Chandrayaan-3: ‘ಚಂದ್ರಯಾನ-3’ಗೆ ಮತ್ತೊಂದು ಯಶಸ್ಸು!

ಭಾರತ ಚಂದ್ರಯಾನ-3 ಯಶಸ್ಸಿನ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಇಸ್ರೋ ಹೆಸರು ರಾರಾಜಿಸಿದೆ. ಈ ವೇಳೆ ಜಗತ್ತಿನ ಯುಟ್ಯೂಬ್ ಇತಿಹಾಸದಲ್ಲೇ ಅಳಿಸಲಾಗದ ಸಾಧನೆ ಮಾಡಿದೆ. ಈ ಕುರಿತು ಯುಟ್ಯೂಬ್‌ನ ಮುಖ್ಯಸ್ಥರೇ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಇಸ್ರೋ ಬಗ್ಗೆ ಮತ್ತು ‘ಚಂದ್ರಯಾನ-3’ರ ಕುರಿತು ಯುಟ್ಯೂಬ್ ಹೇಳಿದ್ದೇನು?

ಭಾರತದ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇಸ್ರೋ ಆಗಸ್ಟ್ 23ರಂದು ವಿಕ್ರಮ್‌ ಲ್ಯಾಂಡರ್‌ ಅನ್ನ ಚಂದ್ರನ ಅಂಗಳಕ್ಕೆ ಇಳಿಸಿತ್ತು. ಆಗ ಲ್ಯಾಂಡರ್ ಇಳಿಯುವ ಪ್ರತಿಕ್ಷಣವನ್ನು ಜಗತ್ತಿಗೇ ತೋರಿಸಲು, ನೇರಪ್ರಸಾರ ವ್ಯವಸ್ಥೆ ಮಾಡಿತ್ತು. ಯುಟ್ಯೂಬ್‌ನ ಇಸ್ರೋ ಚಾನೆಲ್‌ನಲ್ಲಿ ಈ ಲೈವ್ ವ್ಯವಸ್ಥೆ ಇತ್ತು, ಹೀಗೆ ನೇರಪ್ರಸಾರವನ್ನು ಒಂದೇ ಸಮಯಕ್ಕೆ 80 ಲಕ್ಷ ಜನ ವೀಕ್ಷಣೆ ಮಾಡಿದ್ದರು. ಈ ಮೂಲಕ ಒಂದೇ ಸಮಯಕ್ಕೆ ವಿಶ್ವ‌ದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡಿರುವ ವಿಡಿಯೋ ಎಂಬ ಹೆಗ್ಗಳಿಕೆಗೆ ‘ಚಂದ್ರಯಾನ-3’ ನೇರಪ್ರಸಾರ ಲೈವ್ ಸಾಕ್ಷಿಯಾಗಿದೆ.

ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದ ಯೋಜನೆಯಲ್ಲಿ ಇಸ್ರೋಗೆ ಯಶಸ್ಸು ಸಿಕ್ಕಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಸಂಸ್ಥೆಯ ಲ್ಯಾಂಡರ್ ‘ವಿಕ್ರಮ್’ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದೇ ಸಂದರ್ಭದಲ್ಲಿ ಸುಮಾರು 80 ಲಕ್ಷ ಜನರು ಜಗತ್ತಿನಾದ್ಯಂತ ಇಸ್ರೋ ಚಾನೆಲ್ ನೋಡಿದ್ದಾರೆ. ಈ ಮೂಲಕ ‘ಚಂದ್ರಯಾನ-3’ ನೇರಪ್ರಸಾರ ವಿಡಿಯೋ ಕಣ್ತುಂಬಿಕೊಂಡಿದ್ದರು. ಇದೀಗ ಈ ಕುರಿತು ಖುದ್ದು ಯುಟ್ಯೂಬ್ ಮುಖ್ಯಸ್ಥ ನೀಲ್‌ ಮೋಹನ್‌ ಇಸ್ರೋಗೆ ಅಭಿನಂದನೆ ತಿಳಿಸಿದ್ದಾರೆ.

ಯುಟ್ಯೂಬ್ ಕಡೆಯಿಂದ ಸ್ಪೆಷಲ್ ವಿಶ್

ಇಸ್ರೋ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಯುಟ್ಯೂಬ್ ಮುಖ್ಯಸ್ಥ ನೀಲ್‌ ಮೋಹನ್‌, ಸಾಮಾಜಿಕ ಜಾಲತಾಣ ಎಕ್ಸ್ ಅಂದರೆ ಈ ಹಿಂದಿನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ, ಇದನ್ನು ನೋಡಲು ಸಂತಸವಾಗುತ್ತಿದೆ, ಇಸ್ರೋ ತಂಡಕ್ಕೆ ಅಭಿನಂದನೆ. ಏಕಕಾಲಕ್ಕೆ 80 ಲಕ್ಷ ವೀಕ್ಷಣೆ ಸಾಮಾನ್ಯದ್ದಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಖುದ್ದು ಯುಟ್ಯೂಬ್ ಮುಖ್ಯಸ್ಥರೇ ಇಸ್ರೋಗೆ ಅಭಿನಂದನೆ ಸಲ್ಲಿಸಿದಂತೆ ಆಗಿದೆ. ಹಾಗೇ ಯುಟ್ಯೂಬ್ ಕೂಡ ಈ ಬಗ್ಗೆ ಸ್ಪೆಷಲ್ ವಿಶ್ ಮಾಡಿತ್ತು.

ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದ ಇಸ್ರೋ

ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಹೀಗಾಗಿ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು.

ಸಮತಟ್ಟು ಜಾಗದಲ್ಲಿ ಇಳಿದಿದ್ದ ಲ್ಯಾಂಡರ್

LPDC, LHDAC ಜತೆ ಲೇಸರ್ ಆಲ್ಟಿಮೀಟರ್ (LASA) & ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್‌ ಜತೆ ಕೆಲಸ ಮಾಡಿವೆ. ಈ ಮೂಲಕ ಸಮತಟ್ಟಾದ ಜಾಗದ ಮೇಲೆ, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಸಿದೆ ಇಸ್ರೋ. ಭಾರತದ ಈ ಸಾಧನೆಯನ್ನ ಜಗತ್ತಿನಲ್ಲೇ ಇದುವರೆಗೆ ಯಾವುದೇ ರಾಷ್ಟ್ರವೂ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ.

ಒಟ್ನಲ್ಲಿ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಡಿರುವ ಸಾಧನೆಗೆ ಇಡೀ ಜಗತ್ತೇ ಫಿದಾ ಆಗಿದೆ. ಇದೀಗ ಇನ್ನೊಂದು ಗರಿ ಸಿಕ್ಕಿದ್ದು, ಯುಟ್ಯೂಬ್ ಕೂಡ ಈ ಸಾಧನೆಗೆ ಫಿದಾ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಸೂರ್ಯಯಾನ ಯೋಜನೆ ಆದಿತ್ಯ ಎಲ್‌-1 ಕೂಡ ಅಂತಿಮ ಹಂತ ತಲುಪಲಿದ್ದು, ಇಡೀ ಜಗತ್ತೇ ಈ ಕ್ಷಣಕ್ಕಾಗಿ ಕಾಯುತ್ತಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಆಂಧ್ರ: ತಿರುಪತಿಗೆ ತೆರಳುತ್ತಿದ್ದ ಕ್ರೂಸರ್ ಲಾರಿಗೆ ಡಿಕ್ಕಿ: ಐವರು ಸಾವು, 11 ಮಂದಿಗೆ ಗಾಯ

Fri Sep 15 , 2023
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ತಿರುಪತಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕ್ರೂಸರ್ ಶುಕ್ರವಾರ ಬೆಳಗ್ಗೆ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹನ್ನೊಂದು ಮಂದಿ ಗಾಯಗೊಂಡಿದ್ದಾರೆ… ಅನ್ನಮಯ: ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ತಿರುಪತಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕ್ರೂಸರ್ ಶುಕ್ರವಾರ ಬೆಳಗ್ಗೆ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹನ್ನೊಂದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು […]

Advertisement

Wordpress Social Share Plugin powered by Ultimatelysocial