ಹಾಕಿ ಕ್ರೀಡೆಯನ್ನಾಧರಿಸಿದ ‘ಜರ್ಸಿ ನಂಬರ್ 10’ ಸಿನಿಮಾ ರಿಲೀಸ್‌ಗೆ ರೆಡಿ

ಸ್ಯಾಂಡಲ್‌ವುಡ್‌ನಲ್ಲಿ ಕ್ರೀಡೆಯನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಕ್ರೀಡೆ ಎಂದಾಗ ಎಲ್ಲರೂ ಕ್ರಿಕೆಟ್‌ನತ್ತಲೇ ಮುಖ ಮಾಡುತ್ತಾರೆ. ಆದರೆ ನಟ ಆದ್ಯ ತಿಮ್ಮಯ್ಯ ಎಂ. ಅವರು ಹಾಕಿ ಕ್ರೀಡೆ ಬಗ್ಗೆ ಸಿನಿಮಾ ಮಾಡಿದ್ದಾರೆ. ಹೌದು, ತಾವೇ ಹೀರೋ ಆಗಿ ನಟಿಸುವುದರ ಜೊತೆಗೆ ಆ ಸಿನಿಮಾವನ್ನು ನಿರ್ಮಾಣ ಮಾಡಿ, ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಸದ್ಯ ಟ್ರೇಲರ್ ಲಾಂಚ್ ಆಗಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾಗೆ ‘ಜರ್ಸಿ ನಂಬರ್ 10’ ಎಂದು ಟೈಟಲ್ ಇಟ್ಟಿದ್ದಾರೆ.ಚಿತ್ರದ ಬಗ್ಗೆ ಮಾಹಿತಿ ನೀಡುವ ಆದ್ಯ ತಿಮ್ಮಯ್ಯ, ‘ನಮ್ಮ ಸಿನಿಮಾವು ಹಾಕಿ ಕ್ರೀಡೆ ಕುರಿತು ಇದೆ. ಹಾಕಿಯಲ್ಲಿ ಸಾಧನೆ ಮಾಡಬೇಕು ಎಂದು ಹೀರೋ ಅಂದುಕೊಂಡಿರುತ್ತಾನೆ. ಆತ ತನ್ನ ಗುರಿಯನ್ನು ಸಾಧಿಸಲು ಎಷ್ಟು ಕಷ್ಟಪಡುತ್ತಾನೆ? ಇಂಡಿಯಾ ಟೀಮ್‌ಗೆ ಸೆಲೆಕ್ಟ್ ಆಗುತ್ತಾನಾ ಎಂಬುದೇ ಕಥೆ. ಇದರಲ್ಲಿ ಲವ್ ಸ್ಟೋರಿ, ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಇದೆ. ಆತ ಜಿಲ್ಲಾ ಮಟ್ಟದ ಹಾಕಿ ಆಟಗಾರ ಆಗಿರುತ್ತಾನೆ. ದತ್ತಣ್ಣ ಅವರು ಹೀರೋ ತಾತನ ಪಾತ್ರ ಮಾಡಿದ್ದಾರೆ. ಹೀರೋಗೆ ತುಂಬ ಕೋಪ ಇರುತ್ತದೆ. ಅದರಿಂದ ಆತ ಬದುಕಿನಲ್ಲಿ ಸಾಕಷ್ಟು ಕಳೆದುಕೊಳ್ಳುತ್ತಾನೆ. ಇಷ್ಟೆಲ್ಲ ಕಷ್ಟಗಳನ್ನು ಅನುಭವಿಸಿ, ಆತ ಟೀಮ್‌ ಇಂಡಿಯಾಗೆ ಆಡುತ್ತಾನಾ ಅನ್ನೋದೇ ಕಥೆ’ ಎಂದು ಹೇಳುತ್ತಾರೆ.ನಮ್ಮ ಸಿನಿಮಾಗೆ ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ನಾಲ್ಕು ಫೈಟ್‌ಗಳಿವೆ. ಒಂದು ಪ್ರಮುಖ ಪಾತ್ರವನ್ನು ಚಂದನ್ ಆಚಾರ್ ಮಾಡಿದ್ದಾರೆ. ನಾನು ಕೊಡಗಿನವನು. ನಮ್ಮ ಕೊಡಗಿನಲ್ಲಿ ಹಾಕಿ ಕ್ರೀಡೆ ಜಾಸ್ತಿ ಇದೆ. ನಾನು ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ಮಾಡಲಿಂಗ್ ಮಾಡುತ್ತಿದ್ದೆ. ಏನಾದರೂ ವಿಭಿನ್ನವಾಗಿ ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ. ನಾವು ಚಿಕ್ಕ ವಯಸ್ಸಿನಿಂದಲೂ ಹಾಕಿಯನ್ನು ನೋಡಿಕೊಂಡೇ ಬೆಳೆದಿದ್ದೇವೆ. ನಾನು ಕೂಡ ಹಾಕಿ ಆಟಗಾರ..’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಅವರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಯಾವ ಸನ್ ಸ್ಕ್ರೀಂ ಬಳಸುತ್ತೀರಿ? ಈ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರಿಸಿದ್ದು ಹೀಗೆ

Thu Dec 29 , 2022
ಭಾರತ್‌ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಗಾಳಿ, ಬಿಸಿಲು, ಮಳೆ, ಧೂಳನ್ನು ಲೆಕ್ಕಿಸದೇ ಪ್ರತಿನಿತ್ಯ 20 ಕ್ಕೂ ಅಧಿಕ ಕಿಲೋಮೀಟರ್‌ ನಡೆಯುತ್ತಿದ್ದಾರೆ. ಇಷ್ಟಾದರೂ ತಾನು ಯಾವುದೇ ಸನ್‌ ಸ್ಕ್ರೀನ್‌ ಲೋಶನ್‌ ಬಳಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿ, ‘ನಾನು ಯಾವುದೇ ಸನ್‌ ಸ್ಕ್ರೀನ್ ಬಳಸುವುದಿಲ್ಲ. ಚರ್ಮದ ಬಣ್ಣ ಕಪ್ಪಾಗಿದೆ. ನನ್ನ ತಾಯಿ ಕೆಲವೊಂದು ಸನ್‌ಸ್ಕ್ರೀನ್‌ ಕಳುಹಿಸಿಕೊಟ್ಟಿದ್ದರು. ನಾನು ಅದನ್ನು ಬಳಸುತ್ತಿಲ್ಲ’ ಎಂದು ರಾಹುಲ್‌ […]

Advertisement

Wordpress Social Share Plugin powered by Ultimatelysocial