ಮನರೇಗಾ ಯೋಜನೆ

ಮನರೇಗಾ ಯೋಜನೆ ಅಡಿಯಲ್ಲಿ 50 ಮಾನವ ದಿನಗಳ ಹೆಚ್ಚುವರಿಯಾಗಿ ಕೆಲಸ ನೀಡುವಂತೆ ಕೂಲಿಕಾರರ ಸಂಘಟನೆಯಿಂದ ಒತ್ತಾಯ
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕನ್ನು ಅತಿವೃಷ್ಟಿ ಪ್ರದೇಶದ ಎಂದು ಘೋಷಣೆ ಮಾಡಿ ಕೃಷಿ ಕೂಲಿಕಾರರಿಗೆ ಮನರೇಗಾ(ಉದ್ಯೋಗ ಖಾತ್ರಿ) ಅಡಿಯಲ್ಲಿ 50 ಮಾನವ ದಿನಗಳ ಹೆಚ್ಚುವರಿಯಾಗಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ರುಕ್ಮಿಣಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವರ್ಷ ಸತತವಾಗಿ ವಿಪರೀತ ಮಳೆ ಬಿದ್ದು ಅತಿವೃಷ್ಟಿಯಾಗಿ ಬೆಳೆಹಾನಿಯಾದಾಗ ಅಲ್ಪ ಪ್ರಮಾಣದಲ್ಲಿ ರೈತರಿಗೆ ಪರಿಹಾರ ನೀಡಿದ್ದಾರೆ. ರೈತರನ್ನೆ ನಂಬಿಕೊಂಡಿದ್ದ ಕೃಷಿ ಕೂಲಿಕಾರರಿಗೆ ಯಾವುದೇ ಪರಿಹಾರ ನೀಡಲಿಲ್ಲ.ಅಲ್ಲದೇ ಕೃಷಿ ಕೂಲಿಕಾರರು ಸಂಕಷ್ಟದಲ್ಲಿರುವಾಗ ರಾಯಚೂರು ಜಿಲ್ಲೆಯೆ ಅತಿವೃಷ್ಟಿ ಪ್ರವಾಪೀಡಿತ ಜಿಲ್ಲೆ ಎಂದು ಘೋಷಿಸಿ ಮನರೇಗಾ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 50 ದಿನಗಳ ಕೆಲಸ ನೀಡಿ ಕೃಷಿ ಕೂಲಿಕಾರರು ಬೇರೆಡೆ ವಲಸೆ ಹೋಗದಂತೆ ತಡೆಗಟ್ಟಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಗಮೇಶ ಮೂಲಿಮನಿ,ತಾಲ್ಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ಶಿವನಗೌಡ ನಾಯಕ,ದುರುಗಪ್ಪ ಬಳಗಾನೂರು,ಶಿವಗುಂಡಪ್ಪ,ಹನುಮಂತ ಜಿಕ್,ಬಸ್ಸಪ್ಪ ತವಗ ಸೇರಿದಂತೆ ಇತರರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗರ್ಭಿಣಿ ಮಹಿಳೆ ಸಾವು ಅನಾಥವಾದ ಮಗು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ

Sat Dec 31 , 2022
ಗರ್ಭಿಣಿ ಮಹಿಳೆ ಸಾವು ಅನಾಥವಾದ ಮಗು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ಕುಕನೂರು ಪಟ್ಟಣದ ಜಗಜೀವನರಾಂ ಕಾಲೋನಿಯ ನಿವಾಸಿಯಾದ ಹನುಮಂತಪ್ಪ ಘಾಟಿ ಇವರ ಮಗಳು ದಿ.ಉಮಾ ಗಂಡ ದುರಗೇಶ ಛಲವಾದಿ ಎಂಬ ಮಹಿಳೆಯು ಹೆರಿಗೆ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದನ್ನು ಖಂಡಿಸಿ ಕುಕನೂರ ತಾಲೂಕಿನ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಿದರು ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ […]

Advertisement

Wordpress Social Share Plugin powered by Ultimatelysocial