ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು!

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ ತೊಲಗಿಸಬಹುದು ಎಂಬುದು ನಿಮಗೆ ಗೊತ್ತೇ.?ನೀಲಗಿರಿ ಎಣ್ಣೆ ನಂಜು ನಿವಾರಕವಾಗಿಯೂ ಕೆಲಸ ಮಾಡುತ್ತದೆ.ತಲೆಯ ಹೇನು ತೆಗೆಯಲು ಇದನ್ನು ಆಲಿವ್ ಆಯಿಲ್ ಜೊತೆ ಹಚ್ಚುವುದರಿಂದ ಅದು ಹೇನುಗಳನ್ನು ಕೊಲ್ಲುತ್ತದೆ. 4 ಚಮಚ ಆಲಿವ್ ಆಯಿಲ್ ಗೆ ಹದಿನೈದು ಹನಿ ನೀಲಗಿರಿ ಎಣ್ಣೆ ಹಾಕಿ ನೆತ್ತಿಗೆ ಸೇರಿದಂತೆ ಸಂಪೂರ್ಣ ತಲೆಗೆ ಹಚ್ಚಿ. ಮೂರು ಗಂಟೆ ಬಳಿಕ ಸ್ನಾನ ಮಾಡಿ. ವಾರಕ್ಕೆರಡು ಬಾರಿ ಇದನ್ನು ಪ್ರಯತ್ನಿಸಬಹುದು.ಆಲಿವ್ ಎಣ್ಣೆಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿಯೂ ನೀವು ಪರಿಣಾಮಕಾರಿ ಪ್ರಯೋಜನವನ್ನು ಪಡೆಯಬಹುದು. ಇದರ ಬಳಕೆಯಿಂದ ಹೇನು ಮತ್ತು ಅದರ ಮೊಟ್ಟೆಗಳು ಇಲ್ಲವಾಗುತ್ತವೆ. ಒಂದು ಚಮಚ ಆಲಿವ್ ಎಣ್ಣೆಗೆ ಎರಡು ಚಮಚ ಎಳ್ಳೆಣ್ಣೆ ಸೇರಿಸಿ ಹಚ್ಚಿ ರಾತ್ರಿ ಮಲಗಿ. ಬೇಕಿದ್ದರೆ ಶವರ್ ಕ್ಯಾಪ್ ಧರಿಸಿ. ಮುಂಜಾನೆ ಎದ್ದು ಸ್ನಾನ ಮಾಡಿ. ಉತ್ತಮ ಶ್ಯಾಂಪೂ ಬಳಸಿ. ದೇವರ ದೀಪಕ್ಕೆ ಬಳಸುವ ಎಳ್ಳೆಣ್ಣೆ ಬಳಕೆ ಸಲ್ಲದು. ಹೇನಿಗೆಂದೇ ಮೆಡಿಕಲ್ ಗಳಲ್ಲಿ ಸಿಗುವ ಔಷಧಗಳನ್ನು ಬಳಸದಿರಿ. ಅದರಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:14 ತಿಂಗಳಿನಿಂದ ಕ್ವಾರಂಟೈನ್ ಮಾಡಲ್ಪಟ್ಟ,ವ್ಯಕ್ತಿ;

Fri Feb 11 , 2022
ಕರೋನಾ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, 40 ಕೋಟಿ ಗಡಿ ದಾಟಿದೆ. ಇಲ್ಲಿಯವರೆಗೆ, ಕರೋನಾ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಏತನ್ಮಧ್ಯೆ, ಒಬ್ಬ ವ್ಯಕ್ತಿಯು ಒಮ್ಮೆ ಅಥವಾ ಎರಡು ಬಾರಿ ಅಲ್ಲ, 78 ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾನೆ. ಈ ಘಟನೆ ಸಂಚಲನ ಮೂಡಿಸಿದೆ. ಟರ್ಕಿಯಲ್ಲಿ ಒಬ್ಬ ವ್ಯಕ್ತಿ ಕಳೆದ 14 ತಿಂಗಳಲ್ಲಿ 78 ಬಾರಿ ಕರೋನಾಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಒಂದು ವರ್ಷದಿಂದ ಅವರು ಐಸೋಲೇಶನ್‌ನಲ್ಲಿದ್ದಾರೆ. […]

Advertisement

Wordpress Social Share Plugin powered by Ultimatelysocial