ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಮೂವರು ಮಾಜಿ ಆರ್​ಸಿಬಿ ಆಟಗಾರರು

 

 

ಪಿಎಲ್ 2023 ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರುಪಾಯಿಗೆ ಖರೀದಿ ಮಾಡುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಮಹೇಂದ್ರ ಸಿಂಗ್ ಧೋನಿ ಮತ್ತು ಬೆನ್‌ ಸ್ಟೋಕ್ಸ್ ಜೋಡಿ ಮತ್ತೆ ಒಂದಾಗಲಿದೆ.ಸಿಎಸ್‌ಕೆ ತಂಡಕ್ಕೆ ಈ ಬಾರಿ ಅಜಿಂಕ್ಯ ರಹಾನೆ ಕೂಡ ಸೇರ್ಪಡೆಯಾಗಿದ್ದು, ಧೋನಿ ಮತ್ತು ಅಜಿಂಕ್ಯ ರಹಾನೆ ಕೂಡ ಒಂದಾಗುತ್ತಿದ್ದಾರೆ. ಈ ಜೋಡಿ ಟೀಂ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. ಸ್ಟೋಕ್ಸ್, ಧೋನಿ, ರಹಾನೆ ಮೂವರು 2016 ಮತ್ತು 2017ರ ಐಪಿಎಲ್‌ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡಿದ್ದರು. ಸಿಎಸ್‌ಕೆ ತಂಡಕ್ಕೆ ಡ್ವೇನ್ ಬ್ರಾವೋ ಸ್ಥಾನವನ್ನು ಬೆನ್‌ ಸ್ಟೋಕ್ಸ್ ತುಂಬಲು ಸಾಧ್ಯವಿಲ್ಲ ಎಂದ ಆಕಾಶ್ ಚೋಪ್ರಾಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡ ಆಟಗಾರ ನಿಶಾಂತ್ ಸಿಂಧು ಕೂಡ ಈ ಬಾರಿ ಸಿಎಸ್‌ಕೆ ತಂಡ ಸೇರಿಕೊಂಡಿದ್ದಾರೆ. ನಿಶಾಂತ್ ಸಿಂಧು ಭವಿಷ್ಯದಲ್ಲಿ ರವೀಂದ್ರ ಜಡೇಜಾ ಸ್ಥಾನಕ್ಕೆ ಬ್ಯಾಕಪ್ ಆಟಗಾರ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.2023ರ ಮಿನಿ ಹರಾಜಿನಲ್ಲಿ ಸಿಎಸ್‌ಕೆ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರನೊಬ್ಬನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಸಿಎಸ್‌ಕೆ ತಂಡದಲ್ಲಿ ಈಗ ಮೂವರು ಮಾಜಿ ಆರ್​ಸಿಬಿ ಆಟಗಾರರು ಇದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕಾಡಾನೆ ತುಳಿತಕ್ಕೆ ವ್ಯಕ್ತಿಯ ಕಾಲು ಮುರಿತ..

Mon Dec 26 , 2022
ಚಾಮರಾಜನಗರ ಜಿಲ್ಲೆಯ ಹುತ್ತೂರು ಬಳಿ ನಡೆದ ಘಟನೆ. ಬೈಲೂರು ವಲಯದ ಕತ್ತೆಕಾಲ್ ಪೋಡ್ ಸಮೀಪ ಘಟನೆ ಸಂಭವಿಸಿದ್ದು, ಮಾದೇಶ್ (45) ಕಾಡಾನೆ ತುಳಿತಕ್ಕೆ ಒಳಗಾದ ವ್ಯಕ್ತಿ ಗಾಯಾಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…   Please follow and like us:

Advertisement

Wordpress Social Share Plugin powered by Ultimatelysocial