ಮೇಲ್ಜಾತಿಯವರು ತಯಾರಿಸಿದ ಬಿಸಿಯೂಟ ತಿನ್ನದೆ ದಲಿತ ವಿದ್ಯಾರ್ಥಿಗಳಿಂದ ಪ್ರತಿರೋಧ

ಪಿಥೋರಗಢ: ಪರಿಶಿಷ್ಟ ಜಾತಿಗೆ ಸೇರಿದ ಮಧ್ಯಾಹ್ನದ ಬಿಸಿಯೂಟ ತಯಾರಕಿಯನ್ನು ಕೆಲಸದಿಂದ ತೆಗೆದು ಹಾಕಿ, ಮೇಲ್ಜಾತಿಗೆ ಸೇರಿದ ಅಡುಗೆ ತಯಾರಕಿಯನ್ನು ನೇಮಿಸಿದ್ದಕ್ಕೆ ಪ್ರತಿರೋಧ ತೋರಿರುವ ದಲಿತ ವಿದ್ಯಾರ್ಥಿಗಳು ಊಟವನ್ನು ತ್ಯಜಿಸಿದ್ದಾರೆ.

ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ ಸರ್ಕಾರಿ ಇಂಟರ್‌-ಕಾಲೇಜಿನಲ್ಲಿ ಬಿಸಿಯೂಟದ ವಿಚಾರವಾಗಿ ಮೇಲ್ಜಾತಿ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಊಟ ನಿರಾಕರಣೆಯ ಹೋರಾಟ ನಡೆದಿದೆ.

ಈ ಮೊದಲು ಮಧ್ಯಾಹ್ನದ ಬಿಸಿಯೂಟ ತಯಾರಕಿಯಾಗಿ ಸುಖಿ ದಂಗ್‌ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. ಈಕೆ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ 6-8ನೇ ತರಗತಿ ವರೆಗಿನ 43 ವಿದ್ಯಾರ್ಥಿಗಳು ಬಿಸಿಯೂಟ ನಿರಾಕರಿಸಿದ್ದರು. ಬಳಿಕ ಸುಖಿ ದಂಗ್‌ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಬಿಸಿಯೂಟ ತಯಾರಕಿಯ ನೇಮಕ ಪ್ರಕ್ರಿಯೆಯಲ್ಲಿನ ಲೋಪಗಳ ಕಾರಣ ಕೊಟ್ಟು, ಚಂಪಾವತ್‌ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುಖಿ ದಂಗ್‌ ಅವರನ್ನು ಶಾಲೆಯಿಂದ ಹೊರದಬ್ಬಿದ್ದಾರೆ. ಆಕೆಯ ಸ್ಥಾನಕ್ಕೆ ಮೇಲ್ಜಾತಿಗೆ ಸೇರಿದ ಮಹಿಳೆಯನ್ನು ನೇಮಿಸಲಾಗಿದೆ.

ಇದೀಗ ಹೊಸ ಬಿಸಿಯೂಟ ತಯಾರಕಿ ಮಾಡಿದ ಊಟವನ್ನು ಸೇವಿಸಲು 23 ದಲಿತ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

‘ಈ ವಿಚಾರವಾಗಿ ತನಿಖೆ ನಡೆಯುತ್ತಿದೆ. ದಲಿತ ವಿದ್ಯಾರ್ಥಿಗಳು ನಾಳೆಯಿಂದ ಮಧ್ಯಾಹ್ನದ ಭೋಜನ ಸೇವಿಸುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ಚಂಪಾವತ್‌ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ವಿನೀತ್‌ ಥೋಮರ್‌ ಹೇಳಿದ್ದಾರೆ.

ದಲಿತ ಬಿಸಿಯೂಟ ತಯಾರಕಿಯನ್ನು ಕೆಲಸದಿಂದ ಕಿತ್ತುಹಾಕಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಪ್ರದೀಪ್‌ ಟಮ್ಟಾ ಚಳವಳಿ ನಡೆಸುವುದಾಗಿ ಹೇಳಿದ್ದಾರೆ. ದಲಿತ ಮಹಿಳೆಯನ್ನು ಮರು ನೇಮಕ ಮಾಡದಿದ್ದರೆ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಘೇರವ್‌ ಹಾಕುವುದಾಗಿ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ರಾವಣ್‌ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಡಬ: ಚಿರತೆ ಮರಿಯನ್ನು ಹೋಲುವ ಪ್ರಾಣಿ ವಾಹನದಡಿಗೆ ಬಿದ್ದು ಸಾವು

Mon Dec 27 , 2021
ಚಿರತೆ ಮರಿಯನ್ನು ಹೋಲುವ ಪ್ರಾಣಿಯೊಂದು ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇಸ್ಟೇಷನ್ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಚಿರತೆಯನ್ನು ಹೋಲುವ ಈ ಪ್ರಾಣಿಯು ಅಪರಿಚಿತ ವಾಹನದ ಅಡಿಗೆ ಬಿದ್ದಿದ್ದು, ರಸ್ತೆಯಲ್ಲೇ ಸಾವನ್ನಪ್ಪಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial