ಫುಲ್ ಡಯಟ್ ನಲ್ಲಿ ಇದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್,

ಬೆಂಗಳೂರು:ಡಿ ಬಾಸ್ ದರ್ಶನ್ ಬಗ್ಗೆ ಏನಾದ್ರೂ ನ್ಯೂಸ್ ಸಿಗುತ್ತಾ ಅಂತ ಅವರ ಫ್ಯಾನ್ಸ್ ಕಾಯುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಡಿ ಬಾಸ್ ಗೆಳೆಯರ ಜೊತೆ ಕ್ರಿಕೆಟ್ ಆಡೋದನ್ನ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದರು. ಈಗ ಸಿಗ್ತಾ ಇರೋ ಮ್ಯಾಟರ್ ಏನಪ್ಪಾ ಅಂದ್ರೆ ಡಿ ಬಾಸ್ ಈಗ ಕಂಪ್ಲೀಟ್ ಡಯಟ್ ನಲ್ಲಿ ಇದ್ದಾರಂತೆ.ವಾಸ್ತವವಾಗಿ

ತಮ್ಮ ಮುಂದಿನ ಸಿನಿಮಾಗಾಗಿ ದೇಹದ ತೂಕ ಕಂಪ್ಲೀಟ್ ಆಗಿ ಇಳಿಸಿ ಯಂಗ್ ಆಂಡ್ ಎನರ್ಜಿಟಿಕ್ ಕಾಣಿಸಲು ಸಕಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದ್ದಾರೆ. ಈ ಖುಷಿ ಸುದ್ದಿಯನ್ನ ಕೇಳಿದ ಅವರ ಅಭಿಮಾನಿಗಳು ಸಖತ್ ಹ್ಯಾಪಿ ಆಗಿದ್ದಾರೆ.

 

ನಿಮಗೆಲ್ಲ ಗೊತ್ತಿರೋ ಹಾಗೇ ಡಿ ಬಾಸ್ ತುಂಬಾ ಫುಡ್ಡಿ. ಆದ್ರೆ ಈಗ ಎಲ್ಲವನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಅಂತೆ. ತಮ್ಮ ಎಲ್ಲಾ ಸಿನಿಮಾಗಳಲ್ಲಿ ಅದ್ಭುತವನ್ನೇ ಕೊಡೋ ಡಿ ಬಾಸ್ ತಮ್ಮ ಮುಂದಿನ ಚಿತ್ರದಲ್ಲಿ ಇನ್ನೊಂದು ಅದ್ಭುತ ಕೊಡುತ್ತಾರೆ ಅಂತ ಹೇಳಲಾಗುತ್ತಿದೆ.

ರಾಬರ್ಟ್ ಆದ ಬಳಿಕ ಕ್ರಾಂತಿ ಸಿನಿಮಾ ಮಾಡಿದ್ರು. ಕ್ರಾಂತಿ ಜನವರಿ 26ಕ್ಕೆ ರಿಲೀಸ್ ಆಗಿ ಮಹಾಕ್ರಾಂತಿಯನ್ನೇ ಮಾಡಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡೋ ಮೂಲಕ ಗಲ್ಲಾಪೆಟ್ಟಿಗೆಯನ್ನೇ ಧೂಳ್ ಧೂಳ್ ಮಾಡಿದೆ. ಕ್ರಾಂತಿ ಸಿನಿಮಾ ಮೂಲ ಒಂದೊಳ್ಳೆ ಸಂದೇಶವನ್ನೂ ಕೂಡ ರವಾನಿಸಿದ್ದಾರೆ. ಸರಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಅಚ್ಚುಕಟ್ಟಾಗಿ ತೋರಿಸೋ ಪ್ರಯತ್ನ ಇಲ್ಲಿ ಸಾಗಿತ್ತು. ಇದರ ಜೊತೆಗೆ ಕ್ರಾಂತಿ ಸಿನಿಮಾದ ಅಷ್ಟೂ ಹಾಡುಗಳು ಕೂಡ ಸೂಪರ್ ಡೂಪರ್ ಆಗಿ ಹಿಟ್ ಆಗಿವೆ.

ಈಗ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ರೆಡಿಯಾಗುತ್ತಿದ್ದಾರೆ. ಇದ್ರ ಜೊತೆಗೆ ಅಭಿಮಾನಿಗಳು ಕೂಡ ಸಿಹಿ ಮ್ಯಾಟರ್ ಗಳಿಗೆ ಕಾಯುತ್ತಲೇ ಇದ್ದಾರೆ. ನಾವು ಡಿ ಬಾಸ್ ಬಗ್ಗೆ ಇನ್ನೊಂದು ಬೆಸ್ಟ್ ವಿಚಾರ ಹೇಳಲೇಬೇಕು. ಅದೇನ್ ಅಂದ್ರೆ ಇತ್ತೀಚಿಗೆ ಸಮಾಜಕ್ಕೆ ಒಳ್ಳೆ ಸಂದೇಶ ಸಾರೋ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಡಿ ಬಾಸ್. ಇದು ಉತ್ತಮ ಬೆಳವಣಿಗೆ. ಯಾಕಂದ್ರೆ ಅವರನ್ನ ಫಾಲೋ ಮಾಡೋ ಫ್ಯಾನ್ಸ್ ಇದನ್ನ ತಮ್ಮ ರಿಯಲ್ ಲೈಫ್ ನಲ್ಲಿ ಅಳವಡಿಸಿಕೊಳ್ಳುತ್ತಾರೆ. ಎನಿ ವೇ ಅವರ ಮುಂದಿನ ಸಿನಿಮಾಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರಲಿವೆ ಏರ್ಟೆಲ್ ರೀಚಾರ್ಜ್ ಪ್ಯಾಕ್​ಗಳ ಬೆಲೆ!

Wed Mar 1 , 2023
ಜನವರಿ ತಿಂಗಳಲ್ಲಿ ಆರಂಭಿಕ ರೀಚಾರ್ಜ್ ಪ್ಲಾನ್​ಗಳ ದರವನ್ನು ಶೇ. 57ರಷ್ಟು ಏರಿಕೆ ಮಾಡಿದ್ದ ಏರ್​ಟೆಲ್ ಸಂಸ್ಥೆ ಇದೀಗ ಎಲ್ಲಾ ರೀತಿಯ ರೀಚಾರ್ಜ್ ಪ್ಲಾನ್​ಗಳ ದರ ಏರಿಕೆಯ ಸುಳಿವನ್ನು ನೀಡಿದೆ.ನವದೆಹಲಿ :ಏರ್​ಟೆಲ್ ಟೆಲಿಕಾಂ ಕಂಪನಿಯ ಡಾಟಾ , ಮೊಬೈಲ್ ಕರೆ ದರಗಳು  ಈ ವರ್ಷ ಏರಿಕೆ ಕಾಣುವ ನಿರೀಕ್ಷೆ ಇದೆ . ಏರ್​ಟೆಲ್​ನ ಛೇರ್ಮನ್ ಸುನೀಲ್ ಭಾರ್ತಿ ಮಿಟ್ಟಲ್ ಅವರು ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಮೊನ್ನೆ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್​ನಲ್ಲಿ   ಮಾತನಾಡುತ್ತಾ […]

Advertisement

Wordpress Social Share Plugin powered by Ultimatelysocial