ತೈವಾನ್‌ ದ್ವೀಪದ ಅಂತರ್ಜಾಲ ಕೇಬಲ್‌ ಕತ್ತರಿಸಿದ ಚೀನ !

ತೈಪೆ : ನೆರೆ ರಾಷ್ಟ್ರಗಳ ಜತೆಗೆ ಸದಾ ಕ್ಯಾತೆ ತೆಗೆಯುವ, ಭೂ ಅತಿಕ್ರಮಣಕ್ಕೆ ಹಪಾಹಪಿಸುವ ಚೀನಾ, ತೈವಾನ್‌ ಮೇಲಿನ ತನ್ನ ಉದ್ದೇಶಿತ ಕುತಂತ್ರ ಮುಂದುವರಿಸಿದ್ದು, ತೈವಾನ್‌ನ ದ್ವೀಪ ಪ್ರದೇಶದ ಜಲಾಂತರ್ಗಾಮಿ ಅಂತರ್ಜಾಲ ಸೇವೆಯ ಕೇಬಲ್‌ಗ‌ಳನ್ನು ಕತ್ತರಿಸಿಹಾಕಿದೆ. 14 ಸಾವಿರ ಮಂದಿ ವಾಸವಿರುವ ಮತ್ಸು ದ್ವೀಪವು 2 ಜಲಾಂತರ್ಗಾಮಿ ಅಂತರ್ಜಾಲ ಕೇಬಲ್‌ಗ‌ಳನ್ನು ಅವಲಂಬಿಸಿದ್ದು, ಚೀನಾದ ಕುತಂತ್ರದಿಂದ ಈಗ ಜನರು ಪರದಾಡುವಂತಾಗಿದೆ.

ಫೆ.2 ರಂದು ಚೀನ ಮೀನುಗಾರಿಕೆ ಹಡಗೊಂದು ದ್ವೀಪ ಪ್ರದೇಶದ 50 ಕಿ.ಮೀ. ಅಂತರದಲ್ಲಿ ಮೊದಲ ಕೇಬಲ್‌ ಕತ್ತರಿಸಿಹಾಕಿತ್ತು. ಈಗ ಮತ್ತೊಮ್ಮೆ ಚೀನ ತನ್ನ ಕುತಂತ್ರದಿಂದ ಫೆ.8ರಂದು 2ನೇ ಕೇಬಲ್‌ ಅನ್ನೂ ಚೀನಾದ ಸರಕು ಸಾಗಣೆ ಹಡಗೊಂದು ಕತ್ತರಿಸಿಹಾಕಿದೆ ಎಂದು ತೈವಾನ್‌ನ ಅತಿದೊಡ್ಡ ಸೇವಾ ಪೂರೈಕೆದಾರ ಚುಂಗ್ವಾ ಟೆಲಿಕಾಂ ಆರೋಪಿಸಿದೆ. ಕೇಬಲ್‌ಗ‌ಳ ಕಡಿತದಿಂದ ಜನರಿಗೆ ತೊಂದರೆಯಾಗಿರುವುದು ಮಾತ್ರವಲ್ಲದೆ, ಭದ್ರತಾ ವ್ಯವಸ್ಥೆ, ತಂತ್ರಜ್ಞಾನ, ಗುಪ್ತಚರ ಮಾಹಿತಿ ರವಾನೆಗೂ ಅಡಚಣೆಯಾಗಿದೆ.ಇನ್ನು ಚೀನ ಈ ರೀತಿ ಅಂತರ್ಜಾಲ ಕೇಬಲ್‌ ಕಡಿತಗೊಳಿಸಿ,ಉದ್ಧಟತನ ಮರೆಯುತ್ತಿರುವುದು ಇದು ಮೊದಲೇನಲ್ಲ.ಕಳೆದ 5 ವರ್ಷದಲ್ಲಿ 27 ಬಾರಿ ಇಂಥ ಕೃತ್ಯ ಎಸಗಿದೆ ಎಂದು ಟೆಲಿಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋಳಿ ಆಚರಿಸಿ ಸ್ನಾನಕ್ಕೆ ಹೋದ ದಂಪತಿ ಗೀಸರ್ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಸಾವು!

Thu Mar 9 , 2023
ಘಾಜಿಯಾಬಾದ್(ಉತ್ತರ ಪ್ರದೇಶ): ಮುರಾದ್‌ನಗರದ ಅಗ್ರಸೇನ್ ವಿಹಾರ್ ಮೊದಲ ಹಂತದ ಕಾಲೋನಿಯಲ್ಲಿ ಬುಧವಾರ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೋಳಿ ಆಚರಿಸಿದ ನಂತರ, ದೀಪಕ್ (40) ಮತ್ತು ಶಿಲ್ಪಿ (36) ಸ್ನಾನ ಮಾಡಲು ಹೋಗಿ ತಮ್ಮ ಗ್ಯಾಸ್ ಗೀಸರ್ ಅನ್ನು ಸ್ವಿಚ್ ಆನ್ ಮಾಡಿದ್ದಾರೆ. ಆದರೆ, ಗ್ಯಾಸ್ ಸೋರಿಕೆಯನ್ನು ಗಮನಿಸಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ, ಅವರ ಪೋಷಕರು ಪ್ರಜ್ಞಾಹೀನ […]

Advertisement

Wordpress Social Share Plugin powered by Ultimatelysocial