ಅಜಯ್‌ ದೇವಗನ್‌ ಕಾಜೋಲ್‌ ರನ್ನು ಮದುವೆಯಾಗಿದ್ದ ಕಾರಣವೇನು.?

 

 

ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಕೂಲ್ ಜೋಡಿ. ಇವರಿಬ್ಬರ ಮದುವೆ ನಡೆದಿದ್ದು 1999ರಲ್ಲಿ. ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಕಾಜೋಲ್ ಹಸೆಮಣೆ ಏರಿದ್ಯಾಕೆ ಅನ್ನೋ ಪ್ರಶ್ನೆ ಈಗಲೂ ಅಭಿಮಾನಿಗಳಲ್ಲಿದೆ. ಅದಕ್ಕೆ ಕಾರಣವನ್ನು ಕೂಡ ಕಾಜೋಲ್ ಬಹಿರಂಗಪಡಿಸಿದ್ದಾರೆ.ಆದಾಗ್ಲೇ 8-9 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಕಾಜೋಲ್ ವರ್ಷಕ್ಕೆ 4-5 ಸಿನಿಮಾಗಳಲ್ಲಿ ನಟಿಸ್ತಾ ಇದ್ರು. ಈ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಳ್ಳಬೇಕು ಅಂದಾಕ್ಷಣ ಅವರಿಗೆ ಹೊಳೆದಿದ್ದು ಮದುವೆ ಆಲೋಚನೆ. ಮದುವೆ ಆದ್ಮೇಲೆ ವರ್ಷಕ್ಕೆ ಒಂದೇ ಸಿನಿಮಾ ಮಾಡಿಕೊಂಡು, ಆರಾಮಾಗಿ, ಶಾಂತಿಯಿಂದ ಇರಬಹುದು ಅನ್ನೋದು ಅವರ ಲೆಕ್ಕಾಚಾರವಾಗಿತ್ತು. ಅದೇ ರೀತಿ ನಡೆದುಕೊಂಡಿದ್ದಾರೆ. ಮದುವೆ ಆದ್ಮೇಲೆ ಫನಾ, ಯು ಮಿ ಔರ್ ಹಮ್, ಮೈ ನೇಮ್ ಈಸ್ ಖಾನ್, ವಿ ಆರ್ ಫ್ಯಾಮಿಲಿ, ತೂನ್ಪುರ್ ಕಾ ಸೂಪರ್ ಹೀರೋ, ದಿಲ್ ವಾಲೆ ಸೇರಿ ಕೆಲವೇ ಚಿತ್ರಗಳಲ್ಲಿ ಕಾಜೋಲ್ ಅಭಿನಯಿಸಿದ್ದಾರೆ.ಕಾಜೋಲ್-ದೇವಗನ್ ದಂಪತಿಗೆ ನ್ಯಾಸಾ ಮತ್ತು ಯುಗ್ ಎಂಬ ಇಬ್ಬರು ಮಕ್ಕಳಿದ್ದಾರೆ. ತಾವು ಅಂದುಕೊಂಡಂತೆ ಕಾಜೋಲ್, ಅಜಯ್ ದೇವಗನ್ ಜೊತೆಗೆ ಶಾಂತಿ ಮತ್ತು ನೆಮ್ಮದಿಯ ಬದುಕು ನಡೆಸ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು:ವಿದ್ಯಾರ್ಥಿ ವೇತನಕ್ಕೆ ಆಧಾರ್​ ಸೀಡಿಂಗ್​ ಕಡ್ಡಾಯ

Sat Jan 29 , 2022
ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾಥಿರ್ಗಳಿಗೆ ನೀಡುವ ಪ್ರೋತ್ಸಾಹಧನವನ್ನು ಖಾತೆಗೆ ಜಮಾ ಮಾಡಲು ಆಧಾರ್​ ಕಾರ್ಡ್​ ಮತ್ತು ಬ್ಯಾಂಕ್​ ಖಾತೆ ಜೋಡಣೆ ಮಾಡಿರುವ ಖಾತೆ ವಿವರವನ್ನೇ ನೀಡಬೇಕೆಂದು ವಿದ್ಯಾಥಿರ್ಗಳಿಗೆ ಇಲಾಖೆ ಸೂಚಿಸಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾಸಿರಿ, ಮೆರಿಟ್​ ಸ್ಕಾಲರ್​ಶಿಪ್​, ಶುಲ್ಕ ವಿನಾಯಿತಿ ಇತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅರ್ಜಿ ಸಲ್ಲಿಸುವವರು ಆಧಾರ್​ ಸಂಖ್ಯೆಯನ್ನು ಬ್ಯಾಂಕ್​ ಖಾತೆಗೆ ಜೋಡಿಸಿ ನ್ಯಾಷನಲ್​ ಪೇಮೆಂಟ್ಸ್​ ಕಾರ್ಪೋರೇಷನ್​ ಇಂಡಿಯಾಗೆ ಲಿಂಕ್​ ಮಾಡಿಸುವಿಕೆ ಕಡ್ಡಾಯ.ಇಲ್ಲವಾದರೆ, ವಿದ್ಯಾರ್ಥಿ ವೇತನವು […]

Advertisement

Wordpress Social Share Plugin powered by Ultimatelysocial