40 ವರ್ಷಗಳ ಬಳಿಕ ಖುಲಾಯಿಸಿದ ಅದೃಷ್ಟ.

ವದೆಹಲಿ: 35 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಪಂಜಾಬ್‌ನ ದೇರಾಬಸ್ಸಿಯಲ್ಲಿ 88 ವರ್ಷದ ವ್ಯಕ್ತಿಯೊಬ್ಬರಿಗೆ ರಾತ್ರೋರಾತ್ರಿ ಅದೃಷ್ಟವೊಂದು ಖುಲಾಯಿಸಿದೆ.

ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಬಂಪರ್ ಲಾಟರಿ 2023 ಫಲಿತಾಂಶಗಳನ್ನು ಜನವರಿ 16 ರಂದು ಪ್ರಕಟಿಸಿತು.

ಇದರಲ್ಲಿ ದ್ವಾರಕಾ ದಾಸ್ ಎಂಬ 88 ವರ್ಷದ ವ್ಯಕ್ತಿ ಮೊದಲ ಬಹುಮಾನವಾಗಿ 5 ಕೋಟಿ ರೂ. ಗೆದ್ದಿದ್ದಾರೆ.

ಮಹಂತ್ ದ್ವಾರಕಾ ದಾಸ್ ಅವರು 1947 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಿಂದ ಪಂಜಾಬ್‌ಗೆ ವಲಸೆ ಬಂದರು. ದಾಸ್ ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರು. ಯಾವಾಗಲೂ ಇಲ್ಲದ್ದು, ಇದ್ದಕ್ಕಿದ್ದಂತೆ ದಾಸ್ ಅದೃಷ್ಟ ಬದಲಾಗಿದ್ದು, ಲಾಟರಿಯಿಂದ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ʻನಾನು ಸಂತೋಷವಾಗಿದ್ದೇನೆ. ನಾನು ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೇನೆ. ಗೆದ್ದ ಮೊತ್ತವನ್ನು ನನ್ನ ಇಬ್ಬರು ಪುತ್ರರಿಗೆ ಮತ್ತು ನನ್ನ ಡೇರಾಗೆ ವಿತರಿಸುತ್ತೇನೆʼ ಎಂದು ಮಹಂತ್ ದ್ವಾರಕಾ ದಾಸ್ ಹೇಳಿದ್ದಾರೆ.

ಜಿರಾಕ್‌ಪುರದಲ್ಲಿ ಲಾಟರಿ ವ್ಯವಹಾರ ನಡೆಸುತ್ತಿರುವ ಲೋಕೇಶ್, ದ್ವಾರಕಾ ದಾಸ್ ಅವರು ತೆರಿಗೆ ಕಡಿತದ ನಂತರ ಸುಮಾರು 3.5 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಸಕರನ್ನು ಬಿಡದ ಭೂಗಳ್ಳರು, ಸೈಟ್‌ನ ನಕಲಿ ಖಾತೆ ಸೃಷ್ಟಿಸಿದರು.

Fri Jan 20 , 2023
ಬೆಂಗಳೂರು, ಜನವರಿ 20: ರಾಜ್ಯ ರಾಜಧಾನಿ ಮತ್ತು ಮಹಾನಗರವಾದ ಬೆಂಗಳೂರಿನಲ್ಲಿ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಶ್ರೀಸಾಮಾನ್ಯರ ನಿವೇಶನಗಳ ಖಾತೆ ಬದಲಾವಣೆ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಶಾಸಕರುಗಳ ನಿವೇಶನಗಳ ದಾಖಲೆಗಳನ್ನು ನಕಲು ಮಾಡಿ ಮೋಸಗೈದ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯ ಜನರನ್ನು ಕಾಡುವ ಭೂಗಳ್ಳತನದ ಭೂತ ಈಗ ಶಾಸಕರ ಬೆನ್ನಹತ್ತಿದೆ. ರಾಜ್ಯದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸೇರಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲದರ ನಕಲು ದಾಖಲೆ‌ ಸೃಷ್ಟಿಸಿ ತಮ್ಮ […]

Advertisement

Wordpress Social Share Plugin powered by Ultimatelysocial