ಶ್ರೇಷ್ಠ ರೈಡರ್ಸ್, ಸಮರ್ಥ ಡಿಫರೆಂಡರ್ ಗಳನ್ನು ಒಳಗೊಂಡು ಬಲಿಷ್ಠ ತಂಡವಾಗಿರುವ ಬೆಂಗಳೂರು ಬುಲ್ಸ್ ತಂಡ;

ಬೆಂಗಳೂರು- ಶ್ರೇಷ್ಠ ರೈಡರ್ಸ್, ಸಮರ್ಥ ಡಿಫರೆಂಡರ್ ಗಳನ್ನು ಒಳಗೊಂಡು ಬಲಿಷ್ಠ ತಂಡವಾಗಿರುವ ಬೆಂಗಳೂರು ಬುಲ್ಸ್ ತಂಡವು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದು ಇಂದು ಕೂಡ ಎದುರಾಳಿ ಪುನೇರಿ ಪಲ್ಟನ್ಸ್‍ನನ್ನು ನೆಲಕ್ಕೆ ಅಪ್ಪಳಿಸಿ ಅದರ ಜಂಘಾಬಲವನ್ನು ಕುಗ್ಗಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿದೆ.

ಕಳೆದ ರಾತ್ರಿ ತೆಲುಗು ಟೈಟಾನ್ಸ್ ವಿರುದ್ಧ ಸೋಲಿನ ಅಂಚಿಗೆ ಬಂದಿದ್ದ ಬೆಂಗಳೂರು ಬುಲ್ಸ್ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ 34- 34 ರಿಂದ ಪಂದ್ಯವನ್ನು ಸಮಬಲಗೊಳಿಸಿರುವುದರಿಂದ ಇಂದಿನ ಪಂದ್ಯದಲ್ಲೂ ಆಟಗಾರರ ಹುಮ್ಮಸ್ಸು ಹೆಚ್ಚಿದೆ.

ಪವನ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಆಡಿರುವ 5 ಪಂದ್ಯಗಳ ಪೈಕಿ 1 ಸೋಲು, 1 ಡ್ರಾ ಹಾಗೂ 3 ಗೆಲುವಿನೊಂದಿಗೆ ಒಟ್ಟು 18 ಅಂಕಗಳನ್ನು ಕಲೆ ಹಾಕಿ 2ನೆ ಸ್ಥಾನದಲ್ಲಿದ್ದರೆ, ಮತ್ತೊಂದೆಡೆ 1 ಪಂದ್ಯದಲ್ಲಿ ಮಾತ್ರ ಗೆಲುವು ಸಾಸಿರುವ ಪುಣೇರಿ ಪಲ್ಟನ್ 5 ಅಂಕಗಳನ್ನು ಗಳಿಸಿ 12ನೆ ಸ್ಥಾನದಲ್ಲಿದ್ದರೂ ಕೂಡ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಮತ್ತೆ ಜಯದ ಲಯಕ್ಕೆ ಮರಳಲು ಪೈಪೆÇೀಟಿ ನಡೆಸುತ್ತಿದೆ.

ಪಲ್ಟನ್‍ಗೆ ರೈಡರ್‍ಗಳ ಕೊರತೆ:

ಉತ್ತಮ ಡಿಫರೆಂಡರ್‍ಗಳನ್ನು ಹೊಂದಿದ್ದರೂ ಕೂಡ ಪಲ್ಟನ್ ಪಾಳೆಯದಲ್ಲಿ ರೈಡರ್‍ಗಳ ಕೊರತೆ ಎದ್ದು ಕಾಣುತ್ತಿದೆ. ಆ ತಂಡದ ಪ್ರಮುಖ ರೈಡರ್ ನಿತಿನ್ ಥೋಮರ್ ಅವರ ಗಾಯವು ತಂಡವನ್ನು ಕಾಡುತ್ತಿದೆ.

ತಮಿಳ್ ತಲೈವಾಸ್ ವಿರುದ್ಧ 8 ರೈಡಿಂಗ್ ಪಾಯಿಂಟ್ಸ್ ಗಳಿಸಿದ ಪಂಕಜ್ ಮೊಹಿತೆ ಮೇಲೆಯೇ ತಂಡ ಅವಲಂಬಿಸಿದೆ. ಡಿಫೆಂಡರ್‍ಗಳಾದ ವಿಶಾಲ್ ಭಾರದ್ವಾಜ್, ಅಭಿನೇಶ್ ನಂದರಾಜನ್ ಅವರು ಉತ್ತಮ ಲಯದಲ್ಲಿದ್ದಾರೆ. ಶ್ರೇಷ್ಠ ರೈಡರ್ ರಾಹುಲ್ ಚೌಧರಿ ತಂಡದಲ್ಲಿದ್ದರೂ ಅವರಿಂದ ಉತ್ತಮ ಪ್ರದರ್ಶನ ಬಾರದಿರುವುದು ತಂಡಕ್ಕೆ ಹೊಡೆತ ಬಿದ್ದಿದೆ.

ಗುಮ್ಮಲು ಗೂಳಿ ರೆಡಿ:

ಆರಂಭಿಕ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋಲು ಕಂಡರೂ ಕೂಡ ನಂತರ ಮೈಕೊಡವಿಕೊಂಡು ಎದ್ದಿರುವ ಪವನ್ ಶೆರಾವತ್ ತಂಡದ ಪರ ಚಂದ್ರನ್ ರಂಜಿತ್, ಪವನ್ ಶೆರಾವತ್, ಭರತ್ ಉತ್ತಮ ರೈಡಿಂಗ್‍ನಿಂದ ಎದುರಾಳಿ ಕೋರ್ಟ್‍ನಲ್ಲಿ ವಿಜೃಂಭಿಸಿ ಪಾಯಿಂಟ್ಸ್ ಗಳಿಸಿದ್ದರೆ, ಸೌರಭ್ ನಂದಾಲ್, ಮಹೇಂದ್ರ ಸಿಂಗ್ ಅವರು ಎದುರಾಳಿ ಆಟಗಾರರಿಗೆ ಲಗಾಮು ಹಾಕಲು ಯಶಸ್ವಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2023 ರ ಚುನಾವಣೆಗೆ ರೇಣುಕಾಚಾರ್ಯ ಕಸರತ್ತು: ಹಣದ ಆಮಿಷವೊಡ್ಡಿ ಆಣೆ ಮಾಡಿಸಿದ ಶಾಸಕ

Sun Jan 2 , 2022
ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಹೋನ್ನಾಳಿ ಶಾಸಕ ಭರ್ಜರಿ ತಯಾರಿನಡೆಸಿದ್ದಾರೆ. ಕೋವಿಡ್ ಪರಿಹಾರದ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಗೆ ಆಮಿಷವೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ. “ ಬೊಮ್ಮಾಯಿ ಸರ್ಕಾರ ಕೋವಿಡ್ ಪರಿಹಾರವಾಗಿ 1ಲಕ್ಷ ರೂಪಾಯಿ ಹಣವನ್ನು ನೀಡುತ್ತಿದೆ , ನಾನು ನಿಮಗೆ ವೈಕ್ತಿಕವಾಗಿ ಹತ್ತು ಸಾವಿರ ನೀಡುತ್ತಿದ್ದೇನೆ ಮುಂಬರುವ ಚುನಾವಣೆಗೆ ನನಗೆ ವೋಟ್ ಹಾಕಬೇಕೆಂದು ಷರತ್ತು ವಿಧಿಸಿದಲ್ಲದೇ ಮನೆಬಳಿ ಜನರನ್ನು ಕರೆಸಿಕೊಂಡು ಆಣೆಪ್ರಮಾಣ ಮಾಡಿಸಿಕೊಂಡಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial