಂಕಿತರ ಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿದೆ, ಆದರೆ, ಸಾವಿನ ಪ್ರಮಾಣದಲ್ಲಿ ನಿರೀಕ್ಷಿತ ಮಟ್ಟದ ಬದಲಾವಣೆ ಕಾಣಿಸದೇ ಇರುವುದು ಗಂಭೀರ ವಿಚಾರವಾಗಿದೆ.ಜನವರಿ ಒಂದರಿಂದ ಫೆಬ್ರವರಿ ಹತ್ತರ ವರೆಗೆ ರಾಜಧಾನಿಯಲ್ಲಿ ಸುಮಾರು 350 ಸಾವು ಸಂಭವಿಸಿದೆ. ಈ ಸಾವುಗಳಿಗೆ ಕಾರಣ ಏನು ಎನ್ನುವ ವಿಶ್ಲೇಷಣೆಗೆ ಬಿಬಿಎಂಪಿ ಮುಂದಾಗಿದೆ. ಜನವರಿ ಆದಿಯಲ್ಲಿ ಒಂದೇ ಸಮನೆ ಸೋಂಕಿತರ ಸಂಖ್ಯೆ ಏರಿಕೆಯಾಗಿ, ಅದೇ ವೇಗದಲ್ಲಿ ಕಮ್ಮಿಯಾಗಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾನವನ ಮೆದುಳನ್ನು ಕಂಪ್ಯೂಟರ್ಗೆ ಜೋಡಿಸುವ ನ್ಯೂರಾಲಿಂಕ್ನ ಪ್ರಯೋಗದಲ್ಲಿ 23 ಕೋತಿಗಳಲ್ಲಿ 15 ಮರಣ;

Mon Feb 14 , 2022
ಮಾನವನ ಮೆದುಳನ್ನು ಕಂಪ್ಯೂಟರ್‌ಗೆ ಜೋಡಿಸುವ ನ್ಯೂರಾಲಿಂಕ್‌ನ ಪ್ರಯೋಗದಲ್ಲಿ 23 ಕೋತಿಗಳಲ್ಲಿ 15 ಸಾವನ್ನಪ್ಪಿವೆ. ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್‌ಗೆ ಸೇರಿದ ಸಂಸ್ಥೆಯು ಯಂತ್ರಗಳೊಂದಿಗೆ ಚಿಂತನೆಯ ಮೂಲಕ ಸಂವಹನ ನಡೆಸಲು ಇಂಪ್ಲಾಂಟ್‌ಗಳನ್ನು ಕಲ್ಪಿಸುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿಯು ಅಲ್ಝೈಮರ್, ಬುದ್ಧಿಮಾಂದ್ಯತೆ ಮತ್ತು ಬೆನ್ನುಹುರಿಯ ಗಾಯಗಳಂತಹ ನರವೈಜ್ಞಾನಿಕ ಪರಿಸ್ಥಿತಿಗಳನ್ನು ಗುಣಪಡಿಸಲು ಮತ್ತು ಕೃತಕ ಬುದ್ಧಿಮತ್ತೆಯೊಂದಿಗೆ ಮಾನವಕುಲವನ್ನು ಬೆಸೆಯಲು ವೈರ್‌ಲೆಸ್ ಬ್ರೈನ್-ಕಂಪ್ಯೂಟರ್ ಚಿಪ್‌ಗಳನ್ನು ಅಳವಡಿಸುವ ಗುರಿಯನ್ನು ಹೊಂದಿದೆ. ಕೈ ಮತ್ತು ತೋಳಿನ ಚಲನೆಯನ್ನು […]

Advertisement

Wordpress Social Share Plugin powered by Ultimatelysocial